ಏಷ್ಯನ್​ ಗೇಮ್ಸ್​ ರೋಯಿಂಗ್​ ಸ್ಪರ್ಧೆಯಲ್ಲಿ ತಂದೆಯ ಸಾಧನೆ ಸರಿಗಟ್ಟಿದ ಪರ್ಮಿಂದರ್​ ಸಿಂಗ್​!

rowing web
Published on

ಹಾಂಗ್​ಝೌ: ಭಾರತದ ನಾವಿಕ ಪರ್ಮಿಂದರ್​ ಸಿಂಗ್​ ಏಷ್ಯನ್​ ಗೇಮ್ಸ್​​ನ ರೋಯಿಂಗ್​ ಸ್ಪರ್ಧೆಯ ಕ್ವಾಡ್ರಪಲ್​ ಸ್ಕಲ್ಸ್​ ವಿಭಾಗದಲ್ಲಿ ಕಂಚಿನದ ಪದಕ ಗೆಲ್ಲುವ ಮೂಲಕ ತಂದೆಯ ಸಾಧನೆಯನ್ನು ಸರಿಗಟ್ಟಿದ್ದಾರೆ.

23 ವರ್ಷದ ಪರ್ಮಿಂದರ್​ ಅವರ ತಂದೆ ಇಂದ್ರಪಾಲ್​ ಸಿಂಗ್​ ಕೂಡ 21 ವರ್ಷಗಳ ಹಿಂದೆ 2002ರ ಬೂಸಾನ್​ ಏಷ್ಯನ್​ ಗೇಮ್ಸ್​ನಲ್ಲಿ ಕಾಕ್ಸ್​ಲೆಸ್​ ಫೋರ್​ ವಿಭಾಗದಲ್ಲಿ ಕಂಚು ಗೆದ್ದ ಭಾರತ ತಂಡದ ಭಾಗವಾಗಿದ್ದರು.

"ಇದು ನಿಜಕ್ಕೂ ಅಪೂರ್ವ ಅನುಭವ. ತಂದೆಯಿಂದಾಗಿಯೇ ನಾನು ರೋಯಿಂಗ್​ನತ್ತ ಆಸಕ್ತಿ ತೋರಿದ್ದೆ ಮತ್ತು ಪದಕ ಗೆದ್ದಿದ್ದೇನೆ' ಎಂದು ಪರ್ಮಿಂದರ್​ ಹೇಳಿದ್ದಾರೆ. ಇಂದ್ರಪಾಲ್​ ಅವರು ಒಲಿಂಪಿಕ್ಸ್​ನ (2000) ರೋಯಿಂಗ್​ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯರೂ ಆಗಿದ್ದಾರೆ. ಈಗ ಅವರು ಭಾರತ ರೋಯಿಂಗ್​ ತಂಡದ ಕೋಚ್​ ಕೂಡ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net