

ನ್ಯೂಯಾರ್ಕ್: ಜೂ. 01ರಿಂದ ಪ್ರಾರಂಭವಾದ ಐಸಿಸಿ ಟಿ20 ವಿಶ್ವಕಪ್ ಪಂದ್ಯವಾಳಿಗಳಲ್ಲಿ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ತಂಡಗಳೇ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ವ್ಯಾಪಕ ಟೀಕೆಗಳಿಗೆ ಗುರಿಯಾಗುತ್ತಿವೆ. ಆ ಪೈಕಿ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡ ಮುಂಚೂಣಿಯಲ್ಲಿದೆ. ಮೊದಲ ಪಂದ್ಯದಿಂದಲೂ ಹೀನಾಯ ಸೋಲನ್ನು ಕಂಡ ಪಾಕ್ಗೆ ಭಾರತ ವಿರುದ್ಧವೂ ಭಾರೀ ಮುಖಭಂಗ ಉಂಟಾಯಿತು.
ಇನ್ನು ಯುಎಸ್ಎ ಮತ್ತು ಐರ್ಲೆಂಡ್ ನಡುವಿನ ಪಂದ್ಯಕ್ಕೆ ಭಾರೀ ಮಳೆ ಉಂಟಾದ ಕಾರಣ ಗ್ರೂಪ್ ಸ್ಟೇಜ್ ಟೂರ್ನಿಯಿಂದ ಇದೀಗ ಪಾಕ್ ತಂಡ ಮೊದಲೇ ನಿರ್ಗಮಿಸುವಂತಾಗಿದೆ. ಸದ್ಯ ಈ ವಿಷಯವನ್ನು ಮುಂದಿಟ್ಟು ಕ್ಯಾಪ್ಟನ್ ಬಾಬರ್ ಆಜಂರನ್ನು ಟೀಕಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನಗೆ ನೀಡಿದ ಕ್ಯಾಪ್ಟನ್ಸಿ ಆಫರ್ನ ಶಾಹೀನ್ಗೆ ಕೊಡಬಹುದಿತ್ತು ಎಂದಿದ್ದಾರೆ.
“ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಟಿ20 ವಿಶ್ವಕಪ್ ಅಂತ್ಯದವರೆಗೆ ಶಾಹೀನ್ ಆಫ್ರಿದಿಯನ್ನು ನಾಯಕನಾಗಿ ಮಾಡುಲು ನಿರ್ಧಾರ ಮಾಡಿದಿದ್ದರೆ, ಖಂಡಿತವಾಗಿ ಅದನ್ನು ಬಾಬರ್ ದೃಢವಾಗಿ ಒಪ್ಪಿಕೊಳ್ಳಬೇಕಿತ್ತು. ತಾವು ಮತ್ತು ತಂಡವು ಶಾಹೀನ್ ನಾಯಕತ್ವದಲ್ಲಿ ಆಡಲು ಸಿದ್ಧರಿರುವುದಾಗಿ ಬಾಬರ್ ಬಾಯ್ಬಿಟ್ಟು ಹೇಳಬಹುದಿತ್ತು. ತನಗೆ ಕೊಟ್ಟ ಕ್ಯಾಪ್ಟನ್ಸಿ ಸ್ಥಾನದಿಂದ ಹಿಂದುಳಿಯಬಹುದಿತ್ತು. ಆದ್ರೆ, ಅದನ್ನು ಬಿಟ್ಟು ಇಂದು ಪಾಕ್ನ ಸರಣಿ ಸೋಲಿಗೆ ಕಾರಣರಾಗಿ ಕುಳಿತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ಶಾಹೀನ್ಗೆ ಕ್ಯಾಪ್ಟನ್ ಸ್ಥಾನ ಕೊಟ್ಟು, ಆತನ ನಾಯಕತ್ವದಡಿ ಬಾಬರ್ ಆಡಿದಿದ್ದರೆ, ಖಂಡಿತ ನಾನು ಖುಷಿಪಡುತ್ತಿದೆ. ಬಾಬರ್ ಆಜಂ ಮೇಲಿನ ಗೌರವ ಮತ್ತಷ್ಟು ಹೆಚ್ಚುತ್ತಿತ್ತು ಎಂದಿದ್ದಾರೆ. ಸದ್ಯ ಪಾಕ್ಗೆ ನಾಯಕನಾಗಿ ಅಧಿಕಾರ ಸ್ವೀಕರಿಸಿದ್ದೇ ತಾನು ಮಾಡಿದ ದೊಡ್ಡ ತಪ್ಪು ಎನ್ನುವಂತಾಗಿದೆ ಬಾಬರ್ ಪರಿಸ್ಥಿತಿ. ಮಾಜಿ ಕ್ರಿಕೆಟಿಗರ ಪೈಕಿ ಪಾಕ್ನ ಹಿರಿಯ ಆಟಗಾರರೇ ಪಾಕಿಸ್ತಾನ ತಂಡಕ್ಕೆ ವ್ಯಾಪಕ ಟೀಕೆ ವ್ಯಕ್ತಪಡಿಸಿರುವುದು ಆಶ್ಚರ್ಯ!,(ಏಜೆನ್ಸೀಸ್).