61 ವರ್ಷಗಳ ಹಿಂದೆ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ ? Petrol Bill

petrol
Published on

ನವದೆಹಲಿ: (Petrol Bill) ಪ್ರತಿನಿತ್ಯ ಬಳಸುವ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಯಾಗುತ್ತಲೆ ಇದೆ. ಪೆಟ್ರೋಲ್​ ಹಾಗೂ ಡಿಸೇಲ್​ ಬೆಲೆ ಕೂಡಾ ನೂರರ ಗಡಿದಾಟಿದೆ. ನಿತ್ಯ ರಸ್ತೆಗಿಳಿಯುವ ಕೋಟ್ಯಂತರ ವಾಹನಗಳಿಗೆ ಅಗತ್ಯವಾಗಿ ಬೇಕಾಗಿರುವ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ಅಪಾರವಾದ ಬೇಡಿಕೆಯಿದೆ.

ಜಗತ್ತು ನಿಧಾನವಾಗಿ ವಿದ್ಯುತ್ ಚಾಲಿತ ವಾಹನಗಳತ್ತ ಬದಲಾಗುತ್ತಿದೆಯಾದರೂ ಇಂದಿಗೂ ಇಂಧನಚಾಲಿತ ವಾಹನಗಳ ಅಧಿಪತ್ಯವೇ ಎಲ್ಲೆಡೆಯಿದೆ. ಆದರೆ ಇಂದಿಗೂ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಗಳಿಗೆ ಅಪಾರವಾದ ಬೇಡಿಕೆಯಿದೆ.

ನಾವು ದಿನನಿತ್ಯ ಬಳಸುವ ಅಗತ್ಯವಸ್ತುಗಳಿಂದ ಹಿಡಿದು ಪ್ರತಿಯೊಂದಕ್ಕೂ ಬೆಲೆ ಏರಿಕೆಯಾಗಿದೆ. ಪ್ರತಿ ವರ್ಷ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಆದರೆ 61 ವರ್ಷಗಳ ಹಿಂದೆ ಬೆಲೆ ಎಷ್ಟಿತ್ತು ಎಂಬುದು ಗೊತ್ತಾದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರ... ನಾವು ಇಂದು ಈ ಕುರಿತಾಗಿ ತಿಳಿಸಿಕೊಡಲಿದ್ದೇವೆ....

ಸೋಷಿಯಲ್ ಮೀಡಿಯಾ ಬಂದಾಗಿನಿಂದ ಪ್ರಪಂಚದಾದ್ಯಂತ ಏನೇ ನಡೆದರೂ ಅದು ನಮ್ಮ ಅಂಗೈಯಲ್ಲಿ ಕಾಣಿಸಿಕೊಳ್ಳುತ್ತಿದೆ. 1963ರಲ್ಲಿ ಐದು ಲೀಟರ್ ಪೆಟ್ರೋಲ್ ಬೆಲೆ ಕೇವಲ ರೂ. 3.60 ಕ್ಕೆ ಮಾರಾಟವಾದ ಬಿಲ್ ವೈರಲ್​​ ಆಗುತ್ತಿದೆ.

1963ರಲ್ಲಿ ರೂಪಾಯಿಯಲ್ಲಿ ಪೆಟ್ರೋಲ್ ಮಾರಿದರೆ.. ಈಗ ಲೀಟರ್ ಪೆಟ್ರೋಲ್ ರೂ. 110 ವರೆಗೆ. ಈಗಿನ ಬೆಲೆಗೆ ಹೋಲಿಸಿದರೆ, ಒಂದು ಬಾರಿ ಲೀಟರ್ ಪೆಟ್ರೋಲ್ ಒಂದು ರೂಪಾಯಿಗಿಂತ ಕಡಿಮೆಯಿತ್ತು, ಈ ಸುವರ್ಣ ದಿನಗಳು ಮತ್ತೆ ಬರುವುದಿಲ್ಲ ಎಂದು ನೆಟಿಜನ್‌ಗಳು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

1963 ರ ಫೆಬ್ರವಡಿ 2ರಂದು ಒಬ್ಬ ವ್ಯಕ್ತಿ ಭಾರತ್ ಪೆಟ್ರೋಲ್ -ಬಂಕ್ (Petrol Bunk) ಇಂದ 5 ಲೀಟರ್ ಪೆಟ್ರೋಲ್ ಖರೀದಿ ಮಾಡಿದ್ದು, ಅದರ ಬೆಲೆ ₹3 ರೂಪಾಯಿ 60 ಪೈಸೆ ಆಗಿದೆ. ಇದನ್ನು ಗಮನಿಸಿದರೆ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 72 ಪೈಸೆ ಎಂದು ಗೊತ್ತಾಗುತ್ತಿದೆ. ಆಗ ಪೆಟ್ರೋಲ್ ಬೆಲೆ 1 ರೂಪಾಯಿ ಕೂಡ ಆಗಿರಲಿಲ್ಲ. ಆದರೆ ಇಂದು ಸೆಂಚುರಿ ದಾಟಿದೆ. ಪೆಟ್ರೋಲ್ ಬೆಲೆ ಕೇಳಿ ಬಹಳಷ್ಟು ಜನರು ಶಾಕ್ ಆಗಿರೋದಂತೂ ನಿಜ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net