'ಅವನು ನನ್ನವನು'; ವೈರಲ್ ಆಗ್ತಿದೆ ಸಾರಾ ಮನದಾಳದ ಮಾತು!

Untitled design (88)
Published on

ಮುಂಬೈ: ಏಕದಿನ ವಿಶ್ವಕಪ್​ 2023ರ ಪಂದ್ಯ ಆರಂಭಗೊಂಡ ದಿನದಿಂದಲೂ ಟೀಮ್​ ಇಂಡಿಯಾ ಗೆಲುವಿನ ಸುದ್ದಿ ಎಷ್ಟರ ಮಟ್ಟಿಗೆ ಹರಿದಾಡುತ್ತಿದ್ದೆಯೋ ಅದೇ ರೀತಿ ಇಬ್ಬರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುವ ಮುಖೇನ ಸಂಚಲನ ಮೂಡಿಸುತ್ತಿದೆ.  ಭಾರತ ಆಡುವ ಪ್ರತಿ ಪಂದ್ಯಕ್ಕೂ ಒಂದು ದಿನದ ಹಿಂದೆ ಮತ್ತು ಒಂದು ದಿನದ ಬಳಿಕ ಟ್ರೆಂಡಿಂಗ್​ನಲ್ಲಿರುವ ಸಾರಾ ತೆಂಡೂಲ್ಕರ್​ ಹಾಗೂ ಶುಭಮನ್​ ಗಿಲ್​ ಸದ್ಯ ಕ್ರಿಕೆಟ್​ ಅಭಿಮಾನಿಗಳು ಸೇರಿದಂತೆ ನೆಟ್ಟಿಗರ ಗಮನವನ್ನು ಸೆಳೆಯುವಲ್ಲಿ ಪ್ರಮುಖರಾಗಿದ್ದಾರೆ. ಈಗ ಸಾರಾ ಹಾಕಿರುವ ಫೋಟೋ ಮತ್ತು ಅದಕ್ಕೆ ಕೊಟ್ಟಿರುವ ಶೀರ್ಷಿಕೆ ಮತ್ತೊಮ್ಮೆ ಅನೇಕರನ್ನು ಭಾರೀ ಅನುಮಾನಕ್ಕೆ ದೂಡಿದೆ.

ಕಳೆದ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಆಡುವಾಗ ಮೊದಲು ಬ್ಯಾಟಿಂಗ್​ಗೆ ಬಂದ ಟೀಮ್​ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ ಶುಭಮನ್​ ಗಿಲ್​ ಉತ್ತಮ ಸ್ಟಾರ್ಟ್​ ಪಡೆದರು. ಪಂದ್ಯ ನೋಡಲು ಸ್ಟೇಡಿಯಂಗೆ ಆಗಮಿಸಿದ್ದ ಸಾರಾ ಕೂಡ ಗಿಲ್​ ಆಟದ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಪಂದ್ಯದ ವೇಳೆ 79* ರನ್​ಗೆ ರಿಟೈರ್ಡ್​ ಹರ್ಟ್​ ಆಗಿ ಪೆವಿಲಿಯನ್​ನತ್ತ ಸಾಗಿದ ಬೆನ್ನಲ್ಲೇ 'ಕಮ್​ ಬ್ಯಾಕ್​ ಮೋರ್​ ಸ್ಟ್ರಾಂಗರ್'​ ಎಂದು ಬರೆದು ಟ್ವೀಟ್​ ಮಾಡಿದ್ದರು. ಈ ಟ್ವೀಟ್​ ಕೂಡ ಅನೇಕನ್ನು ಸೆಳದಿತ್ತು.

ಇದೀಗ ಅದೇ ರೀತಿಯಲ್ಲಿ ತಮ್ಮದೇ ಹೊಸದೊಂದು ಫೋಟೋ ಹಾಕಿ, ಅದಕ್ಕೆ ಕೊಟ್ಟಿರುವ ಶೀರ್ಷಕೆ ತಮ್ಮಿಬ್ಬರ ಬಗ್ಗೆ ಇರುವ ಪ್ರೀತಿ-ಪ್ರೇಮದ ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಬಿಳಿ ಬಣ್ಣದ ಉಡುಗೆಯನ್ನು ತೊಟ್ಟು ಕ್ಲಿಕ್ಕಿಸಿಕೊಂಡಿರುವ ಫೋಟೊವೊಂದಕ್ಕೆ 'ಅವನು ನನ್ನವನು' ಎಂದು ಹಾರ್ಟ್​ ಎಮೋಜಿ ಹಾಕಿ ಪೋಸ್ಟ್​ ಮಾಡಿದ್ದಾರೆ. ಇದೊಂದು ಟ್ವೀಟ್​ ಸದ್ಯ ನೆಟ್ಟಿಗರ ಗಮನವನ್ನು ಸೆಳೆದಿದ್ದು, ಇದು ಶುಭಮನ್​ಗೆ ಹೇಳಿರುವುದು ಎಂಬುದು ಅನೇಕರ ಊಹೆಯಾಗಿದೆ.

ಇದೆಲ್ಲದರ ಮಧ್ಯೆ ಟೀಮ್​ ಇಂಡಿಯಾ ಏಕದಿನ ವಿಶ್ವಕಪ್​ 2023ರ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಫೈನಲ್​ ಪ್ರವೇಶಿಸಿದ್ದು, ಭಾನುವಾರ (ನ.19) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವಿಗಾಗಿ ಸೆಣಸಾಡಲಿದೆ. ಈ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್​ ಅಭಿಮಾನಿಗಳು ಸೇರಿದಂತೆ ಇಡೀ ವಿಶ್ವವೇ ಕಾತರದಿಂದ ಎದುರು ನೋಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net