VIDEO | ಧೋನಿ ಫಾರ್ಮ್​ಹೌಸ್​​ನಲ್ಲಿ ಕುದುರೆಯನ್ನು ಮುದ್ದಿಸುವ ವಿಡಿಯೋ ವೈರಲ್​

Dhoni-IPL-horse web
Published on

ನವದೆಹಲಿ: ಐಪಿಎಲ್​ 14ನೇ ಆವೃತ್ತಿ ಕರೊನಾ ಹಾವಳಿಯಿಂದಾಗಿ ಮೊಟಕುಗೊಂಡ ಬೆನ್ನಲ್ಲೇ ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್​ಕಿಂಗ್ಸ್​ ನಾಯಕ ಎಂಎಸ್​ ಧೋನಿ ರಾಂಚಿಯ ಫಾರ್ಮ್​ಹೌಸ್​​ ಸೇರಿಕೊಂಡಿದ್ದಾರೆ. ಅಲ್ಲಿ ಅವರು ನೆಚ್ಚಿನ ಬೈಕ್​, ಕಾರು, ನಾಯಿಗಳಲ್ಲದೆ ಹೊಸ ಗೆಳೆಯನಾಗಿರುವ ಕುದುರೆಯ ಜತೆಗೂ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಅವರು ಕುದುರೆಯನ್ನು ಮುದ್ದಿಸುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಧೋನಿ ಫಾರ್ಮ್​ಹೌಸ್​​ನಲ್ಲಿ ಕುದುರೆಯನ್ನು ಮುದ್ದಿಸುತ್ತಿರುವ ವಿಡಿಯೋವನ್ನು ಪತ್ನಿ ಸಾಕ್ಷಿ ಧೋನಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೆಲದ ಮೇಲೆ ಮಲಗಿಕೊಂಡಿರುವ ಕುದುರೆ ಚೇತಕ್​ಗೆ ಪ್ರೀತಿಯಿಂದ ಮಸಾಜು ಮಾಡಿರುವ ಧೋನಿ, ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿದ್ದಾರೆ.

ಪ್ಯಾಂಪರಿಂಗ್​ ಟೈಮ್​ ಎಂದು ಸಾಕ್ಷಿ ಧೋನಿ ಈ ವಿಡಿಯೋಗೆ ಕ್ಯಾಪ್ಶನ್​ ನೀಡಿದ್ದಾರೆ. ಹೊಸ ಕುದುರೆ ಚೇತಕ್​, ಧೋನಿ ಫಾರ್ಮ್​ಹೌಸ್​ ಸೇರಿಕೊಂಡ ವಿಡಿಯೋವನ್ನೂ ಸಾಕ್ಷಿ ಈ ಹಿಂದೆ ಹಂಚಿಕೊಂಡಿದ್ದರು. ಚೆನ್ನೈ ಸೂಪರ್​ಕಿಂಗ್ಸ್​ ಆಟಗಾರರೇ ಆಗಿರುವ ರವೀಂದ್ರ ಜಡೇಜಾ ಮನೆಯಲ್ಲಿ ಕುದುರೆಯನ್ನು ಸಾಕುತ್ತಿರುವ ಮತ್ತೋರ್ವ ಭಾರತೀಯ ಕ್ರಿಕೆಟಿಗರಾಗಿದ್ದಾರೆ. ಶಿಖರ್​ ಧವನ್​ ಈ ಹಿಂದೆ ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತ ಸುದ್ದಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net