ಕಿಂಗ್​ ಕೋಹ್ಲಿಯನ್ನು ಹೊಗಳಿದ ಶಾಸ್ತ್ರಿ: ಸೇನಾ ದೇಶಗಳಲ್ಲಿ ನಮ್ಮ ಸಾಧನೆ ಅವಿಸ್ಮರಣೀಯ| Virat Kohli

ravi shastri for web
Published on

Virat Kohli: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತವು ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ರಬಲ ಶಕ್ತಿಯಾಗಿತ್ತು. ಕೊಹ್ಲಿ ನಾಯಕನಾಗಿ ತಂಡವನ್ನು ಆದ್ಭುತವಾಗಿ ಮುನ್ನಡೆಸಿದರು ಎಂದು ಭಾರತ ತಂಡದ ಮಾಜಿ ಕೋಚ್​ ರವಿ ಶಾಸ್ತ್ರಿ ಹೊಗಳಿದ್ದಾರೆ.

ಈ ಬಗ್ಗೆ ಸ್ಕೈ ಸ್ಪೋರ್ಟ್ಸ್‌ ಜತೆ ಮಾತನಾಡಿದ ಶಾಸ್ತ್ರಿ, ಕೋಹ್ಲಿ ನಾಯಕತ್ವದಲ್ಲಿ ಸತತ ಐದು ವರ್ಷ ಭಾರತ ಟೆಸ್ಟ್​ ಱಂಕಿಂಗ್​ನಲ್ಲಿ​ ನಂ.1 ಆಗಿತ್ತು. ಭಾರತವು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ಗಳಲ್ಲಿ ಅವಿಸ್ಮರಣೀಯ ಗೆಲುವುಗಳನ್ನು ದಾಖಲಿಸಿತ್ತು ಎಂದು ಹೇಳಿದ್ದಾರೆ.

ಆ ಸಮಯ ಅದ್ಭುತವಾಗಿತ್ತು. ನಾನು ತಂಡವನ್ನು ಮುನ್ನಡೆಸುವ ಏಕೈಕ ವ್ಯಕ್ತಿ ವಿರಾಟ್​ನನ್ನು ಗುರುತಿಸಿದೆ, ಮತ್ತು ಕೋಹ್ಲಿ ತಂಡವನ್ನು ಮುನ್ನಡೆಸಬೇಕೆಂದು ನಾನು ಬಯಸಿದ್ದೆ. ನಾನು ಕೋಚ್​ ಕೆಲಸವನ್ನು ವಹಿಸಿಕೊಂಡ ನಂತರ, ಧೋನಿ ನಾಯಕತ್ವಕ್ಕೆ ವಿದಾಯ ಹೇಳಿದರು. ವಿರಾಟ್​ ಬ್ಯಾಟ್ಸ್‌ಮನ್ ಆಗಿ ಅವನಿಗಿದ್ದ ಕೌಶಲ್ಯಗಳು, ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವಿತ್ತು. ಅಲ್ಲದೆ, ಕಠಿಣ ಪಿಚ್​ಗಳಲ್ಲಿ ಆಡುವುದು ಮತ್ತು ಸದಾ ಗೆಲ್ಲಲು ವಿರಾಟ್​ ಪ್ರಯತ್ನಿಸುತ್ತಿದ್ದರು ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಶಾಸ್ತ್ರಿ, ಐಸಿಸಿ ಟೂರ್ನಿಗಳಲ್ಲಿ ನಾವು ಸೋತಿದ್ದೇವೆ. ಆದರೆ ನನಗೆ ಯಾವುದೇ ವಿಷಾದವಿಲ್ಲ. ನಾವು ಸ್ವಲ್ಪ ದುರದೃಷ್ಟವಂತರು ಎಂದು ಹೇಳಬಹುದು. ನಾವು ಐಸಿಸಿ ಟ್ರೋಫಿಯನ್ನು ಗೆಲ್ಲಬೇಕಿತ್ತು ಎಂದು ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ, ರೋಹಿತ್ ಶರ್ಮಾ ಮತ್ತು ಕೊಹ್ಲಿಯಂತಹ ಆಟಗಾರರಿಲ್ಲದೆ ಭಾರತ ಉತ್ತಮ ಪ್ರದರ್ಶನ ನೀಡಿದೆ. ಶುಭಮನ್ ಗಿಲ್ ಯುವ ತಂಡವನ್ನು 2-2 ಡ್ರಾಕ್ಕೆ ಮುನ್ನಡೆಸಿದರು ಮತ್ತು ನಾಯಕ ಸ್ವತಃ ಸರಣಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಶ್ನೆಯಿಲ್ಲ ಗಿಲ್ ದೀರ್ಘಕಾಲದ ವರೆಗೂ ಇರುತ್ತಾರೆ ಎಂದು ಶಾಸ್ತ್ರಿ ಯುವ ಆಟಗಾರನ ಬಗ್ಗೆ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net