More

    ಕೌಟುಂಬಿಕ ಕಲಹ ಕೇಸ್‌ನಲ್ಲಿ ಪೇಸ್ ತಪ್ಪಿತಸ್ಥ; 8 ವರ್ಷಗಳ ಕಾನೂನು ಹೋರಾಟದಲ್ಲಿ ರಿಯಾಗೆ ಜಯ

    ಮುಂಬೈ: ಮಾಜಿ ಸಂಗಾತಿ ರಿಯಾ ಪಿಳ್ಳೆ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣದಲ್ಲಿ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತಪ್ಪಿತಸ್ಥರು ಎಂದು ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.

    ರೂಪದರ್ಶಿ ರಿಯಾ ಪಿಳ್ಳೆ ಗೆ 50 ಸಾವಿರ ರೂ. ಮಾಸಿಕ ಬಾಡಿಗೆ ನೀಡುವಂತೆಯೂ ಕೋರ್ಟ್ ಸೂಚಿಸಿದ್ದು, ಇಬ್ಬರೂ ಪಾಲುದಾರರಾಗಿರುವ ಬಾಂದ್ರಾದ ಮನೆಯನ್ನು ತೊರೆಯಲು ಪೇಸ್ ನಿರ್ಧರಿಸಿದರೆ ಮಾಸಿಕ 1 ಲಕ್ಷ ರೂ. ಜೀವನಾಧಾರವನ್ನೂ ನೀಡಬೇಕೆಂದು ಆದೇಶಿಸಲಾಗಿದೆ. ರಿಯಾ ಪಿಳ್ಳೆ ಕೂಡ ಅದೇ ಮನೆಯಲ್ಲಿ ಮುಂದುವರಿಯಲು ಬಯಸಿದರೆ ಆಕೆಗೆ ಈ ಹಣಕಾಸು ಪರಿಹಾರವನ್ನು ನೀಡಬೇಕಾಗಿಲ್ಲ ಎಂದೂ ಕೋರ್ಟ್ ತಿಳಿಸಿದೆ.

    ಮಹಿಳೆ ಮೇಲಿನ ಕೌಟುಂಬಿಕ ಹಿಂಸೆ ಕಾಯ್ದೆಯಡಿ ರಕ್ಷಣೆ ಒದಗಿಸಬೇಕೆಂದು 2014ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ರಿಯಾ ಪಿಳ್ಳೆ , ಕಳೆದ 8 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದರು. ಅದಕ್ಕೆ ಮುನ್ನ 8 ವರ್ಷಗಳ ಕಾಲ ಅವರು ಪೇಸ್ ಜತೆಗೆ ಸಹಜೀವನ (ಲಿವ್-ಇನ್) ನಡೆಸಿದ್ದರು. ಈ ವೇಳೆ ಪೇಸ್ ದೈಹಿಕ, ಮಾನಸಿಕ ಮತ್ತು ಆರ್ಥಿಕ ದೌರ್ಜನ್ಯ ಎಸಗಿದ್ದಾರೆ ಎಂದು ರಿಯಾ ಆರೋಪಿಸಿದ್ದರು. ನಟ ಸಂಜಯ್ ದತ್ ಅವರ ಮಾಜಿ ಪತ್ನಿಯೂ ಆಗಿರುವ ರಿಯಾ, ಪೇಸ್ ಜತೆಗಿನ ಸಂಬಂಧದಿಂದ ಓರ್ವ ಪುತ್ರಿಯನ್ನು ಹೊಂದಿದ್ದಾರೆ.

    ಕುಡಿದು ವಾಹನ ಚಲಾಯಿಸಿ ಅಪಘಾತ; ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts