ಇಂಡಿಯಾ ಓಪನ್​ನಲ್ಲಿ ಸೆಮಿಫೈನಲ್​ಗೇರಿದ ಪ್ರಣಯ್​, ಚಿರಾಗ್-ಸಾತ್ವಿಕ್​

bad web
Published on

ನವದೆಹಲಿ: ಎಂಟನೇ ಶ್ರೇಯಾಂಕಿತ ಎಚ್​ಎಸ್​ ಪ್ರಣಯ್​, ವಿಶ್ವ ನಂ. 2 ಡಬಲ್ಸ್​ ಜೋಡಿಯಾಗಿರುವ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಇಂಡಿಯಾ ಓಪನ್​ ಸೂಪರ್-750 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಎಚ್​ಎಸ್​ ಪ್ರಣಯ್​ ಶುಕ್ರವಾರ ನಡೆದ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ತೈವಾನ್​ನ ವಾಂಗ್​ ಜು ವೀ ವಿರುದ್ಧ 21-11, 17-21, 21-18ರಿಂದ ರೋಚಕ ಗೆಲುವು ಸಂಪಾದಿಸಿದರು. ಒಂದು ಗಂಟೆ 17 ನಿಮಿಷಗಳ ಕಾಲ ಸಾಗಿದ ಹೋರಾಟದಲ್ಲಿ ಪ್ರಣಯ್​ 2ನೇ ಗೇಮ್​ ಸೋತರೂ, ನಿರ್ಣಾಯಕ ಗೇಮ್​ನಲ್ಲಿ ಹೋರಾಟಯುತ ನಿರ್ವಹಣೆ ತೋರಿ ಗೆಲುವು ಒಲಿಸಿಕೊಂಡರು.

ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸಾಯಿರಾಜ್​ ಜೋಡಿ ಪುರುಷರ ಡಬಲ್ಸ್​ ವಿಭಾಗದಲ್ಲಿ ವಿಶ್ವ ನಂ. 5 ಡೆನ್ಮಾರ್ಕ್​ನ ಕಿಮ್​ ಆಸ್ಟ್ರುಪ್​-ಆಂಡರ್ಸ್​ ಸ್ಕಾರುಪ್​ ರಸ್ಮುಸೆನ್​ ಜೋಡಿಯನ್ನು 21-7, 21-10ರಿಂದ ಮಣಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net