ವೀಕ್ಷಕ ವಿವರಣೆಗಾರ ಸಮಿತಿಯಿಂದ ಟೀಮ್​ ಇಂಡಿಯಾ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಔಟ್​!

Sanjay Manjrekar
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಅವರನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವೀಕ್ಷಕ ವಿವರಣೆಗಾರ ಸಮಿತಿಯಿಂದ ಕೈಬಿಟ್ಟಿರುವುದಾಗಿ ಶನಿವಾರ ವರದಿಯಾಗಿದೆ.

ದೇಶಿ ಪಂದ್ಯಾವಳಿಗಳಲ್ಲಿ ಸಂಜಯ್​ ಮಂಜ್ರೇಕರ್​ ಅವರ ಕಾಮೆಂಟರಿ ನಿರಂತವಾಗಿತ್ತು. ಇದೀಗ ಬಿಸಿಸಿಐ ನಿರ್ಧಾರದಿಂದ ಕರೊನಾ ಭೀತಿಯಿಂದಾಗಿ ಏಪ್ರಿಲ್​ 15ಕ್ಕೆ ಮುಂದೂಡಲಾಗಿರುವ ಐಪಿಎಲ್​ ಟೂರ್ನಿಯಲ್ಲಿ ಮಂಜ್ರೇಕರ್ ಅನುಪಸ್ಥಿತಿ ಇರಲಿದೆ. ಈ ಮುಂಚಿನ ವೇಳಾಪಟ್ಟಿ ಪ್ರಕಾರ ಐಪಿಎಲ್​ ಮಾರ್ಚ್​ 29ರಿಂದ ಆರಂಭವಾಗಬೇಕಿತ್ತು.

ಗುರುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಳೆಯ ಕಾರಣದಿಂದ ರದ್ದಾದ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಭಾರತ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲೂ ಮಂಜ್ರೇಕರ್​ ಉಪಸ್ಥಿತರಿರಲಿಲ್ಲ. ಕರೊನಾ ಭೀತಿಯಿಂದಲೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಿಷೇಧಿಸಲಾಗಿದೆ.

ಮಂಜ್ರೇಕರ್​ ಅವರನ್ನು ಯಾಕೆ ಕೈಬಿಟ್ಟರು ಎಂಬುದಕ್ಕೆ ಇನ್ನೂ ಸ್ಪಷ್ಟತೆ ದೊರಕಿಲ್ಲ. ಆದರೆ, ಮಂಜ್ರೇಕರ್​ ಅವರ ಕಾರ್ಯವೈಖರಿ ಆಡಳಿತ ಮಂಡಳಿಗೆ ಸಂತಸ ತಂದಿಲ್ಲ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net