ಕಡೆಗೂ ಯಶಸ್ವಿ ಜೈಸ್ವಾಲ್ ಆಸೆ ಈಡೇರಿಸಿದ ಕಿಂಗ್ ಖಾನ್​! ಆರ್​ಆರ್​ ಓಪನರ್​ ಖುಷಿ ಹೇಳತೀರದು…

WhatsApp Image 2024-04-17 at 7.58.15 PM
Published on

ಕೊಲ್ಕತ್ತಾ: ನಿನ್ನೆ (ಏ.17) ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2024ರ ರಾಜಸ್ಥಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಗಳ ನಡುವೆ ಭಾರೀ ಹಣಾಹಣಿ ನಡೆಯಿತು. 223 ರನ್​ಗಳನ್ನು ಚೇಸ್​ ಮಾಡಿ ಎರಡು ವಿಕೆಟ್​ಗಳ ಅಂತರದಿಂದ ಆರ್​ಆರ್​ ಗೆದ್ದು ಬೀಗಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ, ಕ್ರಿಕೆಟ್ ಫ್ಯಾನ್ಸ್​ಗಳನ್ನು ಬೆರಗುಗೊಳಿಸಿತು.

ರಾಜಸ್ಥಾನ ತಂಡದ ಆರಂಭಿಕ ಬ್ಯಾಟ್ಸ್​​ಮನ್​ ಆದ ಯಶಸ್ವಿ ಜೈಸ್ವಾಲ್ ಸದ್ಯ ತಮ್ಮ ಬ್ಯಾಟಿಂಗ್ ವೈಖರಿಯಿಂದಲೇ ಎಲ್ಲರ ಗಮನಸೆಳೆದಿದ್ದು, ಪಂದ್ಯ ಮುಗಿದ ಕೂಡಲೇ ತಮ್ಮದೊಂದು ಆಸೆಯನ್ನು ಈಡೇರಿಸಿಕೊಳ್ಳಲು ಬಯಸಿದರು. ಬಾಲಿವುಡ್​ನ ಕಿಂಗ್ ಖಾನ್, ಸೂಪರ್‌ಸ್ಟಾರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾದ ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಜೈಸ್ವಾಲ್ ಬಹಳ ಉತ್ಸುಕರಾಗಿದ್ದರು.

ಕಡೆಗೂ ಜೈಸ್ವಾಲ್ ಆಸೆಯನ್ನು ಶಾರೂಖ್ ಖಾನ್ ಯಶಸ್ವಿಗೊಳಿಸಿದರು. ಪಂದ್ಯ ಮುಗಿದ ಬಳಿಕ ಮೈದಾನಕ್ಕೆ ಇಳಿದು ಬಂದ ಶಾರುಖ್, ಜೈಸ್ವಾಲ್​ಗೆ ಕೈಮಿಲಾಯಿಸಿ, ಪ್ರೀತಿಯ ಅಪ್ಪುಗೆ ನೀಡಿದರು. ತನ್ನನ್ನು ನೋಡುತ್ತಿದ್ದಂತೆ ಕಣ್ತುಂಬಿಕೊಂಡ ಯಶಸ್ವಿಯ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಕಿಂಗ್ ಖಾನ್, ಕೆಲವು ನಿಮಿಷಗಳು ಮಾತನಾಡಿ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಬಟ್ಲರ್ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಅಬ್ಬರಿಸಲು ಪ್ರಾರಂಭಿಸಿ ಯಶಸ್ವಿ ಜೈಸ್ವಾಲ್, 36 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು. ಇನ್ನು ಕಡೆಯ 2 ಓವರ್‌ಗಳಲ್ಲಿ 28 ರನ್‌ಗಳ ಅಗತ್ಯವಿದ್ದಾಗ, ಬಟ್ಲರ್​ 19ನೇ ಎಸೆತದಲ್ಲಿ 19 ರನ್‌ಗಳನ್ನು ತೆಗೆದುಕೊಂಡರು ಮತ್ತು ಕೊನೆಯ 9 ರನ್‌ಗಳನ್ನು ಸುಲಭವಾಗಿ ತಲುಪಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net