More

    ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ

    ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತನ್ನದೆ ಆಗಿರುವ ಅಭಿಮಾನಿಗಳನ್ನು ಹೊಂದಿತ್ತು. ಈ ಕಾರ್ಯಕ್ರಮದ ಮೂಲಕವಾಗಿ ಪರಿಚಯವಾದ ಜೋಡಿ ನಟಿ ಸುಷ್ಮಿತಾ ಹಾಗೂ ಜಗ್ಗಪ್ಪ. ಈ ಮುದ್ದಾದ ಜೋಡಿ ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ

    ಹಲವಾರು ಶೋಗಳಲ್ಲಿ ಈ ಜೋಡಿ ಭಾಗಿಯಾಗಿದ್ದು, ವೇದಿಕೆಯ ಮೇಲೆ ಅನೇಕ ಬಾರಿ ಗಂಡ ಹೆಂಡತಿಯಾಗಿಯೇ ಪಾತ್ರ ನಿರ್ವಹಿಸಿದ್ದಾರೆ. ಇದೀಗ ನಿಜ ಜೀವನದಲ್ಲೂ ಸತಿ-ಪತಿಯಾಗಿ ಮುದ್ರೆ ಒತ್ತಲಿದ್ದಾರೆ. ಹಲವು ದಿನಗಳಿಂದ ಜಗ್ಗಪ್ಪ ಮತ್ತು ಸುಷ್ಮಿತಾ ಲವ್ ಮಾಡುತ್ತಿದ್ದಾರೆ. ಆದರೆ ಈ ಕುರಿತಯಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಕೆಲವು ದಿನಗಳ ಹಿಂದೆ ಖಾಸಗಿವಾಹಿನಿಯ ಶೋ ಮೂಲಕವಾಗಿ ಖಚಿತ ಪಡಿಸಿದ್ದರು. ಸದ್ಯದಲ್ಲೇ ಮದುವೆಯಾಗುತ್ತೇವೆ ಎಂದಿದ್ದರು.
    ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ
    ನಿನ್ನೆ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಭಿಮಾನಿಗಳು ಹೊಸ ಜೋಡಿಗೆ ಶುಭಕೊರಿದ್ದಾರೆ.
    ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಸುಷ್ಮಿತಾ-ಜಗ್ಗಪ್ಪ
    ಇಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನಾಳೆ ಮಾಂಗಲ್ಯ ಧಾರಣೆವಿದೆ. ಈ ಜೋಡಿಯ ವಿವಾಹ  ಮುಹೋತ್ಸವಕ್ಕೆ ಅನೇಕ ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಭಾಗಿಯಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts