

ಸೆಂಚುರಿಯನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಹೀನಾಯ ಸೋಲಿಗೆ ಬೌಲರ್ಗಳನ್ನು ದೂರಿದ್ದಾರೆ. ಭಾರತ ತಂಡ ಮೂರೇ ದಿನಗಳಲ್ಲಿ ಇನಿಂಗ್ಸ್ ಮತ್ತು 32 ರನ್ಗಳಿಂದ ಸೋಲು ಅನುಭವಿಸಿತ್ತು.
ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾಗೆ ಇತರ ಬೌಲರ್ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂದಿರುವ ರೋಹಿತ್, ದ. ಆಫ್ರಿಕಾಕ್ಕೆ ಮೊದಲ ಇನಿಂಗ್ಸ್ನಲ್ಲಿ 400 ರನ್ ಬಿಟ್ಟುಕೊಡುವಂಥ ಪಿಚ್ ಇದಾಗಿರಲಿಲ್ಲ ಎಂದಿದ್ದಾರೆ.
"ಬುಮ್ರಾ ಬೌಲಿಂಗ್ ಉತ್ತಮವಾಗಿಯೇ ಇತ್ತು. ಆದರೆ ಅವರಿಗೆ ಇತರ ಮೂವರು ವೇಗಿಗಳಿಂದ (ಶಾರ್ದೂಲ್, ಪ್ರಸಿದ್ಧ ಕೃಷ್ಣ, ಸಿರಾಜ್) ಅಗತ್ಯ ಬೆಂಬಲ ಸಿಗಲಲ್ಲ. ಇಂಥ ಪಂದ್ಯಗಳು ನಮಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತವೆ' ಎಂದು ರೋಹಿತ್ ಹೇಳಿದ್ದಾರೆ.