More

    VIDEO: ಆಸ್ಟ್ರೇಲಿಯಾದಲ್ಲಿ ಕನ್ನಡಿಗನ ಸೇವೆಗೆ ವಾರ್ನರ್ ಫುಲ್ ಖುಷ್..!

    ಬೆಂಗಳೂರು: ಕರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿಂದಲೂ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಸಾಮಾಜಿಕ ಜಾಲತಾಣವೇ ಎರಡನೇ ಮನೆಯಾಗಿದೆ. ಕುಟುಂಬ ಸದಸ್ಯರೊಂದಿಗೆ ತೆಲುಗು ಸಿನಿಮಾ ಹಾಡು, ಡೈಲಾಗ್ ಸೇರಿದಂತೆ ಇನ್ನಿತರ ಹಾಡುಗಳಿಗೆ ಟಿಕ್‌ಟಾಕ್ ಮಾಡುತ್ತಾ ಗಮನಸೆಳೆಯುತ್ತಿದ್ದ ವಾರ್ನರ್, ಇದೀಗ ಕೋವಿಡ್-19ರ ಆಸ್ಟ್ರೇಲಿಯಾದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಪೂರೈಸುತ್ತಿರುವ ಬೆಂಗಳೂರು ಮೂಲದ ವಿದ್ಯಾರ್ಥಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್- ಬ್ಯಾಟ್ಸ್‌ಮನ್ ಆಡಂ ಗಿಲ್‌ಕ್ರಿಸ್ಟ್ ಗುರುವಾರವಷ್ಟೇ ಕೇರಳದ ನರ್ಸ್ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆಗೆ ಸೆಕ್ಸ್ ಮಾಡಿ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳಾ ಬಾಕ್ಸರ್! ಶಿಕ್ಷೆಯಿಂದ ಪಾರಾಗಿದ್ದೇಕೆ?

    ಬೆಂಗಳೂರು ಮೂಲದ ಶ್ರೇಯಸ್ ಶ್ರೇಷ್ಠ, ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಔಟ್‌ರೀಚ್ ಕಾರ್ಯಕ್ರಮದಡಿಯಲ್ಲಿ (ಸ್ನೇಹಪೂರ್ವಕವಾಗಿ ಮಾಡುವ ಕಾರ್ಯಕ್ರಮ) ಕೋವಿಡ್-19ರಿಂದ ಸಂಕಷ್ಟದ ಸುಳಿಗೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಆಹಾರ ಪೂರೈಸುತ್ತಿದ್ದಾರೆ. ಇದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಗಮನಸೆಳೆದಿದ್ದು, ಶ್ರೇಯಸ್ ಜತೆ ಮಾತನಾಡಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ‘ಉತ್ತಮ ಕೆಲಸ ನಿರ್ವಹಿಸುತ್ತಿರುವೆ, ಭಾರತದಲ್ಲಿರುವ ತಂದೆ-ತಾಯಿ ನಿನ್ನ ಬಗ್ಗೆ ಹೆಮ್ಮೆ ಪಡುವರು. ಇಂಥ ಶ್ರೇಷ್ಠ ಕಾರ್ಯ ಮುಂದುವರಿಸು, ಈ ವಿಷಯದಲ್ಲಿ ನಾವೆಲ್ಲರೂ ಒಂದೇ’ ಎಂದು ವಾರ್ನರ್ ಹೇಳಿದ್ದಾರೆ.

    ಇದನ್ನೂ ಓದಿ: ನನಗೆ ಹಣ ಬೇಕು, ನಾನು ಆಡುತ್ತೇನೆ ಎಂದ ಟೆನಿಸ್ ಆಟಗಾರ್ತಿ

    ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಂ ಗಿಲ್‌ಕ್ರಿಸ್ಟ್, ಕೇರಳ ಮೂಲದ ನರ್ಸ್ ಶರೊನ್ ವರ್ಗಿಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತದಿಂದ ಆಸ್ಟ್ರೇಲಿಯಾಗೆ ವಿದ್ಯಾಭ್ಯಾಸಕ್ಕೆ ಬಂದು, ಕೋವಿಡ್-19ರ ವಿರುದ್ಧ ಹೋರಾಡುತ್ತಿರುವಿರಿ, ನಿಮ್ಮ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದರು. ಗಿಲ್‌ಕ್ರಿಸ್ಟ್ ಅಲ್ಲದೆ, ಯುನೈಟೆಡ್ ನರ್ಸಸ್ ಸಂಸ್ಥೆ (ಯುಎನ್‌ಎ) ಕೂಡ ಶರೊನ್ ಕಾಯಕ್ಕೆ ಮೆಚ್ಚುಗೆ ಸೂಚಿಸಿದೆ. ಯುಎನ್‌ಎ ಬಳಿ 20 ಲಕ್ಷಕ್ಕೂ ನರ್ಸ್‌ಗಳು ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 15 ಲಕ್ಷ ಮಂದಿ ಕೇರಳದವರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts