More

    ಸೌರಾಷ್ಟ್ರ ರಣಜಿ ಕ್ರಿಕೆಟ್ ಚಾಂಪಿಯನ್: ಜಿಗುಟು ಆಟದಲ್ಲಿ ಆತಿಥೇಯರ ಮೇಲುಗೈ ಬಂಗಾಳಕ್ಕೆ ಮತ್ತೆ ನಿರಾಸೆ

    ರಾಜ್​ಕೋಟ್: ದೇಶೀಯ ಕ್ರಿಕೆಟ್​ನಲ್ಲೇ ಅತ್ಯಂತ ಜಿಗುಟು ಬ್ಯಾಟಿಂಗ್​ಗೆ ಸಾಕ್ಷಿಯಾದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಸೌರಾಷ್ಟ್ರ ತಂಡ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿತು. ಇನಿಂಗ್ಸ್ ಮುನ್ನಡೆಗಾಗಿಯೇ ಅಂತಿಮ ದಿನದಾಟದವರೆಗೂ ಕುತೂಹಲ ಕೆರಳಿಸಿದ್ದ ಹಣಾಹಣಿಯಲ್ಲಿ ನಾಯಕ ಜೈದೇವ್ ಉನಾದ್ಕತ್ (96ಕ್ಕೆ2 ) ಮಾರಕ ದಾಳಿ ಮೂಲಕ ಆತಿಥೇಯ ತಂಡದ ಪಾಲಿಗೆ ಹೀರೋ ಎನಿಸಿಕೊಂಡರು. ಇದರೊಂದಿಗೆ ಸೌರಾಷ್ಟ್ರ ತಂಡ ತನ್ನ 73 ವರ್ಷಗಳ ಟೂರ್ನಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್​ಪಟ್ಟ ಅಲಂಕರಿಸಿತು. ಇನಿಂಗ್ಸ್ ಮುನ್ನಡೆಗಾಗಿ ಎರಡು ದಿನಗಳ ಕಾಲ ಹೋರಾಡಿದರೂ ನಿರಾಸೆ ಅನುಭವಿಸಿದ ಬಂಗಾಳ, 30 ವರ್ಷಗಳ ಬಳಿಕ ದೇಶೀಯ ಟ್ರೋಫಿ ಜಯಿಸುವ ಕನಸು ಕೂಡ ಭಗ್ನಗೊಂಡಿತು.

    ಸೌರಾಷ್ಟ್ರ ರಣಜಿ ಕ್ರಿಕೆಟ್ ಚಾಂಪಿಯನ್: ಜಿಗುಟು ಆಟದಲ್ಲಿ ಆತಿಥೇಯರ ಮೇಲುಗೈ ಬಂಗಾಳಕ್ಕೆ ಮತ್ತೆ ನಿರಾಸೆಎಸ್​ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ಅಂತ್ಯಗೊಂಡ ಪಂದ್ಯದಲ್ಲಿ 6 ವಿಕೆಟ್​ಗೆ 354 ರನ್​ಗಳಿಂದ ಅಂತಿಮ ದಿನದಾಟ ಆರಂಭಿಸಿದ ಬಂಗಾಳ ತಂಡ 381 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸೌರಾಷ್ಟ್ರ ಅಮೂಲ್ಯ 44 ರನ್ ಮುನ್ನಡೆಯೊಂದಿಗೆ ಪ್ರಶಸ್ತಿ ಖಾತ್ರಿಪಡಿಸಿಕೊಂಡಿತು. ಬಳಿಕ ಔಪಚಾರಿಕವಾಗಿ 2ನೇ ಸರದಿ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ 4 ವಿಕೆಟ್​ಗೆ 105 ರನ್​ಗಳಿಸಿತು. ಇದರೊಂದಿಗೆ ಚಹಾ ವಿರಾಮಕ್ಕೂ ಮೊದಲು ಪಂದ್ಯವನ್ನು ಡ್ರಾ ಘೋಷಿಸಲಾಯಿತು.

    ಜೈದೇವ್ ಮಾರಕ ದಾಳಿ: ಕಳೆದ ಎರಡೂ ದಿನಗಳಿಂದ ಜಿಗುಟು ಬ್ಯಾಟಿಂಗ್ ಮೂಲಕವೇ ಸೌರಾಷ್ಟ್ರ ತಂಡಕ್ಕೆ ತಿರುಗೇಟು ನೀಡುವ ಯತ್ನದಲ್ಲಿದ್ದ ಬಂಗಾಳದ ಹೋರಾಟ ಅಂತಿಮ ದಿನ ನಡೆಯಲಿಲ್ಲ. ಗುರುವಾರದ ಅಂತ್ಯಕ್ಕೆ ಮುರಿಯದ 7ನೇ ವಿಕೆಟ್​ಗೆ 91 ರನ್ ಪೇರಿಸಿದ್ದ ಅನುಷ್ಟಪ್ ಮಜುಮ್ದಾರ್ ಹಾಗೂ ಅರ್ನಾಬ್ ನಂದಿ ಜೋಡಿಗೆ ಜೈದೇವ್ ಬ್ರೇಕ್ ಹಾಕಿದರು. 58 ಹಾಗೂ 28 ರನ್​ಗಳಿಂದ ದಿನದಾಟ ಆರಂಭಿಸಿದ ಅನುಷ್ಟಪ್ ಹಾಗೂ ಅರ್ನಾಬ್ ಜೋಡಿ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬಂಗಾಳ ತಂಡದ ಕುಸಿತ ಕೂಡ ಆರಂಭಗೊಂಡಿತು. 27 ರನ್​ಗಳಿಗೆ ಸೇರಿಸುವಷ್ಟರಲ್ಲಿ ಬಂಗಾಳ ಸರ್ವಪತನ ಕಂಡಿತು.

    12- ಬಂಗಾಳ ತಂಡ ರಣಜಿ ಟ್ರೋಫಿಯಲ್ಲಿ ಅತಿಹೆಚ್ಚು ಬಾರಿ ಫೈನಲ್​ನಲ್ಲಿ ಸೋತ ತಂಡ ಎನಿಸಿಕೊಂಡಿತು. 14ನೇ ರಣಜಿ ಫೈನಲ್ ಪಂದ್ಯವಾಡಿದ ಬಂಗಾಳ ತಂಡ 12ನೇ ಬಾರಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ನಂತರದ ಸ್ಥಾನದಲ್ಲಿ ತಮಿಳುನಾಡು (12 ಫೈನಲ್, 10 ಸೋಲು) ಇದೆ.

    1950-51ರಿಂದಲೂ ರಣಜಿ ಟ್ರೋಫಿ ಆಡುತ್ತಿರುವ ಸೌರಾಷ್ಟ್ರ ತಂಡಕ್ಕಿದು ಮೊದಲ ಪ್ರಶಸ್ತಿಯಾಗಿದೆ. ಕಳೆದ 8 ವರ್ಷಗಳಲ್ಲಿ 4ನೇ ಬಾರಿ ಫೈನಲ್ ಪಂದ್ಯ ಇದಾಗಿತ್ತು. ಸೌರಾಷ್ಟ್ರ ತಂಡ ಈ ಮುನ್ನ ಸ್ವಾತಂತ್ರ್ಯ ಪೂರ್ವದಲ್ಲಿ ನವಾನಗರ (1936-37) ಮತ್ತು ವೆಸ್ಟರ್ನ್ ಇಂಡಿಯಾ (1942-43) ಹೆಸರಿನಲ್ಲಿ ಆಡಿದಾಗ 2 ಬಾರಿ ರಣಜಿ ಟ್ರೋಫಿ ಜಯಿಸಿತ್ತು.

    01= ಜೈದೇವ್ ಉನಾದ್ಕತ್ (67) ರಣಜಿ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗದ ಬೌಲರ್​ಗಳ ಪೈಕಿ ಕರ್ನಾಟಕದ ದೊಡ್ಡ ಗಣೇಶ್ (62) ದಾಖಲೆ ಹಿಂದಿಕ್ಕಿದರು.

    ಯೆಸ್, ನಾವು ರಣಜಿ ಟ್ರೋಫಿ ಜಯಿಸಿದ್ದೇವೆ. ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲೇ ಅತ್ಯಂತ ಸಂತೋಷಭರಿತ ನಾಯಕ ಎಂದು ಹೇಳಬಲ್ಲೆ. ಇದೇ ಲಯ ಮುಂದುವರಿಸಿಕೊಂಡು ಹೋಗಬೇಕು. ವೈಯಕ್ತಿಕವಾಗಿ ಈ ಟೂರ್ನಿ ಸಾಕಷ್ಟು ಸವಾಲು ಎದುರಾಗಿತ್ತು. ಟೂರ್ನಿಯುದ್ದಕ್ಕೂ ಈ ಸವಾಲು ಎದುರಿಸಿದೆ. ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ಹಂಬಲವಿದೆ.

    | ಜೈದೇವ್ ಉನಾದ್ಕತ್ ಸೌರಾಷ್ಟ್ರ ತಂಡದ ನಾಯಕ

    ಕ್ರಿಕೆಟ್​ ಪ್ರೇಮಿಗಳೇ ಗಮನಿಸಿ; ಮಾರ್ಚ್​ 29ರಂದು ಐಪಿಎಲ್​ ನಡೆಯಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts