ಪ್ರಶಸ್ತಿ ಸುತ್ತಿಗೇರಿದ ಸೇಂಟ್ ಲೂಸಿಯಾ ಜೌಕ್ಸ್

cpl for web
Published on

ತೌರಬ: ಸೇಂಟ್ ಲೂಸಿಯಾ ಜೌಕ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಸಂಪೂರ್ಣ ಏಕಪಕ್ಷೀಯವಾಗಿ ನಡೆದ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೇಂಟ್ ಲೂಸಿಯಾ ತಂಡ 10 ವಿಕೆಟ್‌ಗಳಿಂದ ಗಯಾನ ಅಮೆಜಾನ್ ವಾರಿಯರ್ಸ್‌ ತಂಡವನ್ನು ಸೋಲಿಸಿತು. ಗುರುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟ್ರಿನಿಬಾಗೋ ನೈಟ್ ರೈಡರ್ಸ್‌ ಹಾಗೂ ಸೇಂಟ್ ಲೂಸಿಯಾ ತಂಡಗಳು ಎದುರಾಗಲಿವೆ. ಲೀಗ್ ಹಂತದಲ್ಲಿ ಆಡಿದ 2 ಪಂದ್ಯಗಳಲ್ಲೂ ಟಿಕೆಆರ್ ಜಯ ದಾಖಲಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಗಯಾನ ಅಮೆಜಾನ್ ವಾರಿಯರ್ಸ್‌ ತಂಡ, ಸೇಂಟ್ ಲೂಸಿಯಾ ಬೌಲರ್‌ಗಳ ಅಬ್ಬರದ ದಾಳಿಗೆ ನಲುಗಿ 13.4 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸೇಂಟ್ ಲೂಸಿಯಾ ತಂಡ ವಿಕೆಟ್ ನಷ್ಟವಿಲ್ಲದೆ 4.3 ಓವರ್‌ಗಳಲ್ಲಿ 56 ರನ್ ಗಳಿಸಿ ಜಯ ದಾಖಲಿಸಿತು.

ಗಯಾನ ಅಮೆಜಾನ್ ವಾರಿಯರ್ಸ್‌: 13.4 ಓವರ್‌ಗಳಲ್ಲಿ 55 (ಹೆಮ್‌ರಾಜ್ 25, ಕಗ್ಗಿಲೀನ್ 12ಕ್ಕೆ 2, ರೋಸ್ಟನ್ ಚೇಸ್ 15ಕ್ಕೆ 2, ಜಹೀರ್ ಖಾನ್ 12ಕ್ಕೆ 2, ಮಾರ್ಕ್ ದೆಯಾಲ್ 2ಕ್ಕೆ 2), ಸೇಂಟ್ ಲೂಸಿಯಾ ಜೌಕ್ಸ್: 4.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 56 (ಕಾರ್ನ್‌ವಾಲ್ 32*, ಮಾರ್ಕ್ ದೆಯಾಲ್ 19*)

ಗುರುವಾರ ಫೈನಲ್ ಪಂದ್ಯ: ಟ್ರಿನಿಬಾಗೊ ನೈಟ್ ರೈಡರ್ಸ್- ಸೇಂಟ್ ಲೂಸಿಯಾ ಜೌಕ್ಸ್

ಪಂದ್ಯ ಆರಂಭ: ರಾತ್ರಿ: 7.30ಕ್ಕೆ (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net