

ಸೆಂಚುರಿಯನ್: ಭಾರತ ತಂಡದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಶನಿವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಭುಜಕ್ಕೆ ಚೆಂಡೇಟು ತಿಂದು ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ದ. ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಸ್ಕಾ$ನಿಂಗ್ ವರದಿ ಬಂದ ಬಳಿಕವೇ ಗಾಯದ ಗಂಭೀರತೆ ಸ್ಪಷ್ಟವಾಗಲಿದೆ.
ಬ್ಯಾಟಿಂಗ್ ವೇಳೆ ಆದ ಈ ಗಾಯದಿಂದಾಗಿ ಶಾರ್ದೂಲ್ಗೆ ನಂತರ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಸೆಂಚುರಿಯನ್ ಟೆಸ್ಟ್ನಲ್ಲೂ ಶಾರ್ದೂಲ್ ಮೊದಲ ಇನಿಂಗ್ಸ್ನಲ್ಲಿ ತಲೆಗೆ ಚೆಂಡೇಟು ತಿಂದಿದ್ದರು. ಮೊದಲ ಟೆಸ್ಟ್ನಲ್ಲಿ 19 ಓವರ್ ಎಸೆದಿದ್ದ ಶಾರ್ದೂಲ್ 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದಿದ್ದರು.
ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಸದ್ಯ 0-1 ಹಿನ್ನಡೆಯಲ್ಲಿದ್ದು, ಜನವರಿ 3ರಿಂದ ಕೇಪ್ಟೌನ್ನಲ್ಲಿ ನಡೆಯಲಿರುವ ಪಂದ್ಯ ಗೆದ್ದು ಕನಿಷ್ಠ ಸರಣಿ ಸಮಬಲದ ಸಮಾಧಾನ ಕಾಣುವ ತವಕದಲ್ಲಿದೆ.
ಕೇಪ್ಟೌನ್ನಲ್ಲಿ ಹೊಸ ವರ್ಷಾಚರಣೆ
ಟೀಮ್ ಇಂಡಿಯಾ ಆಟಗಾರರು ಶನಿವಾರ ಸೆಂಚುರಿಯನ್ನಲ್ಲೇ ಅಭ್ಯಾಸ ನಡೆಸಿದ್ದು, ಭಾನುವಾರ ಕೇಪ್ಟೌನ್ಗೆ ಪ್ರಯಾಣಿಸಲಿದ್ದಾರೆ ಮತ್ತು ಅಲ್ಲೇ ಸರಳವಾಗಿ ಹೊಸ ವರ್ಷಾಚರಣೆ ನಡೆಸಲಿದೆ. ಆದರೆ ಹೋಟೆಲ್ನಿಂದ ಹೊರಗೆ ಹೋಗಿ ಹೊಸ ವರ್ಷದ ಸಂಭ್ರಮ ಆಚರಿಸಲು ಆಟಗಾರರಿಗೆ ಅನುಮತಿ ನೀಡಲಾಗಿಲ್ಲ. ದಣ ಆಫ್ರಿಕಾದಲ್ಲಿ ದರೋಡೆ, ಕಳ್ಳತನ, ಪಿಕ್ಪಾಕೆಟಿಂಗ್ ಮುಂತಾದ ಸ್ಟ್ರೀಟ್ ಕೆಮ್ ಹೆಚ್ಚಿವೆ. ಹೀಗಾಗಿ ಭದ್ರತಾ ಕಾರಣಗಳಿಂದಾಗಿ ಆಟಗಾರರಿಗೆ ಹೊರಗೆ ಪ್ರತ್ಯೇಕವಾಗಿ ಸುತ್ತಾಟ ನಡೆಸಲು ಅವಕಾಶ ನೀಡಲಾಗುತ್ತಿಲ್ಲ.