More

    ನನಗೆ ಹಣ ಬೇಕು, ನಾನು ಆಡುತ್ತೇನೆ ಎಂದ ಟೆನಿಸ್ ಆಟಗಾರ್ತಿ

    ನ್ಯೂಯಾರ್ಕ್: ಕರೊನಾ ಹಾವಳಿಯಿಂದಾಗಿ ಕಳೆದ 3 ತಿಂಗಳಿನಿಂದ ವೃತ್ತಿಪರ ಟೆನಿಸ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ವಿಂಬಲ್ಡನ್ ಗ್ರಾಂಡ್ ಸ್ಲಾಂ ಈಗಾಗಲೆ ರದ್ದುಗೊಂಡಿದ್ದರೆ, ಮುಂಬರುವ ಯುಎಸ್ ಓಪನ್ ಟೂರ್ನಿ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ಇದರ ನಡುವೆ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಅಮೆರಿಕದಲ್ಲಿನ ಕರೊನಾ ಹಾವಳಿ ಮತ್ತು ಕಟ್ಟುನಿಟ್ಟಿನ ಮಾರ್ಗಸೂಚಿಗಳಿಂದಾಗಿ ಯುಎಸ್ ಓಪನ್‌ನಲ್ಲಿ ಆಡಲು ಹಿಂದೇಟು ಹಾಕಿದ್ದಾರೆ. ಆದರೆ ಆತಿಥೇಯ ಅಮೆರಿಕದ ಟೆನಿಸ್ ಆಟಗಾರ್ತಿ ಡೇನಿಯಲ್ ಕಾಲಿನ್ಸ್, ಜೋಕೊವಿಕ್‌ಗೆ ತಿರುಗೇಟು ನೀಡಿದ್ದು, ಯುಎಸ್ ಓಪನ್ ನಡೆಯಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ಹೀಗಿದೆ…

    ಇದನ್ನೂ ಓದಿ: ಮಹಿಳಾ ಕ್ರಿಕೆಟ್​ನಲ್ಲಿ ಚೆಂಡು ಸಣ್ಣದಾಗಬೇಕು ಎಂದಿದ್ದೇಕೆ ಸೋಫಿ ಡಿವೈನ್?

    ‘ವೃತ್ತಿಜೀವನದಲ್ಲಿ 150 ದಶಲಕ್ಷ ಡಾಲರ್ ದುಡಿದಿರುವವರಿಗೆ ಜೀವನ ನಡೆಸುವುದು ಸುಲಭ. ಯುಎಸ್ ಓಪನ್ ಆಡುವುದನ್ನು ಅವರು ನಿರಾಕರಿಸಬಹುದು. ಆದರೆ ನನಗೆ ಹಣ ಬೇಕು. ನಾನು ಆಡುತ್ತೇನೆ. ಫೆಬ್ರವರಿ ನಂತರ ಯಾವುದೇ ಟೂರ್ನಿ ನಡೆದಿಲ್ಲ. ಯಾವ ಆಟಗಾರರೂ ಸಂಭಾವನೆ ಪಡೆದಿಲ್ಲ. ಯುಎಸ್ ಓಪನ್ ನಡೆದರೆ ಆಟಗಾರರಿಗೆ ಮತ್ತೆ ಹಣ ಸಂಪಾದಿಸುವ ಅವಕಾಶ ಲಭಿಸುತ್ತದೆ’ ಎಂದು 26 ವರ್ಷದ ಕಾಲಿನ್ಸ್ ಹೇಳಿದ್ದಾರೆ.

    ಇದನ್ನೂ ಓದಿ: ಸಚಿನ್-ಯುವರಾಜ್ ಮೊದಲ ಭೇಟಿ ಹೇಗಿತ್ತು ಗೊತ್ತಾ?

    ಆಸ್ಟ್ರೇಲಿಯಾದ ಆಟಗಾರ ನಿಕ್ ಕಿರ್ಗಿಯೋಸ್ ಕೂಡ ಈ ಮುನ್ನ ಯುಎಸ್ ಓಪನ್ ಟೂರ್ನಿಯನ್ನು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಯುಎಸ್ ಓಪನ್ ಟೂರ್ನಿ ಆಗಸ್ಟ್ 31ರಿಂದ ನಡೆಯಬೇಕಿದೆ. ಮಾರ್ಚ್‌ನಲ್ಲಿ ಹೆಚ್ಚಿನ ದೇಶಗಳಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಸ್ಥಗಿತಗೊಂಡಿರುವ ವೃತ್ತಿಪರ ಟೆನಿಸ್ ಚಟುವಟಿಕೆ ಸದ್ಯಕ್ಕೆ ಜುಲೈವರೆಗೂ ಆರಂಭಗೊಳ್ಳುವ ಲಕ್ಷಣಗಳಿಲ್ಲ.

    ಪಿಟಿ ಉಷಾಗೆ ಒಲಿಂಪಿಕ್ಸ್ ಪದಕ ಕೈತಪ್ಪಿದಾಗ ಚಿನ್ನ ಗೆದ್ದ ಅಥ್ಲೀಟ್ ಕೂಡ ಅತ್ತಿದ್ದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts