More

    ಕಗ್ಗಂಟಾದ ಅಭ್ಯರ್ಥಿಗಳ ಆಯ್ಕೆ

    ಕೋಲಾರ: ಲೋಕಸಭೆ ಚುನಾವಣಾ ಮುಹೂರ್ತ ನಿಗದಿಯಾಗಿದ್ದರೂ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳದೆ ಇರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

    ಮೂರು ಪಕ್ಷಗಳಿಗೂ ಲೋಕಸಭೆ ಪ್ರತಿಷ್ಠೆಯಾಗಿದ್ದು, ಅಧಿಕಾರದಲ್ಲಿರುವ ಕಾಂಗ್ರೆಸ್​ಗೆ ಸೆಡ್ಡು ಹೊಡೆಯಲು ಬಿಜೆಪಿ&ಜೆಡಿಎಸ್​ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್​ ಭದ್ರಕೋಟೆಯಾಗಿದ್ದ ಕೋಲಾರವನ್ನು ಮರಳಿ ತೆಕ್ಕೆಗೆ ಪಡೆಯಲು ಕೆಪಿಸಿಸಿ ಕಸರತ್ತು ನಡೆಸುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೈತ್ರಿಕೂಟದಲ್ಲಿ ಕೋಲಾರ ಕ್ಷೇತ್ರವು ಜೆಡಿಎಸ್​ಗೆ ಹಂಚಿಕೆಯಾಗಿದೆ ಎನ್ನಲಾದರೂ ಕ್ಷೇತ್ರದ ಬಿಜೆಪಿ ಹಾಲಿ ಸಂಸದ ಎಸ್​.ಮುನಿಸ್ವಾಮಿ ಅವರಿಗೆ ಬಿಜೆಪಿಯಿಂದ ಟಿಕೆಟ್​ ನೀಡಬೇಕು ಎಂಬ ಕೂಗು ಬಲವಾಗಿದೆ.
    2019ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕೆ.ಎಚ್​.ಮುನಿಯಪ್ಪ ಈ ಬಾರಿ ಸ್ಪರ್ಧೆಗೆ ಆಸಕ್ತಿ ತೋರಿದ್ದು, ಟಿಕೆಟ್​ಗಾಗಿ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿದ್ದಾರೆ. ಹಾಗೆಯೇ, ಮೈತ್ರಿ ಅಭ್ಯರ್ಥಿ ೈನಲ್​ ಆಗದಿರುವುದು ಬಿಜೆಪಿ, ಜೆಡಿಎಸ್​ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
    ಜೆಡಿಎಸ್​ನಿಂದ ಸ್ಪರ್ಧಿಸಲು ಯಾರೊಬ್ಬರು ಧೈರ್ಯವಾಗಿ ಮುಂದೆ ಬರುತ್ತಿಲ್ಲ. ಹೀಗಾಗಿ ಟಿಕೆಟ್​ ಸಿಗಬಹುದು ಎಂಬ ನಿರೀೆಯಲ್ಲಿರುವ ಸಂಸದ ಮುನಿಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್​ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ನಡೆಸಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ತಾಲೂಕು ವಿವಿಧ ಟಕಗಳ ಅಧ್ಯಕ್ಷರು ಭಾಗಿಯಾಗಿ, ಅಖಾಡದ ಕುರಿತು ಚರ್ಚೆ ನಡೆಸಿದ್ದಾರೆ.

    ಟಬಂಧನ್​, ಜೆಡಿಎಸ್​ ಮುಖಂಡರ ನಿಲುವೇನು…?
    ಸತತವಾಗಿ 7 ಬಾರಿ ಸಂಸದರಾಗಿದ್ದ ಸಚಿವ ಕೆ.ಎಸ್​.ಮುನಿಯಪ್ಪ, 2019ರ ಚುನಾವಣೆಯಲ್ಲಿ ಕಾಂಗ್ರೆಸ್​ ಮುಖಂಡರ ಒಳಜಗಳದಿಂದ ಪರಾಭವಗೊಂಡಿದ್ದರು. ಆ ಸೇಡು ತೀರಿಸಿಕೊಳ್ಳಲು ನನಗೆ ಟಿಕೆಟ್​ ನೀಡುವಂತೆ ಕೆಎಚ್​ಎಂ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಟಿಕೆಟ್​ ಕೈ ತಪ್ಪಿದರೆ ಸೂಚಿಸಿದ ವ್ಯಕ್ತಿಗೆ ಮನ್ನಣೆ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಒಂದು ವೇಳೆ ಮುನಿಯಪ್ಪ ಅಭ್ಯರ್ಥಿಯಾದರೆ ಟಬಂಧನ್​ ನಿಲುವು ಏನು ಎಂಬುದು ಸದ್ಯದ ಕುತೂಹಲದ ಪ್ರಶ್ನೆ. ಕಳೆದ ಚುನಾವಣೆಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್​, ಶಾಸಕ ಕೊತ್ತೂರು ಜಿ.ಮಂಜುನಾಥ್​ ನೇರವಾಗಿಯೇ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು. ಸ್ವಪಕ್ಷದ ಕೆಲ ಮುಖಂಡರು ಕೂಡ ಮುನಿಯಪ್ಪ ಅವರನ್ನು ಸೋಲಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು ಗುಟ್ಟಾಗಿ ಉಳಿದಿಲ್ಲ. ಪ್ರತಿ ಬಾರಿಯು ಮುನಿಯಪ್ಪ ಜೆಡಿಎಸ್​ ಶಾಸಕರು, ಮುಖಂಡರ ಬೆಂಬಲದಿಂದ ಗೆಲುವು ಸಾಧಿಸುತ್ತಿದ್ದರು ಎಂಬ ಮಾತಿದೆ. ಈ ಬಾರಿ ಮುನಿಯಪ್ಪ ಟಿಕೆಟ್​ ಗಿಟ್ಟಿಸಿಕೊಂಡರೂ ಮಾಜಿ ಶಾಸಕ ಜೆ.ಕೆ.ಕೃಷ್ಣರೆಡ್ಡಿ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಯಾರಿಗೆ ಬೆಂಬಲ ಸೂಚಿಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

    ಸವಾಲಾದ ಜೆಡಿಎಸ್​ ಅಭ್ಯರ್ಥಿ ಆಯ್ಕೆ
    ಜೆಡಿಎಸ್​ನಿಂದ ಮಲ್ಲೇಶ್​ ಬಾಬು, ಸಮೃದ್ಧಿ ಮಂಜುನಾಥ್​ ಅಕಾಂಗಳಾಗಿದ್ದು, ಮಲ್ಲೇಶ್​ ಬಾಬು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಸಮೃದ್ಧಿ ಮಂಜುನಾಥ್​ ಮುಳಬಾಗಿಲು ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಹೈಕಮಾಂಡ್​ ಸೂಚಿಸಿದರೆ ಮಾತ್ರ ಸ್ಪರ್ಧೆ ಮಾಡಲಿದ್ದಾರೆ. ಒಂದು ವೇಳೆ ಈ ಇಬ್ಬರು ಟಿಕೆಟ್​ ಬೇಡ ಎಂದರೆ ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿಗೆ ದೊರೆಯಬಹುದು. ಆದರೆ ಎರಡ್ಮೂರು ದಿನಗಳ ಬೆಳವಣಿಗೆಳಿಂದ ಕೋಲಾರ ಕ್ಷೇತ್ರವು ಬಿಜೆಪಿ ನಿಕ್ಕಿಯಾಗಲಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜೆಡಿಎಸ್​ಗೆ ಟಿಕೆಟ್​ ದೊರೆಯುವ ಅವಕಾಶಗಳಿವೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts