

ಚೆನ್ನೈ: ರುತುರಾಜ್ ಗಾಯಕ್ವಾಡ್(108) ಅವರ ಅಮೋಘ ಶತಕ, ಶಿವಂ ದುಬೆ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ 20 ಓವರ್ಗಳಲ್ಲಿ 210 ರನ್ಗಳನ್ನು ಕಲೆಹಾಕಿದ್ದು, ಲಕ್ನೋಗೆ ಗೆಲ್ಲಲು 211ರನ್ಗಳ ಬೃಹತ್ ಗುರಿ ನೀಡಿದೆ.
ಇಲ್ಲಿನ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 39ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 211 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಬಂದ ಸಿಎಸ್ಕೆಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ನಾಯಕ ರುತುರಾಜ್ ಜೊತೆಗೆ ಓಪನಿಂಗ್ ಮಾಡಲು ಬಂದ ಅಜಿಂಕಾ ರಹಾನೆ (1) ಬೇಗನೆ ರನ್ ಔಟ್ ಆದರು. ಇದರ ಹಿಂದೆಯೇ ಡೇರಿಲ್ ಮಿಚೆಲ್ (11), ರವೀಂದ್ರ ಜಡೇಜಾ (16) ವಿಕೆಟ್ ಕಳೆದುಕೊಂಡು ಮಧ್ಯಮ ಕ್ರಮಾಂಕ ಕುಸಿತ ಕಂಡಿತ್ತು.
ಲಕ್ನೋ ಪರ ಹೆನ್ರಿ 28ಕ್ಕೆ 1 ವಿಕೆಟ್, ಮೋಶಿನ ಖಾನ್ 50ಕ್ಕೆ1, ಯಶ್ ಠಾಕುರ್ 47ಕ್ಕೆ1 ವಿಕೆಟ್ ಪಡೆದರು.