More

    ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆ; ಕೆಲಸಕ್ಕೆ ಬರುವಂತೆ ಬಾಸ್​​ನಿಂದ ಆರ್ಡರ್

    ನವದೆಹಲಿ: ಮಹಿಳೆಯೊಬ್ಬಳು ಕ್ಯಾನ್ಸರ್​ನಿಂದಾಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಈ ವಿಚಾರ ತಿಳಿದಿದ್ದರು ಖಾಸಗಿ ಕಂಪನಿಯವರು ಕೆಲಸಕ್ಕೆ ವಾಪಸ್​ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಅವರ ಮಗಳು ಅಳಲು ತೊಡಿಕೊಂಡಿದ್ದಾರೆ.

    ಜಗತ್ತಿನ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉತ್ತಮ ಸಂಬಳವನ್ನು ನೀಡುವುದಲ್ಲದೆ, ತಮ್ಮ ಉದ್ಯೋಗಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತವೆ ಮತ್ತು ಅಗತ್ಯಬಿದ್ದರೆ ರಜೆ ನೀಡುತ್ತವೆ. ಅದೇ ಸಮಯದಲ್ಲಿ, ತಮ್ಮ ಉದ್ಯೋಗಿಗಳಿಗೆ ಅನಾರೋಗ್ಯ ಇದ್ದರೂ ರಜೆ ನೀಡದ ಮೇಲಧಿಕಾರಿಗಳು ಮತ್ತು ಕೆಲವು ಕಂಪನಿಗಳು ಇವೆ. ಆದರೆ ಇಲ್ಲೊಬ್ಬ ಬಾಸ್​​ ತನ್ನ ಉದ್ಯೋಗಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯಿಂದ ಬಳಲುತ್ತಿದ್ದರೆ ಕಂಪನಿಗೆ ಬಂದು ಕೆಲಸ ಮಾಡಲು ಹೇಳಿದ್ದಾನೆ.

    ಅನಾರೋಗ್ಯದ ತಾಯಿಯನ್ನು ಕೆಲಸಕ್ಕೆ ಮರಳುವಂತೆ ಹೇಗೆ ಕಂಪನಿಯವರು ಒತ್ತಡ ಹೇರಿದರು ಎಂಬುದನ್ನು ID @disneydoll96 ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.  ತನ್ನ 50 ವರ್ಷದ ತಾಯಿ ಕಳೆದ 18 ತಿಂಗಳುಗಳಿಂದ 4ನೇ ಹಂತದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದಾರೆ . ತಾಯಿ ಕೆಲಸ ಮಾಡುವ ಕಂಪನಿಯ ಬಾಸ್ ಗೂ ಅಮ್ಮನ ಸ್ಥಿತಿ ಗೊತ್ತಿದೆ.. ಆದರೆ ಬಾಸ್ ತನ್ನ ತಾಯಿಯನ್ನು ಆಫೀಸಿಗೆ ಬರುವಂತೆ ಕೇಳುತ್ತಲೇ ಇರುತ್ತಾನೆ.

    ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆ; ಕೆಲಸಕ್ಕೆ ಬರುವಂತೆ ಬಾಸ್​​ನಿಂದ ಆರ್ಡರ್

    ಪೋಸ್ಟ್‌ನಲ್ಲಿ ಬಾಸ್ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ‘ನೀವು ಚಿಕಿತ್ಸೆ ನೀಡುತ್ತಿರುವ ಆಂಕೊಲಾಜಿಸ್ಟ್‌ನಿಂದ ನೀವು ಕೆಲಸಕ್ಕೆ ಮರಳಲು ಯೋಗ್ಯರಾಗಿರುವಿರಿ ಎಂದು ಪತ್ರವನ್ನು ಪಡೆಯಿರಿ. ಬಾಸ್ ಕೂಡ ಮೀಟಿಂಗ್ ಗೆ ಬರುವಂತೆ ಇಮೇಲ್ ಕಳುಹಿಸಿದ್ದರು.

    ತನ್ನ ತಾಯಿ ಐರ್ಲೆಂಡ್‌ನ ಅಂಗಡಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆದರೆ ಸದ್ಯ ತಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ, ತನ್ನ ತಾಯಿ ಕ್ಯಾನ್ಸರ್‌ನಿಂದ ಬೇಗ ಗುಣಮುಖರಾಗಿ ಮುಂದೊಂದು ದಿನ ಕೆಲಸಕ್ಕೆ ಹೋಗಲಿ . ತಂದೆಯನ್ನು ಕಳೆದುಕೊಂಡ ನಂತರ ತನಗೆ ಒಳ್ಳೆಯ ಕೆಲಸ ಸಿಗಲಿಲ್ಲ ಎಂದು ಬಾಲಕಿ ತನ್ನ ಕಷ್ಟವನ್ನು ಸೋಶಿಯಲ್​​ ಮೀಡಿಯಾ ಮೂಲಕವಾಗಿ ವ್ಯಕ್ತಪಡಿಸಿದ್ದಾಳೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ವಿವಿಧ ಕಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts