More

    ಪಿಟಿ ಉಷಾಗೆ ಒಲಿಂಪಿಕ್ಸ್ ಪದಕ ಕೈತಪ್ಪಿದಾಗ ಚಿನ್ನ ಗೆದ್ದ ಅಥ್ಲೀಟ್ ಕೂಡ ಅತ್ತಿದ್ದಳು!

    ಬೆಂಗಳೂರು: ಅಥ್ಲೆಟಿಕ್ಸ್‌ನಲ್ಲಿ ಭಾರತ ಒಂದೂ ಒಲಿಂಪಿಕ್ಸ್ ಪದಕ ಗೆದ್ದುಕೊಂಡ ಇತಿಹಾಸವಿಲ್ಲ. ಆದರೆ 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಪಿಟಿ ಉಷಾ 100ನೇ ಒಂದು ಸೆಕೆಂಡ್‌ನಿಂದ ಕಂಚಿನ ಪದಕದಿಂದ ವಂಚಿತರಾಗದೇ ಇರುತ್ತಿದ್ದರೆ, ಈ ಇತಿಹಾಸವೇ ಬದಲಾಗಿರುತ್ತಿತ್ತು. ಪಯ್ಯೋಲಿ ಎಕ್ಸ್‌ಪ್ರೆಸ್ ಖ್ಯಾತಿಯ ಅಥ್ಲೆಟಿಕ್ಸ್ ದಿಗ್ಗಜೆ ಪಿಟಿ ಉಷಾ ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 55.42 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 55.41 ಸೆಕೆಂಡ್‌ಗಳಲ್ಲಿ ಓಡಿದ್ದ ರೊಮೇನಿಯಾದ ಕ್ರಿಸ್ಟಿಯಾನಾ ಕೊಜೊಕರುಗೆ ಕಂಚು ಒಲಿದಿತ್ತು. ಪಿಟಿ ಉಷಾಗೆ ಕೈತಪ್ಪಿದ ಈ ಒಲಿಂಪಿಕ್ಸ್ ಪದಕದಿಂದ ಅವರಷ್ಟೇ ಅಲ್ಲ, ಆ ಸ್ಪರ್ಧೆಯಲ್ಲಿ ಸ್ವರ್ಣ ಜಯಿಸಿದ್ದ ಮೊರೊಕ್ಕೊದ ಅಥ್ಲೀಟ್ ಕೂಡ ಕಣ್ಣೀರು ಹಾಕಿದ್ದರಂತೆ!

    ಇದನ್ನೂ ಓದಿ: ಸಚಿನ್-ಯುವರಾಜ್ ಮೊದಲ ಭೇಟಿ ಹೇಗಿತ್ತು ಗೊತ್ತಾ?

    ಮೊರೊಕ್ಕೊದ ನವಲ್ ಎಲ್ ಮೌಟವಕೆಲ್ 54.61 ಸೆಕೆಂಡ್‌ಗಳಲ್ಲಿ ಓಡಿ ಸ್ವರ್ಣ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್ ಸ್ವರ್ಣ ಜಯಿಸಿದ ಆಫ್ರಿಕಾದ ಮೊದಲ ಮುಸ್ಲಿಂ ಮಹಿಳೆ ಎಂಬ ಇತಿಹಾಸವನ್ನು ಬರೆದಿದ್ದರು. ಅವರ ಈ ಸಾಧನೆಯಿಂದ ಮೊರೊಕ್ಕೊದ ದೊರೆ ಎಷ್ಟು ಖುಷಿಯಾಗಿದ್ದರು ಎಂದರೆ, ಆ ದಿನ ದೇಶದಲ್ಲಿ ಜನಿಸಿದ ಎಲ್ಲ ಹೆಣ್ಣು ಮಕ್ಕಳಿಗೆ ಮೌಟವಕೆಲ್ ಹೆಸರೇ ಇಡಬೇಕೆಂದು ಆದೇಶಿಸಿದ್ದರು. ಈ ಅಪೂರ್ವ ಸಾಧನೆಯ ನಡುವೆಯೂ ಮೌಟವಕೆಲ್, ಪಿಟಿ ಉಷಾ ಅನುಭವಿಸಿದ ನಿರಾಸೆಯಿಂದಾಗಿ ತಾವೂ ಅತ್ತಿದ್ದರು. ಪಿಟಿ ಉಷಾ ತಮಗೆ ಆಪ್ತಗೆಳತಿಯೂ ಆಗಿದ್ದರಿಂದ ಆಕೆಯ ನೊವು ಏನೆಂದು ನಾನು ಅರ್ಥಮಾಡಿಕೊಂಡಿದ್ದೆ ಎಂದು ಮೌಟವಕೆಲ್ ಹೇಳಿಕೊಂಡಿದ್ದಾರೆ. ಆ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ಕೂಡ ಪದಕವಂಚಿತವಾಗಿದ್ದ ಕಾರಣ ಪಿಟಿ ಉಷಾ ಮೇಲೆ ಪದಕ ನಿರೀಕ್ಷೆಯ ಭಾರವಿತ್ತು.

    ಇದನ್ನೂ ಓದಿ: ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ರದ್ದು

    ‘ಭಾರತೀಯ ಅಥ್ಲೆಟಿಕ್ಸ್ ಜತೆಗಿನ ನನ್ನ ನಂಟು ಆರಂಭಗೊಂಡಿದ್ದು ಪಿಟಿ ಉಷಾ ಅವರಿಂದಲೇ. ಅವರನ್ನು ನಾನು ಅಪಾರವಾಗಿ ಗೌರವಿಸುತ್ತೇನೆ. ಅವರ ಸಾಮರ್ಥ್ಯ ಏನೆಂದು ಪದೇಪದೇ ಸಾಬೀತುಪಡಿಸಿದ್ದಾರೆ. ಆ ದಿನ ನಾನೆಷ್ಟು ಸಂತಸಗೊಂಡಿದ್ದೆನೋ, ಅವರ ಬಗ್ಗೆ ಅಷ್ಟೇ ಬೇಸರವಾಗಿತ್ತು. ಅಥ್ಲೆಟಿಕ್ಸ್‌ನಲ್ಲಿ ಅಷ್ಟೇನೂ ಸಾಧನೆಗಳಿಲ್ಲದ ದೇಶದಿಂದ ನಾವಿಬ್ಬರೂ ಬಂದಿದ್ದೆವು. ಅವರು 4ನೇ ಸ್ಥಾನ ಪಡೆದಾಗ ನಾನೂ ಅತ್ತಿದ್ದೆ. ಅವರು ಕೂಡ ನನ್ನೊಂದಿಗೆ ಪೋಡಿಯಂ ಏರಬೇಕೆಂದು ಬಯಸಿದ್ದೆ’ ಎಂದು ಮೌಟವಕೆಲ್ ಮೆಲುಕು ಹಾಕಿದ್ದಾರೆ. ಮೌಟವಕೆಲ್ 2007ರಲ್ಲಿ ಮೊರೊಕ್ಕೊದ ಕ್ರೀಡಾ ಸಚಿವೆಯೂ ಆಗಿದ್ದರು. 1984ರ ಒಲಿಂಪಿಕ್ಸ್ ಸಿದ್ಧತೆಯ ಭಾಗವಾಗಿ ಮನೆಯ ಹತ್ತಿರದ ರೈಲ್ವೇ ಟ್ರ್ಯಾಕ್ ಮೇಲೆ ಓಡಿದ್ದೆ ಎಂದು ಪಿಟಿ ಉಷಾ ಹಿಂದೊಮ್ಮೆ ಹೇಳಿಕೊಂಡಿದ್ದರು.

    ಇನ್ನು ಕ್ರೀಡೆ ಪಠ್ಯೇತರವಲ್ಲ, ಪಠ್ಯಕ್ರಮದ ಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts