

ಲಾಹೋರ್: ಪಾಕಿಸ್ತಾನದ ಮುಲ್ತಾನ್ ಮತ್ತು ಲಾಹೋರ್ನಲ್ಲಿ ನಡೆಯಲಿರುವ ಏಷ್ಯಾಕಪ್ ಏಕದಿನ ಟೂರ್ನಿಯ 4 ಪಂದ್ಯಗಳಿಗೆ ಸೇನಾ ಭದ್ರತೆಯನ್ನು ಒದಗಿಸಲಾಗುತ್ತಿದೆ. ದೀರ್ಘಕಾಲದ ಬಳಿಕ ಪ್ರತಿಷ್ಠಿತ ಟೂರ್ನಿಯೊಂದರ ಆಯೋಜನೆ ಅವಕಾಶ ಪಡೆದುಕೊಂಡಿರುವ ಪಾಕಿಸ್ತಾನ, ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಿದೆ.
ಆತಿಥೇಯ ದೇಶದ ಜತೆಗೆ ಶ್ರೀಲಂಕಾ, ನೇಪಾಳ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕನಿಷ್ಠ ಒಂದು ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡಲಿದೆ. ಭಾರತ ಮಾತ್ರ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿದೆ.
ಆಗಸ್ಟ್ 30ರಂದು ಪಾಕಿಸ್ತಾನ-ನೇಪಾಳ ನಡುವಿನ ಪಂದ್ಯದೊಂದಿಗೆ ಮುಲ್ತಾನ್ನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ.