More

    ಹಿಟ್​ಮ್ಯಾನ್​ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದ್ದ ಡೇವಿಡ್​ ವಾರ್ನರ್

    ಕಲ್ಕತ್ತಾ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿ ಹಲವು ವಿಶೇಷತೆಗಳಿಂದ ಕೂಡಿದ್ದು, ದಾಖಲೆಗಳ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದೆ. ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವ ಮೂಲಕ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಈಗ ಸುದ್ದಿಯಾಗಿದ್ದಾರೆ.

    2019 ರ ವಿಶ್ವಕಪ್​ನಲ್ಲಿ 648 ರನ್ ಕಲೆಹಾಕಿ ಮಿಂಚಿದ್ದ ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್​ನಲ್ಲೂ 10 ಇನಿಂಗ್ಸ್​ಗಳಿಂದ 550 ರನ್ ಬಾರಿಸಿದ್ದಾರೆ. ಈ ಮೂಲಕ ಸತತ ಎರಡು ವಿಶ್ವಕಪ್​ಗಳಲ್ಲಿ 500+ ರನ್​ಗಳಿಸಿದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. ಡೇವಿಡ್ ವಾರ್ನರ್ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಈ ವಿಶೇಷ ದಾಖಲೆಯನ್ನು ಸರಿಗಟ್ಟಿರುವುದು ಈಗ ಹೊಸ ದಾಖಲೆಯಾಗಿದೆ.

    ಇದನ್ನೂ ಓದಿ: ಎರಡು ತಿಂಗಳಲ್ಲಿ 11 ಬಿಲಿಯನ್​ ತಲುಪಿದ ಯುಪಿಐ ವಹಿವಾಟು: ಆರ್​ಬಿಐ

    ಡೇವಿಡ್​ ವಾರ್ನರ್​ 528 ರನ್ ಬಾರಿಸುವ ಮೂಲಕ ಸತತ ಎರಡು ವಿಶ್ವಕಪ್​ ಆವೃತ್ತಿಗಳಲ್ಲಿ 500+ ರನ್​ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್​ ಆವೃತ್ತಿಗಳಲ್ಲಿ ಸತತ 500+ ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಈ ಮೂಲಕ ಅವರು ಹಿಟ್​ಮ್ಯಾನ್​ ಎಂದೇ ಖ್ಯಾತಿ ಪಡೆದಿದ್ದ ರೋಹಿತ್​ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (711) ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಕ್ವಿಂಟನ್ ಡಿಕಾಕ್ (594) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 578 ರನ್ ಪೇರಿಸಿರುವ ನ್ಯೂಝಿಲೆಂಡ್​ನ ರಚಿನ್ ರವೀಂದ್ರ ತೃತೀಯ, ಡೇರಿಲ್ ಮಿಚೆಲ್ (552) ಹಾಗೂ ರೋಹಿತ್ ಶರ್ಮಾ (550) ನಂತರದ ಸ್ಥಾನಗಳಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts