ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು

malik
Published on

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಶೋಯೆಬ್ ಮಲಿಕ್ ಅವರು ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಮೊದಲಿಗೆ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರಿಂದ ಬೇರ್ಪಟ್ಟು, ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಮದುವೆಯಾದ ನಂತರ ಕ್ರಿಕೆಟಿಗ ಭಾರಿ ಸುದ್ದಿಯಾಗಿದ್ದರು. ಮ್ಯಾಚ್​ ಫಿಕ್ಸ್ಂಗ್​ ಆರೋಪದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ದೊಡ್ಡ ವಿವಾದಕ್ಕೆ ಗುರಿಯಾಗಿದ್ದರು.

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಶೋಯೆಬ್​ ಪಾಕಿಸ್ತಾನದ ನಟಿ ಹಾಗೂ ಮಾಡೆಲ್​ ಸನಾ ಜಾವೆದ್ ಮದುವೆ ಬಳಿಕ ಮಲಿಕ್​ ಅದೃಷ್ಟ ಕೈಕೊಟ್ಟಿದೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶೋಯೆಬ್ ಮಲಿಕ್, ಕ್ವೆಟ್ಟಾ ಗ್ಲಾಡಿಯೇಟರ್ಸ್‌ ಎದುರಿನ ಪಂದ್ಯದ ವೇಳೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಈ ಆವೃತ್ತಿಯ ಪಿಎಸ್‌ಎಲ್ ಟೂರ್ನಿಯಲ್ಲಿ ಪದೇ ಪದೇ ಫಾರ್ಮ್​ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಮಲಿಕ್ ಫಾರ್ಮ್‌ ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೇ ಮೂರನೇ ಪತ್ನಿ ಸನಾ ಜಾವೆದ್‌ಗೂ ನಿರಾಸೆಯಾಗಿದೆ. ಇದರ ನಡುವೆ ಸಾನಿಯಾಗೆ ಕೈಕೊಟ್ಟು ಸನಾ ಕೈಹಿಡಿದಿದ್ದಕ್ಕೆ ಹೀಗಾಗಿದೆ ಎಂದು ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ. ಸನಾ ಜಾವೆದ್​ ಮೈದಾನಕ್ಕೆ ಬಂದಾಗಲೆಲ್ಲಾ ಸಾನಿಯಾ ಮಿರ್ಜಾ ಅಭಿಮಾನಿಗಳು ಟೀಕಿಸುತ್ತಿದ್ದಾರೆ.

ಇಂದಿಗೂ ಫಿಟ್ನೆಸ್ ವಿಚಾರದಲ್ಲಿ ಕೊಂಚವೂ ರಾಜಿಯಾಗದ ಶೋಯೆಬ್ ಮಲಿಕ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಎದುರಿನ ಪಂದ್ಯದ ವೇಳೆ ತಮ್ಮ ಝಲಕ್ ತೋರಿಸಲು ವಿಫಲವಾದರು. ಕರಾಚಿ ಕಿಂಗ್ಸ್ ಪರ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮಲಿಕ್ ರನ್ ಗಳಿಸಲು ಪರದಾಡಿದರು.
ಕ್ವೆಟ್ಟಾ ಗ್ಲಾಡಿಯೇಟರ್ಸ್ ಎದುರು 20 ಎಸೆತಗಳನ್ನು ಎದುರಿಸಿ ಕೇವಲ 12 ರನ್ ಗಳಿಸಿದ್ದಾರಷ್ಟೇ. ಅಬ್ರಾರ್ ಅಹಮದ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಜೇಸನ್ ರಾಯ್ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಪಿಎಸ್‌ಎಲ್ ಶುರುವಾದಾಗಿನಿಂದ ಪತಿ ಶೋಯೆಬ್ ಮಲಿಕ್‌ ಅವರನ್ನು ಹುರಿದುಂಬಿಸಲು ಮೈದಾನಕ್ಕೆ ಬರುತ್ತಿರುವ ಸನಾ ಜಾವೆದ್‌ಗೆ ಪದೇ ಪದೇ ನಿರಾಸೆ ಎದುರಾಗುತ್ತಲೇ ಇದೆ. ನೂತನ ಪತಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ಸ್ವತಃ ಸನಾ ಜಾವೆದ್‌ಗೂ ಕೂಡಾ ಒಂದು ರೀತಿ ಮುಜುಗರವನ್ನುಂಟು ಮಾಡುತ್ತಿದೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನದ ವದಂತಿಗಳ ನಡುವೆ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ. ಮಲಿಕ್ ಸಾಮಾಜಿಕ ಮಾಧ್ಯಮದಲ್ಲಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಸಾನಿಯಾ ಅವರೊಂದಿಗೆ ಸಂಬಂಧ ಕಡಿತಗೊಳಿಸಿದ್ದಾರೆ.

ಸಾನಿಯಾ ಹಾಗೂ ಶೋಯೆಬ್ ದಂಪತಿಗೆ ಇಜಾನ್ ಮಿರ್ಜಾ ಮಲಿಕ್ ಎನ್ನುವ ಮಗನಿದ್ದು, ಇಜಾನ್ ತಾಯಿ ಜತೆ ವಾಸವಾಗಿದ್ದಾನೆ. ಸಾನಿಯಾ ಮಿರ್ಜಾಗೆ ತಲಾಖ್ ನೀಡಿದ ಬಳಿಕ ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೆದ್ ಜತೆ ಮೂರನೇ ಮದುವೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net