ಏಕದಿನ ಕ್ರಿಕೆಟ್​ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ಪಾಕಿಸ್ತಾನ

pak web
Published on

ಕೊಲಂಬೊ: ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಕ್ಲೀನ್​ಸ್ವೀಪ್​ ಸಾಧಿಸುವ ಮೂಲಕ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದ ಪಾಕಿಸ್ತಾನ ತಂಡ ಮುಂಬರುವ ಏಷ್ಯಾಕಪ್​ನಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯಲಿದೆ.

ಪಾಕಿಸ್ತಾನ ತಂಡ ಶನಿವಾರ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 59 ರನ್​ಗಳಿಂದ ಮಣಿಸಿತು. ಪಾಕಿಸ್ತಾನ 8 ವಿಕೆಟ್​ಗೆ 268 ರನ್​ ಪೇರಿಸಿದರೆ, ಅ್ಘಾನಿಸ್ತಾನ ತಂಡ 48.4 ಓವರ್​ಗಳಲ್ಲಿ 209 ರನ್​ಗಳಿಗೆ ಸರ್ವಪತನ ಕಂಡಿತು.

ಇದರಿಂದ ಪಾಕ್​ ಐಸಿಸಿ ರ್ಯಾಂಕಿಂಗ್​ನಲ್ಲಿ ಆಸ್ಟ್ರೆಲಿಯಾವನ್ನು 2ನೇ ಸ್ಥಾನಕ್ಕೆ ತಳ್ಳಿತು. ಭಾರತ ತಂಡ 3ನೇ ಸ್ಥಾನದಲ್ಲಿ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net