More

    ಪ್ರತಿಷ್ಠಿತ ಫ್ರೆಂಚ್ ಓಪನ್ ಮಾಧ್ಯಮ ಹಕ್ಕು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಪಾಲು

    ಬೆಂಗಳೂರು: 2022-24ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಾಧ್ಯಮ ಹಕ್ಕು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಇಂಡಿಯಾ(ಎಸ್‌ಪಿಎನ್) ಪಾಲಾಗಿದೆ. ಮೂರು ವರ್ಷಗಳ ಅವಧಿಗೆ ಈ ಹಕ್ಕು ಸೋನಿ ಪಿಕ್ಚರ್ಸ್‌ ಪಡೆದುಕೊಂಡಿದೆ ಎಂದು ಸಂಸ್ಥೆ ಪ್ರಕಟಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ, ಪಾಕಿಸ್ತಾನ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಭೂತಾನ್ ಹಾಗೂ ಮಾಲ್ಡೀವ್ಸ್ ದೇಶಗಳಲ್ಲಿ ಮಾಧ್ಯಮದ ಹಕ್ಕನ್ನು ಹೊಂದಿದ್ದು, ಓಟಿಟಿ, ಸೋನಿ ಲೈವ್‌ನಲ್ಲೂ ನೇರ ಪ್ರಸಾರ ಕಾಣಲಿದೆ. ಮೇ 22 ರಿಂದ ಜೂನ್ 5 ರವರೆಗೆ  ಫ್ರೆಂಚ್ ಓಪನ್ ನಡೆಯಲಿದೆ.

    ಈಗಾಗಲೇ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅದ್ಭುತ ಯಶಸ್ಸು ಕಂಡಿರುವ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಭಾರತದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಗ್ರಾಂಡ್ ಸ್ಲಾಂ ಟೂರ್ನಿಗಳನ್ನು ಪ್ರಸಾರ ಮಾಡಲು ತೀರ್ಮಾನಿಸಿದೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಭಾರತದ 22 ಮಿಲಿಯನ್ ವೀಕ್ಷಕರು ವೀಕ್ಷಿಸಿದ್ದರು. ಇದು ಇತ್ತೀಚಿನ ದಿನಗಳಲ್ಲಿ ದಾಖಲೆಯಾಗಿದ್ದು, ರೋಲ್ಯಾಂಡ್ ಗ್ಯಾರಸ್‌ನಲ್ಲಿ ನಡೆಯಲಿರುವ ಟೂರ್ನಿಯೂ ಇದಕ್ಕಿಂತ ಹೆಚ್ಚು ಜನಪ್ರಿಯಗೊಳ್ಳಲಿದೆ ಎಂದು ತಿಳಿಸಿದೆ.

    ಮೇ 22ರ ಮಧ್ಯಾಹ್ನ 2.30ರಿಂದ ಫ್ರೆಂಚ್ ಓಪನ್ ಆರಂಭಗೊಳ್ಳಲಿದ್ದು, ಮೊದಲ ದಿನದಿಂದಲೇ ಭಾರತೀಯ ವೀಕ್ಷಕರ ಗಮನದಲ್ಲಿಟ್ಟುಕೊಂಡು ಪ್ರಸಾರಕ್ಕೆ ವಿಶೇಷ ಒತ್ತು ನೀಡಲಿದೆ. ‘ಆಸ್ಟ್ರೇಲಿಯನ್ ಓಪನ್ ಯಶಸ್ಸಿನಿಂದ ಉತ್ತೇಜನಗೊಂಡಿದ್ದು, ನಮ್ಮ ಸಂಸ್ಥೆ ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯನ್ನು ಭಾರತದಲ್ಲಿ ಪ್ರಸಾರ ಮಾಡಲಿದೆ. ಇದು ಭಾರತೀಯ ಟೆನಿಸ್ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲಿದ್ದೇವೆ’ ಎಂದು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಇಂಡಿಯಾದ ಸ್ಪೋರ್ಟ್ಸ್ ಬ್ಯುಸಿನೆಸ್‌ನ ಮುಖ್ಯ ಹಣಕಾಸು ಅಧಿಕಾರಿ ರಾಜೇಶ್ ಕೌಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts