More

    48ನೇ ವಯಸ್ಸಿನಲ್ಲಿ 3ನೇ ಮಗುವಿಗೆ ತಂದೆಯಾದ ಪಾಕ್​ ಮಾಜಿ ಸ್ಟಾರ್ ಕ್ರಿಕೆಟಿಗ! ಸಂತಸದಲ್ಲಿ ತೇಲಾಡಿದ ರಾವಲ್ಪಿಂಡಿ ಎಕ್ಸ್​​ಪ್ರೆಸ್

    ಪಾಕಿಸ್ತಾನ: ಟೀಮ್ ಇಂಡಿಯಾದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟರ್ ಎಂದು ಮುಕ್ತಕಂಠದಿಂದ ಗುಣಗಾನ ಮಾಡಿದ್ದ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮೂರನೇ ಬಾರಿಗೆ ತಂದೆಯಾಗಿದ್ದಾರೆ. ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಲೋಕಸಭಾ ಚುಣಾವಣೆಗೆ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ರೆಡಿ..! ಈ ಬಾರಿ ಮೋದಿ, ಅಮಿತ್ ಶಾ, ಸಿಂಗ್​ ಕಣಕ್ಕಿಳಿಯೋದು ಇಲ್ಲಿಂದ!

    ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ 48ನೇ ವಯಸ್ಸಿನಲ್ಲಿ ಮೂರನೇ ಮಗುವಿಗೆ ತಂದೆಯಾಗಿದ್ದಾರೆ. ಶುಕ್ರವಾರ ರಾತ್ರಿ ಅವರ ಮಡದಿ ರುಬಾಬ್ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಶೋಯೆಬ್​ ಅಖ್ತರ್ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗುವಿನ ಫೋಟೋವನ್ನು ಶೇರ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಅಖ್ತರ್​ಗೆ ಈಗಾಗಲೇ ಇಬ್ಬರು ಮುದ್ದಾದ ಮಕ್ಕಳಿದ್ದು, ಅವರಲ್ಲಿ ಮೊದಲ ಮಗು ಮೊಹಮ್ಮದ್ ಮಿಕೈಲ್ ಅಲಿ 2016 ರಲ್ಲಿ ಜನಿಸಿದರೆ, ಎರಡನೇ ಮಗು ಮೊಹಮ್ಮದ್ ಮುಜದ್ದದ್ ಅಲಿ 2019 ರಲ್ಲಿ ಜನಿಸಿದ್ದರು. ಇದೀಗ ಹುಟ್ಟಿರುವ ಮೂರನೇ ಮಗುವಿಗೆ ಅಖ್ತರ್ ನೂರಾ ಅಲಿ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ದಂಪತಿಗೆ ಹೆಣ್ಣು ಮಗು ಜನಿಸಿದ ಸುದ್ದಿ ತಿಳಿದು ಹಲವು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.
    ಮಗಳು ಹುಟ್ಟಿರುವ ಸಂತೋಷವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಪೋಟೋ ಸಮೇತ ಮಾಹಿತಿ ಹಂಚಿಕೊಂಡಿರುವ ಶೋಯೆಬ್ ಅಖ್ತರ್​, ‘ಮೈಕೆಲ್ ಮತ್ತು ಮುಜದ್ದದ್​ಗೆ ಈಗ ಸಹೋದರಿ ಸಿಕ್ಕಿದ್ದಾಳೆ. ಅಲ್ಲಾಹನು ನಮಗೆ ಹೆಣ್ಣು ಮಗುವನ್ನು ಅನುಗ್ರಹಿಸಿದ್ದಾನೆ. ನಾನು ಮತ್ತು ನನ್ನ ಇಡೀ ಕುಟುಂಬ ಮಗಳು ನೂರಾ ಅಲಿ ಅಖ್ತರ್ ಅವರನ್ನು ಬರ ಆತ್ಮೀಯವಾಗಿ ಮಾಡಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಶೋಯೆಬ್ ಅಖ್ತರ್ ರುಬಾಬ್ ಖಾನ್ ಅವರನ್ನು 11 ನವೆಂಬರ್ 2014 ರಂದು ವಿವಾಹ ವಾಗಿದ್ದರು ಆಗ ಅವರಿಗೆ 38 ವರ್ಷ. ಆಗ ರುಬಾಬ್‌ಗೆ 20 ವರ್ಷ. ಆ ಸಮಯದಲ್ಲಿ, ಅವರು ತನಗಿಂತ 18 ವರ್ಷ ಚಿಕ್ಕವಳಾದ ಹುಡುಗಿಯನ್ನು ಮದುವೆಯಾಗಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದರು.

    ಶೋಯೆಬ್ ಅಖ್ತರ್ ತಮ್ಮ ವೇಗದ ಬೌಲಿಂಗ್​ನಿಂದ ಎದುರಾಳಿಗಳ ಬೆವರಿಳಿಸುತ್ತಿದ್ದರು. ಅವರು 46 ಟೆಸ್ಟ್‌ಗಳಲ್ಲಿ 178 ವಿಕೆಟ್‌ಗಳನ್ನು ಮತ್ತು 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್‌ಗಳನ್ನು ಪಡೆದಿದ್ದಾರೆ. 15 ಟಿ20 ಪಂದ್ಯಗಳನ್ನಾಡಿರುವ ಅವರು 19 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ.. 2008ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅವರು 3 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 5 ವಿಕೆಟ್​​ಗಳನ್ನು ಪಡೆದರು. 2011ರಲ್ಲಿ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆ ನಂತರ ಹಲವು ವಾಹಿನಿಗಳ ನಿರೂಪಕರಾಗಿ ಮಿಂಚಿದರು.

    ಲೋಕಸಭಾ ಚುಣಾವಣೆಗೆ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ರೆಡಿ..! ಈ ಬಾರಿ ಮೋದಿ, ಅಮಿತ್ ಶಾ, ಸಿಂಗ್​ ಕಣಕ್ಕಿಳಿಯೋದು ಇಲ್ಲಿಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts