ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ...

andre russel for web new
Published on

ನವದೆಹಲಿ: ಬಯೋಬಬಲ್ ವ್ಯಾಪ್ತಿಯಲ್ಲೂ ಕೋವಿಡ್-19 ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಇದೀಗ ಯುಎಇಯಲ್ಲಿ ಲೀಗ್ ಮುಂದುವರಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಈ ನಡುವೆ ಕೆಲ ವಿದೇಶಿ ಕ್ರಿಕೆಟಿಗರು ಬಿಡುವಿನಲ್ಲಿದ್ದಾರೆ. ಕೋಲ್ಕತ ನೈಟ್ ರೈಡರ್ಸ್‌ ತಂಡದ ಆಲ್ರೌಂಡರ್ ಆಂಡ್ರೆ ರಸೆಲ್ ಸೇರಿದಂತೆ ಕೆಲ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ರಸೆಲ್ ಪತ್ನಿ ಜೇಸೈಮ್ ಲೊರಾ ಮಾತ್ರ ಸಖತ್ ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಐಪಿಎಲ್ ಟೂರ್ನಿಗಳ ವೇಳೆ ರಸೆಲ್ ಪತ್ನಿ ತಪ್ಪದೇ ಭಾರತಕ್ಕೆ ಆಗಮಿಸುತ್ತಾರೆ. ಕೆಕೆಆರ್ ಜೆರ್ಸಿ ತೊಟ್ಟು ಪತಿ ಆಡುವ ತಂಡವನ್ನು ಬೆಂಬಲಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಲೊರಾ, ಪತಿ ಜತೆಗೆ ಪ್ರವಾಸದಲ್ಲಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲೊರಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಸೆಲ್ ಹಾಗೂ ಜೇಸೈಮ್ ಲೊರಾ ಜೋಡಿ 2014ರಲ್ಲಿ ಡೇಟಿಂಗ್ ಆರಂಭಿಸಿತು. ಡೇಟಿಂಗ್ ಆರಂಭಿಸಿದ ಮೂರು ವರ್ಷಗಳ ಬಳಿಕ 2017ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ 2020ರಲ್ಲಿ ಹೆಣ್ಣುಮಗು ಜನಿಸಿತು. ಅಮೆರಿಕದ ಮಿಯಾಮಿಯಲ್ಲಿ ಜನಿಸಿದ ಲೊರಾ, ತಮ್ಮ 19ನೇ ವಯಸ್ಸಿನಿಂದಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 3.70 ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ.

2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಸೆಲ್, ವೆಸ್ಟ್ ಇಂಡೀಸ್ ಪರ 49 ಟಿ20 ಹಾಗೂ 56 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇದುವರೆಗೂ 81 ಐಪಿಎಲ್ ಪಂದ್ಯಗಳನ್ನಾಡಿರುವ ರಸೆಲ್ 9 ಅರ್ಧಶತಕಗಳೊಂದಿಗೆ 1680 ರನ್ ಕಲೆಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net