ಜೂನ್​ 01ರಂದು IPL ಟ್ರೋಫಿಗೆ ಮುತ್ತಿಕ್ಕಿದ ಮೊದಲ ತಂಡವಿದು! ಆ ನಂತರ 2014ರಲ್ಲಿ....

ವಿಜಯವಾಣಿ - 2025-06-01T191809.890
Published on

IPL: ಐಪಿಎಲ್​ 18ನೇ ಆವೃತ್ತಿ ಅತ್ಯಂತ ರೋಚಕತೆಗೆ ತಿರುಗಿದ್ದು, ಬಹುತೇಕ ಪಂದ್ಯಗಳು ಕ್ರಿಕೆಟ್​ ಪ್ರೇಮಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಈ ಮಧ್ಯೆ ಸತತ ಅದ್ಭುತ ಆಲ್​ರೌಂಡ್ ಪ್ರದರ್ಶನದ ಮೂಲಕ 9 ವರ್ಷಗಳ ಬಳಿಕ ಐಪಿಎಲ್​ ಫೈನಲ್​ಗೆ ಲಗ್ಗೆಯಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 18 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ತನ್ನ ಚೊಚ್ಚಲ ಟ್ರೋಫಿ ಎತ್ತಿಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಸದ್ಯ ಇದೇ ಹಲವರ ಆಶಯವೂ ಆಗಿದೆ.

2008 ಆರ್​ಆರ್​

ಇಂದು (ಜೂ.01) ಐಪಿಎಲ್​ 18ನೇ ಆವೃತ್ತಿಯ ಕ್ವಾಲಿಫೈಯರ್​-2 ಪಂದ್ಯ ಪಂಜಾಬ್ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದ್ದು, ಗೆದ್ದ ತಂಡ ಫೈನಲ್​ನಲ್ಲಿ ಆರ್​ಸಿಬಿ ಎದುರು ಕಪ್​ಗಾಗಿ ಸೆಣಸಲಿದೆ. ಸೋತ ತಂಡ ಲೀಗ್​ನಿಂದ ಹೊರಬೀಳಲಿದೆ. ಇನ್ನು ಇದು ಒಂದೆಡೆಯಾದರೆ, ಮತ್ತೊಂದೆಡೆ ಇದೇ ದಿನದಂದು (ಜೂನ್​ 01) ಐಪಿಎಲ್​ ಉದ್ಘಾಟನಾ ಲೀಗ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡ, ಶೇನ್​ ವಾರ್ನ್​ ನಾಯಕತ್ವದಲ್ಲಿ ತಮ್ಮ ಚೊಚ್ಚಲ ಹಾಗೂ ಮೊದಲ ಆವೃತ್ತಿಯ ಟ್ರೋಫಿಯನ್ನು ಎತ್ತಿಹಿಡಿಯಿತು.

2014 ಕೆಕೆಆರ್​

ಆ ನಂತರ ಇದೇ ದಿನ 2014ರಲ್ಲಿ ಕೋಲ್ಕತ ನೈಟ್​ ರೈಡರ್ಸ್​ ತಂಡ ಎರಡನೇ ಬಾರಿಗೆ ಐಪಿಎಲ್​ ಟ್ರೋಫಿಯನ್ನು ಗೆದ್ದು ಬೀಗಿತ್ತು. ಈ ಎರಡೂ ಫ್ರಾಂಚೈಸಿಗಳು ಲೀಗ್ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ಕ್ಷಣಗಳ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿವೆ. 2008ರಲ್ಲಿ ಆರ್​ಆರ್​ಗೆ ಶೇನ್​ ವಾರ್ನ್​ ಕ್ಯಾಪ್ಟನ್ ಆಗಿದ್ದರೆ, 2014ರಲ್ಲಿ ಕೆಕೆಆರ್​ಗೆ ಗೌತಮ್​ ಗಂಭೀರ್​ ನಾಯಕನಾಗಿದ್ದರು. ಈ ಇಬ್ಬರು ತಮ್ಮ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಸಂಭ್ರಮದ ದಿನವಿದು ಎಂಬುದು ಐಪಿಎಲ್​ ಪ್ರಿಯರಿಗೆ ಸಂತಸದ ಸಂಗತಿ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net