ಜಲ್ಲಿಕಟ್ಟು, ಕಂಬಳ ಪ್ರೋತ್ಸಾಹಿಸಿ ಸನಾತನ ಧರ್ಮ ಉಳಿಸಿ: ಸಂಸದ ತೇಜಸ್ವಿ ಸೂರ್ಯ

tejasvi surya
Published on

ಬೆಂಗಳೂರು: ‘ಜಲ್ಲಿಕಟ್ಟು’ ಮತ್ತು ‘ಕಂಬಳ’ವನ್ನು ರಕ್ಷಿಸಲು ಎಲ್ಲ ಪಕ್ಷಗಳು ಒಂದಾಗಬೇಕು. ಏಕೆಂದರೆ ‘ಈ ಆಟಗಳನ್ನು ಉಳಿಸಿದರೆ ಮಾತ್ರ ನಮ್ಮ ‘ಸನಾತನ ಧರ್ಮ’ ಉಳಿಯಲು ಸಾಧ್ಯ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕಂಬಳದಲ್ಲಿ 2 ನೇ ದಿನ ರೋಚಕ ಎಮ್ಮೆಗಳ ಓಟ ವೀಕ್ಷಿಸಿದ ನಂತರ ಮಾತನಾಡಿ, ‘ಸನಾತನ ಧರ್ಮ’ ವಿರೋಧಿಸುವುದನ್ನೇ ಕೆಲವರು ರೂಢಿಸಿಕೊಂಡಿದ್ದಾರೆ. ಅನ್ಯ ಧರ್ಮಗಳ ಬಗ್ಗೆ ಮಾತನಾಡದ ಇಂಥವರು ಬದಲಾಗಬೇಕು. ಧರ್ಮ ಉಳಿಸಲು ಎಲ್ಲ ಪಕ್ಷಗಳು ಒಂದಾಗಿ ಮುಂದೆ ಸಾಗಬೇಕು ಎಂದರು.

‘ಜಲ್ಲಿಕಟ್ಟು’ನಂತಹ ಸಾಂಪ್ರದಾಯಿಕ ಆಟಗಳನ್ನು ನಿಲ್ಲಿಸಲು ‘ಕೆಲವು ಹಿಡನ್​ಅಜೆಂಡಾ ಹೊಂದಿರುವ ಶಕ್ತಿಗಳು’ ಪ್ರಯತ್ನಿಸುತ್ತಿವೆ. ಇಂತಹವರಿಗೆ ಜನರೇ ಬುದ್ಧಿ ಕಲಿಸಬೇಕು. "ಜಲ್ಲಿಕಟ್ಟು" ಮತ್ತು "ಕಂಬಳ" ದಂತಹ ನಮ್ಮ ಸಾಂಪ್ರದಾಯಿಕ ಆಟಗಳನ್ನು ತಡೆಯಲು ವಿವಿಧ ಅಜೆಂಡಾಗಳನ್ನು ಹೊಂದಿರುವ ಕೆಲವು ಶಕ್ತಿಗಳು ನ್ಯಾಯಾಲಯಗಳಿಗೆ ಹೋಗುತ್ತಿರುವುದನ್ನು ನಾವು ಇಂದು ನೋಡಿದ್ದೇವೆ ಎಂದು ತೇಜಸ್ವಿಸೂರ್ಯ ಹೇಳಿದರು.

ಕರಾವಳಿ ಭಾಗದ "ಕಂಬಳ".ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಎಮ್ಮೆ ಓಟದ ಕಂಬಳ ರಾಜ್ಯದ ಹೆಮ್ಮೆಯ ಕ್ರೀಡೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net