More

    ಭಾರತದ ವಿರಾಟ್​ ಕೊಹ್ಲಿ ಪರಿಪೂರ್ಣ ಪ್ಯಾಕೇಜ್​, ಆದರೂ ಟೆಸ್ಟ್​ನಲ್ಲಿ ಸ್ಟೀವ್​ ಸ್ಮಿತ್​ ಬೆಸ್ಟ್​… ಹೀಗೆಂದವರು ಇವರು

    ನವದೆಹಲಿ: ಕ್ರಿಕೆಟ್​ನ ಎಲ್ಲ ಮೂರು ಮಾದರಿಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡುವ ಕೌಶಲ ಹೊಂದಿರುವ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಪರಿಪೂರ್ಣ ಪ್ಯಾಕೇಜ್​. ಆದರೂ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​ ಬೆಸ್ಟ್​ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಜಾಹೀರ್​ ಅಬ್ಬಾಸ್​ ಹೇಳಿದ್ದಾರೆ.

    ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಟೀವ್​ ಸ್ಮಿತ್​ ತುಂಬಾ ಸ್ಥಿರವಾದ ಪ್ರದರ್ಶನ ತೋರುತ್ತಿದ್ದಾರೆ. ತಾವು ಆಡಿದ ಸರಣಿಗಳಲ್ಲಿ ಇವರ ಬ್ಯಾಟ್​ನಿಂದ ಸಾಕಷ್ಟು ರನ್​ಗಳು ಹರಿದಿವೆ. ಅದೇ ವಿರಾಟ್​ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ಅಷ್ಟೇನೂ ಯಶಸ್ವಿಯಾಗಿಲ್ಲ. ಈ ವಿಷಯದಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಪರವಾಗಿಲ್ಲ ಎಂದು ವಿವರಿಸಿದ್ದಾರೆ.

    ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ ಎಂದು ಅನಿಸಿಕೊಳ್ಳಲು ಕ್ರಿಕೆಟ್​ನ ಎಲ್ಲ ಮೂರು ಮಾದರಿಗಳಲ್ಲಿ ಉತ್ತಮ ಪ್ರದರ್ಶನ ತೋರುವುದು ಇಂದಿನ ಅನಿವಾರ್ಯವಾಗಿದೆ. ಟೆಸ್ಟ್​ ಹೊರತುಪಡಿಸಿ ಉಳಿದೆರಡು ಮಾದರಿಗಳಲ್ಲಿ ಸ್ಥಿರ ಪ್ರದರ್ಶನ ತೋರುವ ವಿರಾಟ್​ ಕೊಹ್ಲಿ ಈ ವಿಷಯದಲ್ಲಿ ಉಳಿದೆಲ್ಲರನ್ನೂ ಹಿಂದಿಕ್ಕುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ವಿರಾಟ್​ ಕೊಹ್ಲಿ ಮಷಿನ್​ ಏನಲ್ಲ. ಕೆಲವೊಮ್ಮೆ ಮಷಿನ್​ಗಳು ಕೂಡ ದುರಸ್ತಿಗೆ ಒಳಗಾಗುತ್ತವೆ. ಆದರೂ ಈ ಸಂದರ್ಭದಲ್ಲಿ ಕೊಹ್ಲಿ ಅವರಿಗೆ ಸಮನಾಂತರವಾಗಿ ನಿಲ್ಲಬಲ್ಲ ಯಾವೊಬ್ಬ ಬ್ಯಾಟ್ಸ್​ಮನ್​ಗಳು ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪಾಕಿಸ್ತಾನದ ಯುವ ಉದಯೋನ್ಮುಖ ಆಟಗಾರ ಬಾಬರ್​ ಅಜಂ ಬಗ್ಗೆ ಪ್ರತಿಕ್ರಿಯಿಸಿದ ಜಾಹೀರ್​ ಅಬ್ಬಾಸ್​, ಅವರು ಎಲ್ಲ ಮಾದರಿಗಳಲ್ಲೂ ಸ್ಥಿರ ಪ್ರದರ್ಶನ ತೋರುವುದನ್ನು ಮುಂದುವರಿಸಬೇಕು. ಈ ದಾರಿಯಲ್ಲಿ ಅವರು ಇನ್ನಷ್ಟು ದೂರ ಸಾಗಬೇಕಿದೆ ಎಂದು ಹೇಳಿದ್ದಾರೆ.

    ಭಾರತದ ವಿರಾಟ್​ ಕೊಹ್ಲಿ ಪರಿಪೂರ್ಣ ಪ್ಯಾಕೇಜ್​, ಆದರೂ ಟೆಸ್ಟ್​ನಲ್ಲಿ ಸ್ಟೀವ್​ ಸ್ಮಿತ್​ ಬೆಸ್ಟ್​... ಹೀಗೆಂದವರು ಇವರು

    ಮದ್ಯ ಮಾರಾಟದ ಐಡಿಯಾ ಕೈಕೊಡ್ತು- ಸಪ್ಲೈಯರ್ ಆಟ ನಡೀಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts