More

    ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಣ ಸಂಸ್ಥೆಗಳ ಶ್ರಮ ಅಪಾರ

    ಜೇವರ್ಗಿ: ಗ್ರಾಮೀಣ ಪ್ರದೇಶದಲ್ಲಿನ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ಶ್ರಮ ಅಪಾರವಾಗಿದೆ. ಈ ನಿಟ್ಟಿನಲ್ಲಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆ ನಡೆಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಬಣ್ಣಿಸಿದರು.

    ಮಹಾತ್ಮ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆಯಿಂದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಪದಕ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಸಾಧಕರನ್ನು ಶಾಲೆಗೆ ಕರೆಸಿ ಪ್ರೇರಣೆ ಉಪನ್ಯಾಸ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಅತ್ಯುನ್ನತ ಶಿಕ್ಷಣ ಪಡೆದು, ಶ್ರೇಷ್ಠ ಸಾಧನೆ ಮಾಡುತ್ತಿದ್ದಾರೆ. ಎಂದು ಹೇಳಿದರು.

    ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅಲ್ಲಾವುದೀನ್ ಸಾಗರ ಮಾತನಾಡಿದರು. ಪ್ರಥಮ ದರ್ಜೆ ಗುತ್ತಿಗೆದಾರ ಅಶೋಕ ಸಾಲಿಮಠ ಉದ್ಘಾಟಿಸಿದರು.

    ಗುರುಕುಲ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಚನಮಲ್ಲಯ್ಯ ಹಿರೇಮಠ, ಕಾರ್ಯದರ್ಶಿ ಮಹಾಂತಯ್ಯ ಹಿರೇಮಠ, ಪ್ರಮುಖರಾದ ಡಾ.ಧರ್ಮಣ್ಣ ಬಡಿಗೇರ, ಎಸ್.ಟಿ.ಬಿರಾದಾರ, ಗುರು ಸಾಲಿಮಠ, ವಿಜಯಕುಮಾರ ಬಂಗಾರಶೆಟ್ಟಿ, ಶಾಂತಲಿಂಗ ಪಾಟೀಲ್ ಕೋಳಕೂರ, ಶಿವರಾಜ ಅಂಡಗಿ, ಗುರುಬಸಪ್ಪ ಸಜ್ಜನಶೆಟ್ಟಿ, ಬಸವರಾಜ ಹೊನ್ನಳ್ಳಿ ಕುಮ್ಮನಶಿರಸಗಿ, ಬಿ.ಎಂ. ಪಾಟೀಲ್ ಕಲ್ಲೂರ (ಕೆ), ಜಗದೀಶ ಉಕ್ಕನಾಳಕರ್, ಜ್ಯೋತಿ ಸಾಲಿಮಠ, ರಾಜೇಂದ್ರ ಮಠ, ರಶ್ಮಿ ಕುಲಕರ್ಣಿ, ಮಲ್ಕಮ್ಮ ಹಿರೇಗೌಡ, ನಟರಾಜ ಕುಲಕರ್ಣಿ, ಶ್ರೀಹರಿ ಕರಕಿಹಳ್ಳಿ ಇತರರಿದ್ದರು.

    ಸಾಧಕರಿಗೆ ಗೌರವ: ವಿಜಯಕುಮಾರ ತೇಗಲತಿಪ್ಪಿ, ಎಸ್.ಕೆ. ಬಿರಾದಾರ ಅವರಿಗೆ ಸಾಹಿತ್ಯ ಸೇವಾ ರತ್ನ ಹಾಗೂ ನಿವೃತ್ತ ಶಿಕ್ಷಕರಾದ ಎನ್.ಎಸ್.ಮಠ, ಗುಂಡಣ್ಣ ಯರಗೋಳ, ಸರಸ್ವತಿ ನಾಟೀಕಾರ, ನಿಂಗಣ್ಣ ನಾಯ್ಕೋಡಿ, ಸಿದ್ರಾಮಪ್ಪ ತಳಕೇರಿ, ಬಸಣ್ಣ ಪೂಜಾರಿ, ಈರಯ್ಯ ಹಿರೇಮಠ, ಪರಸಪ್ಪ ಮಾದರ, ಕೇಸು ಪವಾರ್ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts