

DC vs RR: ನಿನ್ನೆ (ಏ.16) ದೆಹಲಿಯ ಆರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭರ್ಜರಿ ಪೈಪೋಟಿ ನೀಡಿ, ಐಪಿಎಲ್ 18ನೇ ಆವೃತ್ತಿಯ ಚೊಚ್ಚಲ ಸೂಪರ್ ಓವರ್ಗೆ ಸಾಕ್ಷಿಯಾಯಿತು. ಈ ಪಂದ್ಯದ ಕೊನೆಯ ಹಂತದಲ್ಲಿ ಆರ್ಆರ್ ಪಡೆ ಹೀನಾಯ ಸೋಲು ಅನುಭವಿಸಿತು.
ಎರಡು ರನ್ ಔಟ್ನಿಂದ ಸುಲಭ ಗೆಲುವು ಕಳೆದುಕೊಂಡ ಸಂಜು ಸಾಮ್ಸನ್ ಪಡೆ ನಾಲ್ಕು ವಿಕೆಟ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಂಡಿಯೂರಿತು. ಸೂಪರ್ ಓವರ್ಗೆ ತಲುಪಿದ ಈ ಪಂದ್ಯ ಬಹಳ ರೋಚಕತೆಗೆ ಸಾಕ್ಷಿಯಾಯಿತು. ಡೆಲ್ಲಿ ಕ್ಯಾಪಿಟಲ್ಸ್ಗೆ ಮಿಚೆಲ್ ಸ್ಟಾರ್ಕ್ ಪರಿಣಾಮಕಾರಿ ಬೌಲಿಂಗ್ ಗೆಲುವಿನ ಮಂತ್ರವಾಯಿತು. ರಾಜಸ್ಥಾನ ರಾಯಲ್ಸ್ ಸೋತ ರೀತಿಗೆ ಕಿಡಿಕಾರಿದ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಈ ಪಂದ್ಯ ನಿಜಕ್ಕೂ ಸೂಪರ್ ಓವರ್ಗೆ ಹೋಗುವಂತ ಪಂದ್ಯವಾಗಿತ್ತೇ? ಎಂದಿದ್ದಾರೆ.
"200 ರನ್ ದಾಖಲಿಸಿದ ತಂಡವೊಂದು ಈ ರೀತಿ ಆಡಿದ್ದು ನನಗೆ ನಿಜಕ್ಕೂ ಇಷ್ಟವಾಗಲಿಲ್ಲ. ಆಟದ ಪೂರ ಸಂಜು ಸಾಮ್ಸನ್ ಪಡೆ ಸಾಕಷ್ಟು ಎಡವಟ್ಟು ಮಾಡಿತು. ಗೆಲ್ಲಲು ಹಲವಾರು ಅವಕಾಶ ತಮ್ಮ ಕೈಯಲ್ಲೇ ಇದ್ದವು. ಆದರೆ, ಸರಿಯಾದ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳದೆ ಇದ್ದಿದ್ದೇ ಸೋಲಿಗೆ ಕಾರಣ. ಚೇಸಿಂಗ್ನ 20ನೇ ಓವರ್‌ನಲ್ಲಿ ಧ್ರುವ್ ಜುರೆಲ್ ಎರಡು ರನ್ ಓಡಬೇಕಿತ್ತು. ಆಗ ಸೂಪರ್ ಓವರ್ ಅವಶ್ಯಕತೆಯೇ ಇರುತ್ತಿರಲಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).