ನಾವಿಲ್ಲಿರೋದು ಅನ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದಿಕ್ಕಲ್ಲ: ಸೆಹ್ವಾಗ್​ ಹೇಳಿಕೆಗೆ ಶಕೀಬ್ ತಿರುಗೇಟು!

Untitled design - 2024-06-14T115804.191
Published on

ಅಮೆರಿಕಾ: ನಿನ್ನೆ (ಜೂ.13) ಅರ್ನೋಸ್​ ವಾಲೆ ಸ್ಟೇಡಿಯಂನಲ್ಲಿ ನಡೆದ ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯದಲ್ಲಿ 25 ರನ್​ಗಳಿಂದ ಬಾಂಗ್ಲಾದೇಶ ಭರ್ಜರಿ ಜಯ ಗಳಿಸಿತು. ಇನ್ನು ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ಶಕೀಬ್ ಅಲ್ ಹಸನ್​, ಅಜೇಯ 64 ರನ್​ ಸಿಡಿಸಿ, ನೆದರ್​ಲ್ಯಾಂಡ್ಸ್​ ವಿರುದ್ಧದ ಗೆಲುವಿಗೆ ಪ್ರಮುಖ ಕಾರಣರಾದರು. ಅತ್ಯುತ್ತಮ ಬ್ಯಾಟಿಂಗ್ ಕೊಡುಗೆ ನೀಡಿದ್ದಕ್ಕೆ ತಂಡದ ಆಟಗಾರನಾಗಿ ಶಕೀಬ್​ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು  ಸ್ವೀಕರಿಸಿದರು.

ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಶಕೀಬ್​ರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಂದೇ ಕೈಬಿಡಬೇಕಿತ್ತು. ಅವರನ್ನು ಆಡಿಸುವ ಅವಶ್ಯಕತೆ ಇರಲಿಲ್ಲ. ನನ್ನ ಪ್ರಕಾರ, ಶಕೀಬ್ ಅಲ್​ ಹಸನ್​ ಕ್ರಿಕೆಟ್​ನಿಂದ ನಿವೃತ್ತಿ ಪಡೆಯುವುದೇ ಉತ್ತಮ ಎಂದು ಲೇವಡಿ ಮಾಡಿದ್ದರು. ಇನ್ನು ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಶಕೀಬ್​, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಅವರ ಈ ಹೇಳಿಕೆಗೆ ತಮ್ಮ ಶೈಲಿಯಲ್ಲೇ ಉತ್ತರಿಸಿದ್ದು ಮಾತ್ರ ಸದ್ಯ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದೆ.

ಇನ್ನು ವೀರು ಹೇಳಿಕೆಗೆ ಸಿಟ್ಟಾಗಿದ್ದ ಹಸನ್​, ತನ್ನ ಸಮಯಕ್ಕಾಗಿ ಕಾದು ಕುಳಿತಿದ್ದರು ಎಂಬುದು ಪಂದ್ಯ ಮುಗಿದ ಬಳಿಕ ಮಾತನಾಡಿದ ಶೈಲಿಯಿಂದಲೇ ತಿಳಿದುಬಂದಿದೆ. "ಆಟಗಾರರು ಇತರರ ಪ್ರಶ್ನೆಗಳಿಗೆ ಉತ್ತರಿಸಲು ಆಡುತ್ತಿಲ್ಲ. ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಜವಾಬ್ದಾರಿಯಿಂದ ಅಷ್ಟೇ. ಅದು ಒಬ್ಬ ಬ್ಯಾಟ್ಸ್​ಮನ್​, ಬೌಲರ್ ಅಥವಾ ಫೀಲ್ಡರ್​ ಆಗಿಯೂ ಇರಬಹುದು. ಕೊಡುಗೆ ನೀಡುವಲ್ಲಿ ವಿಫಲರಾದರೆ, ತಮ್ಮ ಫಾರ್ಮ್​ ಬಗ್ಗೆ ಇಂತಹ ಟೀಕೆಗಳು ಕೇಳಿಬರುವುದು ಸಾಮಾನ್ಯ" ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net