More

    ರಾಮ ಪೂಜಾರಿ ಅವರು ರಾಷ್ಟ್ರಪತಿ ಸೇವಾ ಪದಕಕ್ಕೆ ಆಯ್ಕೆ

    ಗುರುಪುರ: ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಬಜ್ಪೆ ಪೊಲೀಸ್ ಠಾಣೆಯ ಎಎಸ್‌ಐ ರಾಮ ಪೂಜಾರಿ ಅವರು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿ ಸೇವಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಅವರು ಕಳೆದ 30 ವರ್ಷಗಳ ಸೇವಾ ಅವಧಿಯಲ್ಲಿ ಬ್ರಹ್ಮಾವರ, ಸುಳ್ಯ, ಎಸ್‌ಪಿ ವಿಶೇಷ ಪತ್ತೆ ದಳ, ಮೂಡುಬಿದಿರೆ, ಮೂಲ್ಕಿ, ಮಂಗಳೂರು ಸಿಸಿಬಿ ಘಟಕ ಹಾಗೂ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕಾರವಾರದ ಪಿಟಿಸಿಯಲ್ಲಿ ತರಬೇತಿ ಪಡೆದಿರುವ ಇವರು ಒಂದು ಬಾರಿ ಮಂಗಳೂರಿನಿಂದ ಕಾರವಾರಕ್ಕೆ ಸರ್ಕಾರಿ ಬಸ್ಸಿನಲ್ಲಿ ಹೋಗುವಾಗ ಹೊನ್ನಾವರದ ಬಾರ್ಜ್‌ನಲ್ಲಿದ್ದ ಬಸ್ ನೀರಿನಲ್ಲಿ ಮುಳಗಿದ್ದು, 25 ಜನರ ಪ್ರಾಣ ರಕ್ಷಿಸಿದ್ದರು.

    ಇದುವರೆಗೆ 35 ಕೊಲೆ ಪ್ರಕರಣ ಭೇದಿಸಿದ್ದು, ಒಂದೊಮ್ಮೆ ರಾಷ್ಟ್ರವ್ಯಾಪಿ ಪ್ರಚಾರದಲ್ಲಿದ್ದ ಮೂಡುಬಿದಿರೆ ಜೈನ ಬಸದಿಯ ಪ್ರಕರಣದ ಪ್ರಮುಖ ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದರು. ಇವರಿಗೆ 2014ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗೌರವ ಚಿನ್ನದ ಪದಕ ಲಭಿಸಿತ್ತು.

    ರಾಷ್ಟ್ರಪತಿ ಪದಕ ಪಡೆಯಲಿರುವ ಪೂಜಾರಿಯವರಿಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಬಜ್ಪೆ ಪೊಲೀಸ್ ನಿರೀಕ್ಷಕ ಸಂದೇಶ್ ಸಹಿತ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts