VIDEO: ಮಗಳೊಂದಿಗೆ ಸೆರೇನಾ ವಿಲಿಯಮ್ಸ್ ಬಿಂದಾಸ್ ಸ್ಟೆಪ್ಸ್

web2
Published on

ಬೆಂಗಳೂರು: ಕರೊನಾ ವೈರಸ್‌ನಿಂದಾಗಿ ಕ್ರೀಡಾ ಚಟುವಟಿಕೆಗಳಿಂದ ಬಿಡುವಾಗಿರುವ ಕ್ರೀಡಾಪಟುಗಳ ಪಾಲಿಗೆ ಮನೆಯೇ ಮಂತ್ರಾಲಯವಾಗಿದೆ. ಸದಾ ಪ್ರವಾಸ, ಅಭ್ಯಾಸ, ತರಬೇತಿ, ಟೂರ್ನಿಗಳಲ್ಲಿ ಮುಳುಗಿರುತ್ತಿದ್ದ ಕ್ರೀಡಾಪಟುಗಳು ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಲಾಕ್ ಆಗಿದ್ದಾರೆ. ದೈಹಿಕ ಕಸರತ್ತು, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರೆ, ಕೆಲಮಂದಿ ಮಕ್ಕಳೊಂದಿಗೆ ಕಾಲಕಳೆಯುತ್ತಿದ್ದಾರೆ. 23 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಸೆರೇನಾ ವಿಲಿಯಮ್ಸ್ ಮಗಳೊಂದಿಗೆ ಮಾಡಿರುವ ಡ್ಯಾನ್ಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ.

ಸೆರೇನಾ ವಿಲಿಯಮ್ಸ್ ಹಾಗೂ ತಮ್ಮ2 ವರ್ಷದ ಪುತ್ರಿ ಅಲೆಕ್ಸಿಸ್ ಒಲಂಪಿಯಾ ಜತೆಗೆ ಡಿಸ್ನಿಯ ಬ್ಯೂಟಿ ಆಂಡ್ ದ ಬಿಸ್ಟ್ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇಬ್ಬರೂ ಹಳದಿ ಬಣ್ಣದ ಗೌನ್ ಧರಿಸಿದ್ದು, ಅಮ್ಮ ಮಾಡುತ್ತಿದ್ದ ಸ್ಟೆಪ್‌ಗಳನ್ನೇ ಮಗಳು ಕೂಡ ಾಲೋ ಮಾಡಿದ್ದಾಳೆ. ವಿಡಿಯೋದೊಂದಿಗೆ ‘ಕೀಪಿಂಗ್ ಬ್ಯುಸಿ’ ಎಂದು ಸೆರೇನಾ ಬರೆದಿದ್ದಾರೆ. ವಿಡಿಯೋ ಹಾಕಿದ ಬೆನ್ನಲ್ಲೇ ಮಿಲಿಯನ್‌ಗಟ್ಟಲೇ ವೀಕ್ಷಕರು ಲೈಕ್, ಕಾಮೆಂಟ್ ಮಾಡಿದ್ದಾರೆ. ಮಗಳೊಂದಿಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೆರೇನಾ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸೆರೇನಾ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್, ಐ ಲವ್ ಹರ್ ಸೋ ಮಚ್, ಅಮ್ಮ ಕೂಡ ಏಕೆ ಪ್ರಿನ್ಸ್ ಡ್ರೆಸ್ ಹಾಕಿದ್ದಾಳೆ ಎಂದು ಹಾಕಿರುವ ಕಾಮೆಂಟ್ ಗಮನಸೆಳೆದಿದೆ.

2017ರ ನವೆಂಬರ್ ತಿಂಗಳಲ್ಲಿ ಸೆರೇನಾ ವಿಲಿಯಮ್ಸ್ ಅಲೆಕ್ಸಿಸ್ ಒಹಾನಿಯಾನ್‌ರನ್ನು ಮದುವೆಯಾಗಿದ್ದರು. ಮದುವೆಗೂ ಮುನ್ನವೇ ಅಲೆಕ್ಸಿಸ್ ಜನಿಸಿದ್ದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net