More

    ಮದ್ವೆ ಆದಾಗಿನಿಂದ ಗಂಡ ನನ್ನನ್ನು ಮುಟ್ಟಿಲ್ಲವೆಂದು ಧರಣಿ ಕುಳಿತ ಪತ್ನಿ! ಮುಟ್ಟದಿರಲು ಕಾರಣ ತಿಳಿಸಿದ ಪತಿ

    ಹೈದರಾಬಾದ್​: ವೇದ-ಮಂತ್ರಗಳ ಸಾಕ್ಷಿಯಾಗಿ, ಹಿರಿಯರು ಹಾಗೂ ಬಂಧುಗಳು ಸಮ್ಮುಖದಲ್ಲಿ ಮದುವೆ ಎಂಬ ಬಂಧನದಲ್ಲಿ ಒಂದಾದ ಜೋಡಿ, ನೂರು ವರ್ಷಗಳ ಕಾಲ ಸುಖವಾಗಿರಲೆಂದು ಎಲ್ಲರು ಆಶೀರ್ವದಿಸುತ್ತಾರೆ. ಆದರೂ ಇತ್ತೀಚೆಗಷ್ಟೇ ಮದುವೆಯಾದ ಜೋಡಿ ಭಿನ್ನಾಭಿಪ್ರಾಯದಿಂದ ಬೇರೆಯಾಗಿರುವುದನ್ನು ನಾವು ನೋಡಿದ್ದೇವೆ. ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆಯರಿಂದ ಕಿರುಕುಳಕ್ಕೆ ಒಳಗಾಗುವ ಅಥವಾ ಹೆಣ್ಣು ಮಗು ಹುಟ್ಟಿತ್ತು ಎಂಬ ಹಿಂಸೆಗೆ ಒಳಗಾಗಿ ಮದುವೆ ಬಂಧನವನ್ನು ಬಿಡಿಸಿಕೊಳ್ಳುವವರೂ ಇದ್ದಾರೆ. ಇನ್ನು ಕೆಲವರು ತನಗಾದ ಅನ್ಯಾಯದ ವಿರುದ್ಧ ಹೋರಾಡಲು ಗಂಡನ ಮನೆಯವರ ವಿರುದ್ಧವೇ ಧರಣಿ ಕುಳಿತುಬಿಡುತ್ತಾರೆ. ಇದಕ್ಕೆ ತಾಜಾ ಘಟನೆಯೊಂದು ಸಾಕ್ಷಿಯಾಗಿದೆ. ಮದುವೆಯಾದಾಗಿನಿಂದ ನನ್ನ ಗಂಡ ನನ್ನನ್ನು ಮುಟ್ಟೇ ಇಲ್ಲ ಮತ್ತು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ, ನ್ಯಾಯ ಕೊಡಿಸುವಂತೆ ಮಾನವ ಮನೆ ಮುಂದೆಯೇ ಮಹಿಳೆಯೊಬ್ಬಳು ಧರಣಿ ಕುಳಿತ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

    ಟಿಎಸ್‌ಆರ್‌ಟಿಸಿ ಯೂನಿಯನ್‌ ಮುಖಂಡ ರಾಜರೆಡ್ಡಿ ಅವರ ಮನೆ ಜಗಳ ಈಗ ಬೀದಿಗೆ ಬಿದ್ದಿದೆ. ಮದುವೆಯಾದಾಗಿನಿಂದ ತನ್ನ ಪತಿ ದೂರವಾಗಿದ್ದಾರೆ ಎಂದು ಮಾವನ ಮನೆ ಮುಂದೆ ಮಹಿಳೆ ಧರಣಿ ಕೂತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವರ್ಷ ಮೇ 21 ರಂದು ರಾಜರೆಡ್ಡಿ ಅವರ ಮಗ ಕಾರ್ತಿಕ್ ರೆಡ್ಡಿ ಅವರನ್ನು ಪಾವನಿ ಎಂಬುವರು ವಿವಾಹವಾದರು. ಮದುವೆಗೂ ಮುನ್ನವೇ ಪತಿ ತೊಂದರೆ ಕೊಡುತ್ತಿದ್ದ, ನಿಶ್ಚಿತಾರ್ಥದ ನಂತರ ಸಂಬಂಧ ಮುರಿದು ಬಿದ್ದಲ್ಲಿ ತಂದೆ-ತಾಯಿ ಮರ್ಯಾದೆ ಹೋಗುತ್ತದೆ ಅಂದುಕೊಂಡು ಎಲ್ಲವನ್ನು ಸಹಿಸಿಕೊಂಡೆ. ನನ್ನ ಮದುವೆಗೆ ಪಾಲಕರು 30 ಲಕ್ಷ ರೂಪಾಯಿ ಸಾಲ ಮಾಡಿದ್ದು, ಪಾಲಕರು ಕೊಟ್ಟ ಚಿನ್ನವನ್ನೂ ಸಹ ಮಾವನ ಮನೆಯವರು ನೀಡುತ್ತಿಲ್ಲ ಎಂದು ಪಾವನಿ ಆರೋಪಿಸಿದ್ದಾರೆ.

    ಪತಿ ನನ್ನೊಂದಿಗೆ ಎಂದಿಗೂ ಸಂತೋಷವಾಗಿಲ್ಲ ಮತ್ತು ಮದುವೆಯಾದಾಗಿನಿಂದ ನನ್ನನ್ನು ಮುಟ್ಟಿಲ್ಲ ಎಂದು ಪಾವನಿ ಅಸಮಾಧಾನ ಹೊರಹಾಕಿದ್ದಾರೆ. ತನಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಸಿಗಲೆಂದು ಮಾವನ ಮನೆ ಮುಂದೆ ಧರಣಿ ಕುಳಿತಿದ್ದೇನೆ ಎಂದು ಪಾವನಿ ಹೇಳಿದ್ದಾರೆ. ರಾಜಕೀಯ ಮುಖಂಡರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

    ನನ್ನ ಪತಿ ಕೂಡ ನನ್ನ ಪರವಾಗಿಲ್ಲ. ಆತ ತನ್ನ ಮೇಲೆ ಯಾವುದೇ ಭಾವನೆಗಳನ್ನು ತೋರಿಸುವುದಿಲ್ಲ ಎಂದು ಪಾವನಿ ಅಳಲು ತೋಡಿಕೊಂಡರು. ತನಗೆ ಚರ್ಮದ ಅಲರ್ಜಿ ಇದೆ ಎಂದು ಆರೋಪಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಪಾವನಿ ಧರಣಿ ನಡೆಸುತ್ತಿರುವ ವಿಷಯ ತಿಳಿದ ಎಲ್.ಬಿ.ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಾವನಿಯ ಮಾತುಗಳನ್ನು ಆಲಿಸಿ, ನ್ಯಾಯ ಕೊಡಿಸುವ ಭರವಸೆ ನೀಡಿದರು. ಆದಾಗ್ಯೂ ನ್ಯಾಯ ಸಿಗುವವರೆಗೂ ಕದಲುವುದಿಲ್ಲ ಎಂದು ಗಂಡನ ಮನೆ ಮುಂದೆ ಪಾವನಿ ಧರಣಿ ಕುಳಿತಳು. ನನ್ನ ಗಂಡ ನನಗೆ ಬೇಕು ಎಂದು ಆಗ್ರಹಿಸಿದರು.

    ಇದೇ ವೇಳೆ ಪಾವನಿ ಪತಿ ಕಾರ್ತಿಕ್ ರೆಡ್ಡಿ ಮಾತನಾಡಿ, ಮದುವೆಯಾದಾಗಿನಿಂದ ನನ್ನ ಪತ್ನಿ ಅಲರ್ಜಿಯಿಂದ ಬಳಲುತ್ತಿರುವುದನ್ನು ನೋಡಿದ್ದೆ, ಹಾಗಾಗಿ ವೈದ್ಯರ ಬಳಿ ಹೋಗಿ ತೋರಿಸಿದ್ದೆ. ಆಕೆಗೆ ಸೋರಿಯಾಸಿಸ್ ಇದೆ ಎಂದು ಹೇಳಿದರು. ಈ ವಿಷಯವನ್ನು ಮೂವರು ವೈದ್ಯರು ಖಚಿತಪಡಿಸಿದ್ದಾರೆ. ಈ ಕಾರಣಕ್ಕಾಗಿ ನಾನು ನನ್ನ ಹೆಂಡತಿಯಿಂದ ದೂರವಿದ್ದೇನೆ. ಆದರೆ ಆಕೆ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾಳೆ ಎಂದರು.

    ಮದುವೆಗೆ ಮುನ್ನ ನನ್ನ ಸೊಸೆಗೆ ಸೋರಿಯಾಸಿಸ್‌ ಇತ್ತು ಎಂಬ ವಿಷಯವನ್ನು ಆಕೆಯ ಪಾಲಕರು ಮುಚ್ಚಿಟ್ಟು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಪಾವನಿಯ ಮಾವ ರಾಜರೆಡ್ಡಿ ಆರೋಪಿಸಿದರು. ಈ ವಿಚಾರವಾಗಿ ನನ್ನ ಮಗ ಚಿಂತಾಕ್ರಾಂತನಾಗಿರುತ್ತಾನೆ. ಅದಕ್ಕೆ ಅವಳಿಂದ ದೂರ ಉಳಿಯುತ್ತಿದ್ದಾನೆ ಎಂದಿದ್ದಾರೆ. ಈ ವಿವಾದ ಎಷ್ಟರ ಮಟ್ಟಿಗೆ ಹೋಗುತ್ತದೋ ಕಾದು ನೋಡಬೇಕು. ಸದ್ಯ ಪಾವನಿ ಅವರ ಧರಣಿ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್​)

    ಆರ್​​ಸಿಬಿಗೆ ಸೇರಿಕೊಳ್ಳಲಿದ್ದಾರೆ ರೋಹಿತ್​ ಶರ್ಮ!? ನಾಯಕತ್ವವೂ ಕೂಡ ಹಿಟ್​ಮ್ಯಾನ್​ ಹೆಗಲಿಗೆ

    ವಿರಾಟ್​ ಕೊಹ್ಲಿ ಕೊಟ್ಟ ವಿಶೇಷ ಉಡುಗೊರೆ ಪಡೆದು ರಿಂಕು ಸಿಂಗ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts