ದೇಶ ವಿಭಜನೆಯ ದುರಂತ: ಆಗಸ್ಟ್​ 14 ರಂದು ಅಖಂಡ ಭಾರತದಲ್ಲಿ ಆಗಿದ್ದೇನು..?| Partition

The tragedy of Partition
Published on

Partition: 1947ರ ಆಗಸ್ಟ್ 14 ಭಾರತದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ದಿನ. ಈ ದಿನದಂದು, ಭಾರತ ವಿಭಜನೆಯಾಯಿತು. ಪಾಕಿಸ್ತಾನ ಎಂಬ ಹೊಸ ರಾಷ್ಟ್ರ ಉಗಮವಾಯಿತು. ಈ ದೇಶದ ವಿಭಜನೆಯು ಕೋಟ್ಯಂತರ ಜನರ ಜೀವನವನ್ನು ಶಾಶ್ವತವಾಗಿ ಬದಲಾಗುವಂತೆ ಮಾಡಿತು. ಭಾರತವು ಶತಮಾನದ ಅತಿದೊಡ್ಡ ಕೋಮು ಗಲಭೆಯ ಹೊಡೆತವನ್ನು ಅನುಭವಿಸಿತು. ಈ ದಿನ ನಡೆದ ಘಟನೆಗಳು ದಕ್ಷಿಣ ಏಷ್ಯಾದ ಭೌಗೋಳಿಕತೆಯ ಜತೆಗೆ ಇತಿಹಾಸವನ್ನು ಬದಲಾಯಿಸಿತು.

1947 ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ಲಕ್ಷಾಂತರ ಜನ ಮಂದಿ ಮೃತರಾದರು. ಈ ಹೋರಾಟಗಳು ಮತ್ತು ತ್ಯಾಗಗಳನ್ನು ಸ್ಮರಿಸಲು ಭಾರತ ಪ್ರತಿ ವರ್ಷ ಆಗಸ್ಟ್ 14 ರಂದು 'ವಿಭಜನಾ ಭಯಾನಕ ಸ್ಮರಣ ದಿನವನ್ನು ಆಚರಿಸುತ್ತದೆ. 1947 ರಲ್ಲಿ ಬ್ರಿಟಿಷ್ ಆಡಳಿತದಿಂದ ಭಾರತ ವಿಭಜನೆಯಾದ ನಂತರ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ವಿಭಜಿಸಲ್ಪಟ್ಟಿತು.

1947ರ ಆಗಸ್ಟ್ 14 ರಂದು ನಡೆದ ಪ್ರಮುಖ ಘಟನೆಗಳು

1. ಆಗಸ್ಟ್ 1947ರ 14 ರಂದು, ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಕರಾಚಿಗೆ ಪ್ರಯಾಣ ಬೆಳೆಸಿದರು. ಪಾಕಿಸ್ತಾನದ ಸಂವಿಧಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಮಯದಲ್ಲಿ, ಅಧಿಕಾರ ವರ್ಗಾವಣೆಯ ಪ್ರಕ್ರಿಯೆಯು ಪೂರ್ಣಗೊಂಡಿತು. ಕರಾಚಿಯನ್ನು ಪಾಕ್​ನ ಹೊಸ ರಾಜಧಾನಿಯಾಗಿ ಘೋಷಿಸಲಾಯಿತು.

2. ಮುಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನದ ಮೊದಲ ಗವರ್ನರ್-ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಪ್ರಮಾಣ ವಚನ ಸ್ವೀಕಾರದೊಂದಿಗೆ, ಬ್ರಿಟಿಷ್ ಕಾಮನ್ವೆಲ್ತ್​​ಗೆ ಪಾಕ್​ ಅಧಿಕೃತವಾಗಿ ಪ್ರವೇಶ ಪಡೆಯಿತು.

3. ವಿಭಜನೆಯ ಅಧಿಕೃತ ಘೋಷಣೆಗೂ ಮೊದಲೇ, ದೊಡ್ಡ ಪ್ರಮಾಣದ ವಲಸೆ ಮತ್ತು ಕೋಮು ಹಿಂಸಾಚಾರ ಆರಂಭವಾಗಿ, ಆಗಸ್ಟ್ 14 ರಂದು ಹಿಂಸೆ ಇಮ್ಮಡಿಯಾಯಿತು. ಪಾಕಿಸ್ತಾನದಿಂದ ಹಿಂದೂಗಳ ಸಾಮೂಹಿಕ ಭಾರತಕ್ಕೆ ವಲಸೆ ಬರುತ್ತಿದ್ದರು. ಲಕ್ಷಾಂತರ ಕುಟುಂಬಗಳು ತಮ್ಮ ಮನೆಗಳನ್ನು ಆಲ್ಲೇ ಬಿಟ್ಟು ಬರುವ ಆಘಾತ ಅನುಭವಿಸುತ್ತಿದ್ದರು.

4. ಇದು ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ವಲಸೆಯಾಗಿದ್ದು, ಹೊಸದಾಗಿ ವಿಭಜನೆಯಾದ ರಾಷ್ಟ್ರಗಳಲ್ಲಿ ಲಕ್ಷಾಂತರ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರು ಸುರಕ್ಷತೆಗೆ ಒತ್ತಾಯಿದರು. ರೈಲುಗಳು, ಎತ್ತಿನ ಬಂಡಿಗಳು ಅಥವಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ವಲಸಿಗರು ಆಗಾಗ್ಗೆ ಪಾಕ್​ ಸೇನೆಯಿಂದ ಕ್ರೂರ ದಾಳಿಗಳನ್ನು ಎದುರಿಸಬೇಕಾಯಿತು, ಇದು ಭಯಾನಕ ರಕ್ತಪಾತಕ್ಕೆ ಕಾರಣವಾಯಿತು.

The tragedy of Partition 33

5. 1947ರಲ್ಲಿ ಬ್ರಿಟಿಷ್ ಭಾರತವು 565 ರಾಜಪ್ರಭುತ್ವದ ರಾಜ್ಯಗಳನ್ನು ಒಳಗೊಂಡಿತ್ತು, ಅವುಗಳಲ್ಲಿ ಹೆಚ್ಚಿನವು ಆಗಸ್ಟ್ 14 ರೊಳಗೆ ಭಾರತಕ್ಕೆ ಸೇರಬೇಕೆ ಅಥವಾ ಪಾಕಿಸ್ತಾನಕ್ಕೆ ಸೇರಬೇಕೆ ಎಂದು ನಿರ್ಧರಿಸಿದ್ದವು. ಆದರೆ ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್ ಮತ್ತು ಜುನಾಗಢದಂತಹ ಪ್ರಮುಖ ರಾಜಪ್ರಭುತ್ವದ ರಾಜ್ಯಗಳ ಭವಿಷ್ಯ ಇನ್ನೂ ನಿಧಾರ್ರವಾಗಿರಲಿಲ್ಲ. ಇದು ನಂತರದ ದಿನಗಳಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು.

6. ಪಾಕಿಸ್ತಾನ ಆಗಸ್ಟ್ 14 ರಂದು ತನ್ನ ಸ್ವಾತಂತ್ರ್ಯವನ್ನು ಆಚರಿಸಿದರೆ, ಮರುದಿನ ಆಗಸ್ಟ್ 15 ರಂದು ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿಯಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು.

7. ಆಗಸ್ಟ್ 14 ಪಾಕಿಸ್ತಾನವು ಹೊಸ ರಾಷ್ಟ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ದಿನವಾಗಿದ್ದರೆ, ಲಕ್ಷಾಂತರ ಜನರಿಗೆ, ಇದು ವಿಭಜನೆ, ಸ್ಥಳಾಂತರ ಮತ್ತು ಹಿಂಸಾಚಾರದ ದಿನವಾಗಿತ್ತು. ಆಗಸ್ಟ್ 14 ರಂದು ನಡೆದ ಘಟನೆಗಳು ದಕ್ಷಿಣ ಏಷ್ಯಾದ ಭೌಗೋಳಿಕತೆ ಮತ್ತು ಇತಿಹಾಸವನ್ನು ಶಾಶ್ವತವಾಗಿ ಬದಲಾಯಿಸಿತು.

2021 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮಾರಕ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ್ದರು. ಆಗಸ್ಟ್ 14, 2021 ರಂದು, ಗೃಹ ಸಚಿವಾಲಯವು ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣಾರ್ಥ ದಿನವೆಂದು ಘೋಷಿಸುವ ಗೆಜೆಟ್ ಅನ್ನು ಹೊರಡಿಸಿತು. ಇದು ಭಾರತದ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ವಿಭಜನೆಯ ಸಮಯದಲ್ಲಿ ಜನರು ಅನುಭವಿಸಿದ ಚಿತ್ರಹಿಂಸೆ ಮತ್ತು ಯಾತನೆಯನ್ನು ನೆನಪಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net