ಕೋಚ್​ ಗೌತಮ್​ ಗಂಭೀರ್​ ಸುದ್ದಿಗೋಷ್ಠಿಗೆ ಸಂಜಯ್​ ಮಂಜ್ರೇಕರ್​ ಕಟುಟೀಕೆ!

web manjrekar
Published on

ನವದೆಹಲಿ: ಆಸ್ಟ್ರೆಲಿಯಾ ಪ್ರವಾಸಕ್ಕೆ ಮುನ್ನ ಭಾರತ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವುದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಕಾರ ಸಂಜಯ್​ ಮಂಜ್ರೇಕರ್​ ಕಿಡಿಕಾರಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಸರಿಯಾದ ನಡವಳಿಕೆ ತೋರಲು ಮತ್ತು ಪದಗಳನ್ನು ಬಳಸಲು ಗಂಭೀರ್​ಗೆ ತಿಳಿದಿಲ್ಲ. ಹೀಗಾಗಿ ಬಿಸಿಸಿಐ ಅವರನ್ನು ಇನ್ನು ಮುಂದೆ ಮಾಧ್ಯಮಗಳಿಂದ ದೂರವಿಡಬೇಕು ಎಂದು ಮಂಜ್ರೇಕರ್​ ಹೇಳಿದ್ದಾರೆ.

"ಈಗಷ್ಟೇ ಗಂಭೀರ್​ ಸುದ್ದಿಗೋಷ್ಠಿ ವೀಸಿದೆ. ಬಿಸಿಸಿಐ ಅವರನ್ನು ಮಾಧ್ಯಮಗಳಿಂದ ದೂರವಿಟ್ಟು, ಹಿನ್ನೆಲೆ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಉತ್ತಮ. ನಾಯಕ ರೋಹಿತ್​ ಶರ್ಮ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ಗೆ ಮಾತ್ರ ಮಾಧ್ಯಮಗಳೊಂದಿಗೆ ಮಾತನಾಡಲು ಬಿಡಬೇಕು' ಎಂದು ಮಂಜ್ರೇಕರ್​, ಗಂಭೀರ್​ ಸುದ್ದಿಗೋಷ್ಠಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net