

ಮುಂಬೈ: ದಿಗ್ಗಜ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ಗೆ ಮಾದರಿಯಾಗಿರುವ ಆಟಗಾರ. ಯುವ ಕ್ರಿಕೆಟಿಗರು ಅವರೆ ಸ್ಫೂರ್ತಿ. ಇದೀಗ ಲಾಕ್ಡೌನ್ನಿಂದ ಲಾಕ್ಆಗಿರುವ ಸಚಿನ್ ಆಗಿಂದಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರಿಂದ ಟೆನಿಸ್ ಆಡುವಾಗ ಮುಂಬೈ ಹೊಡೆತದ (ಫೋರ್ ಹ್ಯಾಂಡ್) ಬಗ್ಗೆ ಟಿಪ್ಸ್ ಕೇಳಿದ್ದಾರೆ. ಶುಕ್ರವಾರ ಟ್ವೀಟ್ ಮಾಡಿದ ಸಚಿನ್, ನನ್ನ ಫೋರ್ಹ್ಯಾಂಡ್ಗೆ ಏನಾದರೂ ಟಿಪ್ಸ್ ಇದ್ದರೆ ಹೇಳಿ ಎಂದು 47ವರ್ಷದ ಸಚಿನ್ ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ: ಚೀನಾ ಬ್ಯಾಡ್ಮಿಂಟನ್ ದಿಗ್ಗಜ ಲಿನ್ ಡ್ಯಾನ್ ವಿದಾಯ
20 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಹಾಗೂ ದಿಗ್ಗಜ ಸಚಿನ್ ತೆಂಡುಲ್ಕರ್ ಇಬ್ಬರು ಟೆನಿಸ್, ಕ್ರಿಕೆಟ್ನಲ್ಲಿ ಶ್ರೇಷ್ಠ ಆಟಗಾರರು. ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಫೆಡರರ್ 2020ರಿಂದ ಹೊರಗುಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. 2021ಕ್ಕೆ ಮತ್ತೆ ಟೆನಿಸ್ಗೆ ವಾಪಸಾಗುವುದಾಗಿ ಹೇಳಿದ್ದಾರೆ. ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ಸಚಿನ್ ತೆಂಡುಲ್ಕರ್, ಟೆನಿಸ್ ಆಡುವಾಗ ರೋಜರ್ಗೆ ತಮ್ಮಗಿದ್ದ ಅನುಮಾನ ಬಗೆಹರಿಸಿಕೊಳ್ಳಲು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ತಾವು ಟೆನಿಸ್ ಆಡುತ್ತಿರುವ 11 ಸೆಕೆಂಡ್ಗಳ ಫೋರ್ ಹ್ಯಾಂಡ್ ಹೊಡೆತದ ವಿಡಿಯೋ ಪ್ರಕಟಿಸಿ ಪ್ರಶ್ನೆ ಕೋಡಿದ್ದಾರೆ. ಇದು ಮಾಸ್ಟರ್ ಬ್ಲಾಸ್ಟರ್ಗೆ ಕ್ರೀಡೆ ಮೇಲಿರುವ ಆಸಕ್ತಿ ಬಗ್ಗೆ ಟ್ವಿಟರ್ನಲ್ಲಿ ಭಾರಿ ಮೆಚ್ಚುಗೆ ಪಾತ್ರವಾಗಿದೆ.
ಸಚಿನ್ ತೆಂಡುಲ್ಕರ್ 2013ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 100ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಸ್ವಿಜ್ ತಾರೆ ರೋಜರ್ ಫೆಡರರ್ ಕಳೆದ ಆಸ್ಟ್ರೆಲಿಯಾ ಓಪನ್ ಸೆಮಿಫೈನಲ್ನಲ್ಲಿ ವಿಶ್ವ ನಂ.1 ನೊವಾಕ್ ಜೋಕೊವಿಕ್ ಎದುರು ಸೋಲನುಭವಿಸಿದ್ದರು. ಬಳಿಕ ಕರೊನಾ ವೈರಸ್ ಭೀತಿಯಿಂದಾಗಿ ಬಳಿಕ ಯಾವುದೇ ಗ್ರಾಂಡ್ ಸ್ಲಾಂ ಟೂರ್ನಿನಿಗಳು ನಡೆದಿತ್ತು. ಫೋಬ್ಸ್ ಪಟ್ಟಿಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.