ಸಾನಿಯಾ ಮಿರ್ಜಾ ಕಾಫಿ ಡೇಟ್! ಟಾಲಿವುಡ್ ಹೀರೋ ಜತೆ ಸಾನಿಯಾ ಹೊಸ ಜೀವನ? Sania Mirza dating ಫೋಟೋ ವೈರಲ್​

sania mirza
Published on

ದುಬೈ: (Sania Mirza dating) ಟೆನಿಸ್ ತಾರೆ ಸಾನಿಯಾ ಮಿರ್ಜಾ, ಶೋಯೆಬ್ ಮಲಿಕ್ ಜತೆಗಿನ ವಿಚ್ಛೇದನದ ನಂತರ ತೆಲುಗು ನಾಯಕನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು  ಸುದ್ದಿಯೊಂದು ಸೋಶಿಯಲ್​​ ಮೀಡಿಯಾದಲ್ಲಿ ಹಬ್ಬಿದೆ.  ಈ ಸುದ್ದಿ ಬೆನ್ನಲ್ಲೇ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಸಾನಿಯಾ ಮಿರ್ಜಾ  14 ವರ್ಷಗಳ ಹಿಂದೆ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿದ್ದರು. ನಂತರ ವಿಚ್ಛೇದನ ಪಡೆದರು. ಶೋಯೆಬ್ ಮಲಿಕ್ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದ ನಂತರ ಸಾನಿಯಾ ವಿಚ್ಛೇದನ ಮತ್ತು ಒಂಟಿಯಾಗಿ ವಾಸಿಸಲು ನಿರ್ಧರಿಸಿದರು. ತನ್ನ ಮಗ ಜತೆ ವಾಸವಾಗಿದ್ದಾರೆ.

ಟೆನಿಸ್ ಕ್ವೀನ್ ಈಗ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ ಎಂಬ ವದಂತಿಯು ಟಾಲಿವುಡ್ ವಲಯದಲ್ಲಿ ದಟ್ಟವಾಗಿದೆ. ಸದ್ಯ ಸಾನಿಯಾ ತೆಲುಗಿನ ಸ್ಟಾರ್ ಹೀರೋ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಹೀರೋ ಯಾರು ಎಂಬ ಬಗ್ಗೆ ಟಾಲಿವುಡ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಮದುವೆಗೆ ದಾರಿ ಮಾಡಿಕೊಡಲಿದೆ ಎಂಬುದು ಅಭಿಮಾನಿಗಳ ನಂಬಿಕೆ. ಈ ಸುದ್ದಿಗೆ ಸಾನಿಯಾ ಇನ್ನೂ ಪ್ರತಿಕ್ರಿಯಿಸಿಲ್ಲ, ಭವಿಷ್ಯದ ಯೋಜನೆಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸುದ್ದಿ ನಿಜವೋ ಅಥವಾ ವದಂತಿಯೋ ಎಂಬ ಬಗ್ಗೆ ಶೀಘ್ರದಲ್ಲೇ ಸ್ಪಷ್ಟತೆ ಸಿಗಲಿದೆ.

sania
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net