More

    ರೈತನ ಮಗನಿಗೆ ಚಿನ್ನದ ಪದಕ

    ಅಥಣಿ ಗ್ರಾಮೀಣ: ಸಾಧನೆ ಮಾಡುವ ಗುರಿ ಮತ್ತು ಛಲ ಇದ್ದರೆ ಸಾಧನೆ ತಮ್ಮದಾಗುತ್ತದೆ ಎನ್ನುವುದಕ್ಕೆ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಓರ್ವ ರೈತನ ಮಗ ಡಾ.ಭೀಮಪ್ಪ ಶಿವಪ್ಪ ಅಜ್ಜಣಗಿ ಪಶುವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಡಾಕ್ಟರೇಟ್ ಪದವಿ ಪಡೆದು ಸಾಧನೆ ಮಾಡಿರುವುದು ಸ್ಪಷ್ಟ ಉದಾಹರಣೆ.

    ಅ .16ರಂದು ಬೀದರನಲ್ಲಿ ಜರುಗಿದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಶು ವೈದ್ಯಕೀಯ ಶಸ ಚಿಕಿತ್ಸೆ ಮತ್ತು ಕ್ಷ-ಕಿರಣಶಾಸ ವಿಷಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರಿಂದ ರಾಜ್ಯಪಾಲ ಥಾವರಚಂದ್ ಗೆಹಲೋತ್, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ ಹಾಗೂ ಬೀದರನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ. ವೀರಣ್ಣ ಅವರು ಡಾ. ಭೀಮಪ್ಪ ಅಜ್ಜಣಗಿ ಅವರಿಗೆ ಡಾಕ್ಟರ್ ಆ್ ಫಿಲಾಸಪಿ (ಪಿಎಚ್‌ಡಿ) ಪದವಿ ಪ್ರದಾನ ಮಾಡಿದ್ದಾರೆ.

    ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕೃಷಿ ಕುಟುಂಬದದಲ್ಲಿ ಡಾ.ಭೀಮಪ್ಪ ಅಜ್ಜಣಗಿ 1987ರ ಮೇ 15ರಂದು ಜನಿಸಿದ್ದಾರೆ. ಅವರಿಗೆ ತಂದೆ ಶಿವಪ್ಪ, ತಾಯಿ ಕಲಾವತಿ ಹಾಗೂ ಮೂವರು ಸಹೋದರರಿದ್ದಾರೆ. ಮೂವರು ಸಹೋದರರಲ್ಲಿ ಓರ್ವ ಪೊಲೀಸ್ ಪೇದೆ. ಇನ್ನೊಬ್ಬರು ಕೃಷಿ ಜತೆಗೆ ಕುರಿ ಸಾಕಣೆ, ಮೂರನೆಯವರು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

    1995ರಿಂದ 2001ರಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, 2001ರಿಂದ 2004ರ ವರೆಗೆ ಮೋಳೆ ಹಾಗೂ ಸಂಕೇಶ್ವರದ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಸಂಕೇಶ್ವರದ ದುರದುಂಡೀಶ್ವರ ಶಿಕ್ಷಣ ಸಂಸ್ಥೆಯಲ್ಲಿ 2004ರಿಂದ 2006ರವೆರೆಗೆ ಪಿಯುಸಿ ಓದಿದರು. 2011ರಲ್ಲಿ ಬೀದರ ಪಶುಪಾಲನಾ ಮತ್ತು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿ.ವಿ.ಎಸ್.ಸಿ ಮತ್ತು ಎ.ಎಚ್ ಸ್ನಾತಕ ಪದವಿ ಪಡೆದರು. 2013ರಲ್ಲಿ ಶಸಚಿಕಿತ್ಸೆ ಮತ್ತು ಕ್ಷ-ಕಿರಣ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‌್ಯಾಂಕ್ ಪಡೆದು ಸ್ನಾತಕೋತ್ತರ
    (ಎಂ.ವಿ.ಎಸ್.ಸಿ) ಪದವಿ ಪೂರೈಸಿದರು.

    2013-14ನೇ ಸಾಲಿನಲ್ಲಿ ಜರುಗಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯರ ನೇಮಕಾತಿಯಲ್ಲಿ ರಾಜ್ಯಕ್ಕೆ 81ನೇ ರ‌್ಯಾಂಕ್ ಪಡೆದು ಕ್ಲಾಸ್-1 ಕೇಡರ್‌ನಲ್ಲಿ ಪತ್ರಾಂಕಿತ ಅಧಿಕಾರಿ ಹಾಗೂ ಪಶುವೈದ್ಯಾಧಿಕಾರಿಯಾಗಿ ಚಿಕ್ಕೋಡಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಸೇವೆ ಆರಂಭಿಸಿದರು. ಬಳಿಕ ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಅಥಣಿ, ಜಮಖಂಡಿ ತಾಲೂಕುಗಳ ಹಾಗೂ ಮಹಾರಾಷ್ಟ್ರದ ಗಡಿಭಾಗದ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ಅಥಣಿ ತಾಲೂಕಿನ ಸತ್ತಿ ಗ್ರಾಮದ ಪಶು ಆಸ್ಪತ್ರೆಗೆ ವರ್ಗಾವಣೆಯಾದರು. ಅಕ್ಟೋಬರ್ 2019ರಲ್ಲಿ ಬೀದರನಲ್ಲಿ ಮತ್ತೆ ಶಸಚಿಕಿತ್ಸೆ ಮತ್ತು ಕ್ಷ-ಕಿರಣ ವಿಭಾಗಕ್ಕೆ ಪ್ರವೇಶ ಪಡೆದು ಇದೀಗ ಪಿಎಚ್.ಡಿ ಜತೆಗೆ ಬಂಗಾರದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts