ರಾಜಸ್ಥಾನ ವಿರುದ್ಧ ದಾಖಲೆಯ ಸೆಂಚುರಿ ಸಿಡಿಸಿದ ವಿರಾಟ್​ ಕೊಹ್ಲಿ

v
Published on

ಜೈಪುರ: ಐಪಿಎಲ್​ 17ನೇ ಸೀಸನ್​ನ 19ನೇ ಪಂದ್ಯದಲ್ಲಿ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಅತಿಥೇಯ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ 67 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಕೊಹ್ಲಿ ಸೆಂಚುರಿಯಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು. ಟಾಸ್ ಗೆದ್ದ ಅತಿಥೇಯ ರಾಜಸ್ಥಾನ್ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಚೇಸಿಂಗ್​ ಆಯ್ಕೆ ಮಾಡಿಕೊಂಡು ಆರ್​ಸಿಬಿಯನ್ನು ಮೊದಲು ಬ್ಯಾಟಿಂಗ್​ ಆಹ್ವಾನಿಸಿತ್ತು.

ಐಪಿಎಲ್​ನಲ್ಲಿ ಕೊಹ್ಲಿಗೆ ಇದು 8ನೇ ಶತಕವಾಗಿದೆ. ಐಪಿಎಲ್​ನಲ್ಲಿ ಅಧಿಕ ಶತಕ ಸಿಡಿಸಿದವರ ಪಟ್ಟಿಯಲ್ಲಿ ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ.  ರಾಜಸ್ಥಾನ ರಾಯಲ್ಸ್ ವಿರುದ್ದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲಸಿಸ್ ಸ್ಫೋಟಕ ಆರಂಭ ನೀಡಿದರು. ಡುಪ್ಲೆಸಿಸ್ ವಿಕೆಟ್ ಪತನದ ಬಳಿಕವೂ ಕೊಹ್ಲಿ ಅಬ್ಬರ ಮುಂದುವರಿಯಿತು. ಕೊಹ್ಲಿ ಪ್ರತಿ ಬೌಂಡರಿ, ಸಿಕ್ಸರ್‌ಗೆ ಅಭಿಮಾನಿಗಳು ಮನಸಾರೆ ಸಂಭ್ರಮಿಸಿದರು.

ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ಇಲ್ಲಿಯವರೆಗೆ ಉತ್ತಮ ಫಾರ್ಮ್‌ನಲ್ಲಿದೆ. ತಂಡವು 3 ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net