More

    ಕ್ಯಾನ್ಸರ್​, ಕೋವಿಡ್​ ವಿರುದ್ಧ ಹೋರಾಡುವಲ್ಲಿ ಬಾವಲಿಯ ಜೀನ್​ಗಳ ಪಾತ್ರ ಮಹತ್ವದ್ದು: ಸಂಶೋಧನಾ ವರದಿ

    ಸ್ಯಾನ್​ ಫ್ರಾನ್ಸಿಸ್ಕೋ: ಬಾವಲಿಗಳ ಜೀನ್​ಗಳು ಕೋವಿಡ್​ ಮತ್ತು ಅಪಾಯಕಾರಿ ಕ್ಯಾನ್ಸರ್​​ ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೊಸ ಸಂಶೋಧನಾ ವರದಿ ಬಹಿರಂಗಪಡಿಸಿದೆ.

    ಸಂಶೋಧನಾ ವರದಿಯು ಜಿನೋಮ್​ ಬಯಾಲಜಿ ಆ್ಯಂಡ್​ ಎವೊಲ್ಯೂಷನ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಬಾವಲಿಗಳ ತ್ವರಿತ ವಿಕಸನವು ಕೋವಿಡ್​-19 ಸೋಂಕು ಮತ್ತು ಕ್ಯಾನ್ಸರ್​ನಂತಹ ರೋಗಗಳಿಂದ ಬದುಕಿಸಬಲ್ಲ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.

    ಅಮೆರಿಕ ಮೂಲದ ಕೋಲ್ಡ್​ ಸ್ಪ್ರಿಂಗ್​ ಹಾರ್ಬರ್​ ಲ್ಯಾಬೋರೇಟರಿ (ಸಿಎಸ್​ಎಚ್​ಎಲ್​)ಯ ವಿಜ್ಞಾನಿಗಳು ‘ಜಮೈಕನ್​​ ಫ್ರೂಟ್​ ಬಾವಲಿ’ ಮತ್ತು ‘ಮೆಸೊಅಮೆರಿಕನ್ ಮೀಸೆಯ ಬಾವಲಿ’ಯ ಜೀನ್​ಗಳನ್ನು ಅನುಕ್ರಮಗೊಳಿಸಿದ್ದು, ಈ ಎರಡೂ ಈ ಅನುಕ್ರಮಗಳನ್ನು ಇತರ ಸಸ್ತನಿಗಳಿಗೆ ಹೋಲಿಸಿದಾಗ ಬಾವಲಿಗಳ ಜಿನೋಮ್​ಗಳಲ್ಲಿ ಕೋವಿಡ್​ ಮತ್ತು ಕ್ಯಾನ್ಸರ್​ ವಿರುದ್ಧ ಹೋರಾಡುವ ತ್ವರಿತ ವಿಕಸನವು ಪತ್ತೆಯಾಗಿದೆ.

    ಇದನ್ನೂ ಓದಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹೊಸ ವಿಮಾನ ಅನಾವರಣ; ಕಿತ್ತಳೆ, ನೀಲಿ ಬಣ್ಣಗಳ ಬಳಕೆ, ಹಿಂಬದಿಯಲ್ಲಿ ಬಂಧನಿ ಕಲೆ

    ಜಮೈಕನ್ ಫ್ರೂಟ್ ಬಾವಲಿ ಮತ್ತು ಮೆಸೊಅಮೆರಿಕನ್ ಮೀಸೆ ಬಾವಲಿ ವಿಶ್ವದ ಅತ್ಯಂತ ಪರಿಸರ ವೈವಿಧ್ಯತೆಯ ಸಸ್ತನಿಗಳ ಸೂಪರ್ ಫ್ಯಾಮಿಲಿಗೆ ಸೇರಿವೆ. ಸಂಶೋಧಕರು, ಬಾವಲಿಗಳ ಜಿನೋಮ್​ ಅನುಕ್ರಮಗಳನ್ನು ಮಾನವರು ಸೇರಿದಂತೆ 15 ಇತರ ಬಾವಲಿ ಮತ್ತು ಸಸ್ತನಿ ಜೀನೋಮ್‌ಗಳಿಗೆ ಹೋಲಿಸಿದ್ದು, ಇದು ಇಂಟರ್ಫೆರಾನ್-ಆಲ್ಫಾ ಮತ್ತು ಒಮೆಗಾ ಎಂಬ ಎರಡು ಉರಿಯೂತದ ಪ್ರೋಟೀನ್-ಕೋಡಿಂಗ್ ಜೀನ್‌ಗಳ ಮಟ್ಟದಲ್ಲಿ ಅಜ್ಞಾತ ಬದಲಾವಣೆಯನ್ನು ಬಹಿರಂಗಪಡಿಸಿದೆ ಎಂದು ಅಧ್ಯಯನವು ಗಮನಿಸಿದೆ.

    ಬಾವಲಿಗಳು ಇಂಟರ್ಫೆರಾನ್-ಆಲ್ಫಾವನ್ನು ಉತ್ಪಾದಿಸುವ ಜೀನ್‌ಗಳನ್ನು ಹೊರ ಚೆಲ್ಲುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಎಚ್ಚರಿಸುತ್ತವೆ. ಹೀಗಾಗಿ ಇದು ಬಾವಲಿಗಳ ಹೆಚ್ಚಿನ ವೈರಸ್​ ಸಹಿಷ್ಣುತೆಗೆ ಕಾರಣವಾಗಬಹುದು. ಆರೋಗ್ಯಕರ ಅಂಗಾಂಶಕ್ಕೆ ಹಾನಿ ಮಾಡುವ ಅತಿಯಾದ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಇದು ತಡೆಯುತ್ತದೆ. ಸೋಂಕುಗಳು ಮನುಷ್ಯರಿಗೆ ತುಂಬಾ ಹಾನಿ ಮಾಡುವ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ ಎಂದು ಸಿಎಸ್​ಎಚ್​ಎಲ್ ಪೋಸ್ಟ್‌ಡಾಕ್ಟರಲ್ ಫೆಲೋ ಅರ್ಮಿನ್ ಶೆಬೆನ್ ವಿವರಿಸಿದರು.

    ಇತರ ಸಸ್ತನಿಗಳಿಗೆ ಹೋಲಿಸಿದರೆ, ಬಾವಲಿ ಜೀನೋಮ್‌ಗಳು ಕ್ಯಾನ್ಸರ್-ಸಂಬಂಧಿತ ಜೀನ್​ಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಒಳಗೊಂಡಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನಮ್ಮ ಸಂಶೋಧನೆಯು ರೋಗನಿರೋಧಕ ಶಕ್ತಿ ಮತ್ತು ಕ್ಯಾನ್ಸರ್ ಪ್ರತಿಕ್ರಿಯೆಯು ಹೇಗೆ ಆಳವಾಗಿ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಪ್ರತಿರಕ್ಷಣಾ ಜೀನ್‌ಗಳು ಮತ್ತು ಪ್ರೋಟೀನ್‌ಗಳು ಕ್ಯಾನ್ಸರ್ ಪ್ರತಿರೋಧದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶೆಬೆನ್ ಹೇಳಿದರು. (ಏಜೆನ್ಸೀಸ್​)

    ರಫಾ ಕ್ರಾಸಿಂಗ್ ಎಲ್ಲಿದೆ, ಅರಬ್ ದೇಶಗಳು ಪ್ಯಾಲೆಸ್ಟೀನಿಯಾದವರಿಗೆ ಏಕೆ ಆಶ್ರಯ ನೀಡುತ್ತಿಲ್ಲ?

    ಬೈಡೆನ್​ ನಿರ್ಗಮಿಸುತ್ತಿದ್ದಂತೆ ಇಸ್ರೇಲ್​ ಮೇಲೆ ಹಮಾಸ್​ನಿಂದ ರಾಕೆಟ್​ ದಾಳಿ ತೀವ್ರ: ಗಾಜಾಗೆ ಸೀಮಿತ ನೆರವಿಗೆ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts