ಸಚಿನ್ ಪುತ್ರಿ ಸಾರಾ ಜೊತೆ ಗಿಲ್- ಚಿಗುರೊಡೆಯಿತೇ ಪ್ರೇಮ ಎನ್ನುತ್ತಿರುವುದೇಕೆ ನೆಟ್ಟಿಗರು?

sara
Published on

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಗೆಲುವಿನ ನಾಗಾಲೋಟದಲ್ಲಿರುವ ಟೀಂ ಇಂಡಿಯಾ ಸೆಮಿಸ್ ತಲುಪಿದೆ. 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೂ, ಭಾರತ ಅಧಿಕೃತವಾಗಿ ಸೆಮೀಸ್ ತಲುಪಲಿಲ್ಲ. ಹೀಗಾಗಿ ಮತ್ತೊಂದು ಕುತೂಹಲಕಾರಿ ಹೋರಾಟಕ್ಕೆ ಸಿದ್ಧವಾಗಿದೆ. ಶ್ರೀಲಂಕಾ ವಿರುದ್ಧ ಗುರುವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಎರಡೂ ತಂಡಗಳು ಈಗಾಗಲೇ ಅಲ್ಲಿಗೆ ತಲುಪಿವೆ. ಆದರೆ, ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಯುವ ಆರಂಭಿಕ ಗಿಲ್ (ಶುಭ್‌ಮನ್ ಗಿಲ್) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಶುಭಮಾನ್ ಗಿಲ್ ಅವರು ತನ್ನ ಗೆಳತಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಜಿಯೋ ವರ್ಲ್ಡ್ ಪ್ಲಾಜಾ ಸಮಾರಂಭದಲ್ಲಿ ಕಾಣಿಸಿಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಬ್ಮನ್ ಗಿಲ್ ಕಪ್ಪು ಟಿ-ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿದ್ದರೆ, ಸಾರಾ ತೆಂಡೂಲ್ಕರ್ ಅವರು ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದರು. ಇದಕ್ಕಿಂತ ಹೆಚ್ಚಾಗಿ, ಅಭಿಮಾನಿಗಳು ಈ ಜೋಡಿಯ ಬಗ್ಗೆ ಮತ್ತೊಮ್ಮೆ ಕಾಮೆಂಟ್ ಗಳನ್ನು ಸುರಿಸುತ್ತಿದ್ದಾರೆ. ಇಬ್ಬರ ನಡುವೆ ಮತ್ತೆ ಲವ್ ಶುರುವಾಗಿದೆ ಎಂಬ ಕಾಮೆಂಟ್ ಗಳು ಬರುತ್ತಿವೆ.

ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಸಾರಾ ತೆಂಡೂಲ್ಕರ್ ತನ್ನ ಸ್ನೇಹಿತರೊಂದಿಗೆ ಹಾಜರಾಗಿದ್ದು, ಗಿಲ್ ಫೋರ್ ಹೊಡೆದಾಗ ಸಾರಾ ಚಪ್ಪಾಳೆ ತಟ್ಟುವ ಮತ್ತು ಜಿಗಿಯುವ ವೀಡಿಯೊಗಳು ವೈರಲ್ ಆಗಿದ್ದವು. ಈ ಹಿಂದೆ ಗಿಲ್-ಸಾರಾ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನುಸರಿಸುವ ಮೂಲಕ ಮತ್ತು ಅವರ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ, ಈ ಇಬ್ಬರ ಪ್ರಣಯದ ಸುದ್ದಿಗೆ ಬಲ ಬಂದಿದೆ. ಆದರೆ ಸ್ವಲ್ಪ ಸಮಯದ ನಂತರ ಅವರು ಬೇರ್ಪಟ್ಟಿದ್ದಾರೆ ಎಂಬ ವದಂತಿಗಳಿವೆ. ಆದರೆ ಇದೀಗ ಮತ್ತೊಮ್ಮೆ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net