ಯುವರಾಜ್​ ಸಿಂಗ್​ ಪ್ರತಿಷ್ಠಾನಕ್ಕೆ 10 ಸಾವಿರ ಡಾಲರ್​ ದೇಣಿಗೆ ನೀಡಿದ ಶಾಹೀದ್​ ಅಫ್ರಿದಿ, ಪಾಕ್​ ಪತ್ರಕರ್ತನ ಟ್ವೀಟ್​

shaid afridi yuvi strong
Published on

ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶಾಹೀದ್​ ಅಫ್ರಿದಿ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅವರ ಪ್ರತಿಷ್ಠಾನಕ್ಕೆ 10 ಸಾವಿರ ಡಾಲರ್​ ದೇಣಿಗೆ ನೀಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಕೆನಡಾದಲ್ಲಿರುವ ಯುವಿ ಪ್ರತಿಷ್ಠಾನಕ್ಕೆ ಶಾಹೀದ್​ ಆಫ್ರಿದಿ ದೇಣಿಗೆ ನೀಡಿದ್ದ ಸಂಗತಿಯನ್ನು ಪಾಕಿಸ್ತಾನದ ಪತ್ರಕರ್ತ ಸಾಜ್​ ಸಾದಿಕ್​ ಟ್ವಿಟರ್​ನಲ್ಲಿ ಬಹಿರಂಗಪಡಿಸಿದ್ದಾರೆ.

ಕೆಲದಿನಗಳ ಹಿಂದೆ ಕರೊನಾ ವಿರುದ್ಧದ ಹೋರಾಟಕ್ಕಾಗಿ ಪಾಕಿಸ್ತಾನದ ಶಾಹೀದ್​ ಆಫ್ರಿದಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವಂತೆ ಯುವರಾಜ್​ ಸಿಂಗ್​ ಮತ್ತು ಭಾರತದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಪ್ರಚಾರ ಮಾಡಿದ್ದರು. ಭಾರತದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧ ಸಂಪೂರ್ಣ ಹಳಸಿದೆ. ಇದರಿಂದಾಗಿ ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ, ಬೇರಾವುದೇ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸುತ್ತದೆ. ಹೀಗಿರುವಾಗ ಶಾಹೀದ್​ ಆಫ್ರಿದಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡುವಂತೆ ಭಾರತದ ಮಾಜಿ ಆಟಗಾರರು ಪ್ರಚಾರ ಮಾಡಿದ್ದು ಭಾರತೀಯರೆಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net