More

    VIDEO: ಇಶ್​ ಸೋಧಿ ರನೌಟ್​ ಮಾಡಿ ವಾಪಸ್​ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!

    ಮೀರ್ಪುರ: ಬಾಂಗ್ಲಾದೇಶ ಮತ್ತು ಪ್ರವಾಸಿ ನ್ಯೂಜಿಲೆಂಡ್​ ತಂಡಗಳ ಶನಿವಾರ ನಡೆದ ಏಕದಿನ ಸರಣಿಯ 2ನೇ ಪಂದ್ಯ ಕ್ರೀಡಾಸ್ಫೂರ್ತಿಯ ಅಪೂರ್ವ ಕ್ಷಣಕ್ಕೆ ಸಾಯಾಯಿತು. ಭಾರಿ ವಿವಾದಕ್ಕೆ ಸಿಲುಕಬಹುದಾಗಿದ್ದ ನಡೆ ಅಂತಿಮವಾಗಿ ಕ್ರೀಡಾಸ್ಫೂರ್ತಿಯ ಗೆಲುವಾಗಿ ಬದಲಾಗುವುದರೊಂದಿಗೆ ಕ್ರಿಕೆಟ್​ ಪ್ರೇಮಿಗಳ ಮನಗೆದ್ದಿತು.

    ನಾನ್​&ಸ್ಟ್ರೆ$ಕರ್​ನಲ್ಲಿ ಬೌಲರ್​, ಬೌಲಿಂಗ್​ಗೆ ಮುನ್ನ ಮಾಡುವ ಔಟ್​ ಅಂದರೆ ಮಂಕಡಿಂಗ್​ ಈಗ ರನೌಟ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ನಿಯಮಾವಳಿಯಲ್ಲಿದೆ. ಆದರೂ ಬೌಲರ್​ ಈ ರೀತಿ ರನೌಟ್​ ಮಾಡಿದಾಗ ವಿವಾದಗಳು ಶುರುವಾಗುತ್ತವೆ. ಆದರೆ ಬಾಂಗ್ಲಾ&ಕಿವೀಸ್​ ಏಕದಿನ ಪಂದ್ಯದಲ್ಲಿ ನಡೆದಿದ್ದೇ ಬೇರೆ….

    ನ್ಯೂಜಿಲೆಂಡ್​ ಇನಿಂಗ್ಸ್​ನ 46ನೇ ಓವರ್​ನಲ್ಲಿ ಬಾಂಗ್ಲಾ ಬೌಲರ್​ ಹಸನ್​ ಮಹ್ಮುದ್​, ನಾನ್​&ಸ್ಟ್ರೆ$ಕರ್​ನಲ್ಲಿ ಬೇಗನೆ ಕ್ರೀಸ್​ ಬಿಟ್ಟ ಬ್ಯಾಟರ್​ ಇಶ್​ ಸೋಧಿಯನ್ನು ರನೌಟ್​ ಮಾಡಿದರು. ಅಂಪೈರ್​ ಮರಾಯಿಸ್​ ಎರಾಸ್ಮಸ್​ ಅದನ್ನು ತೃತೀಯ ಅಂಪೈರ್​ ಪರಿಶೀಲನೆಗೆ ತೆಗೆದುಕೊಂಡು ಹೋದಾಗ ಅವರು ಔಟ್​ ತೀರ್ಪು ಕೂಡ ನೀಡಿದರು. ಆಗ ಸೋಧಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಲಾರಂಭಿಸಿದರು. ಆ ಸಮಯದಲ್ಲಿ ನಿರ್ಧಾರವನ್ನು ಬದಲಾಯಿಸಿದ ಬಾಂಗ್ಲಾದೇಶದ ಹಂಗಾಮಿ ನಾಯಕ ಲಿಟನ್​ ದಾಸ್​, ಅಂಪೈರ್​ ಜತೆ ಚರ್ಚಿಸಿ ಸೋಧಿ ಅವರನ್ನು ಮತ್ತೆ ಬ್ಯಾಟಿಂಗ್​ಗೆ ಕರೆಸಲು ಮುಂದಾದರು. ಈ ವೇಳೆ ಬೌಲರ್​ ಹಸನ್​ ಮಹ್ಮುದ್​, ಜೋರಾಗಿ ಕೂಗಿ ಇಶ್​ ಸೋಧಿಯನ್ನು ವಾಪಸ್​ ಕರೆದರು. ಆಗ ಖುಷಿಯಿಂದಲೇ ಬಂದ ಇಶ್​ ಸೋಧಿ, ಬೌಲರ್​ ಹಸನ್​ ಮಹ್ಮುದ್​ರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದರು. ಈ ದೃಶ್ಯ ಕ್ರಿಕೆಟ್​ ಪ್ರೇಮಿಗಳ ಹೃದಯ ತುಂಬಿ ಬರುವಂತೆ ಮಾಡಿತು.

    ಪಂದ್ಯದಲ್ಲಿ ನ್ಯೂಜಿಲೆಂಡ್​ 86 ರನ್​ಗಳಿಂದ ಜಯಿಸಿತು. ನ್ಯೂಜಿಲೆಂಡ್​ 49.1 ಓವರ್​ಗಳಲ್ಲಿ 254 ರನ್​ಗೆ ಆಲೌಟ್​ ಆದರೆ, ಬಾಂಗ್ಲಾದೇಶ 41.1 ಓವರ್​ಗಳಲ್ಲಿ 168 ರನ್​ಗಳಿಗೆ ಸರ್ವಪತನ ಕಂಡಿತು. 35 ರನ್​ ಮತ್ತು 6 ವಿಕೆಟ್​ ಕಬಳಿಸಿ ಸರ್ವಾಂಗೀಣ ನಿರ್ವಹಣೆ ತೋರಿದ ಇಶ್​ ಸೋಧಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

    ವಿಶ್ವಕಪ್​ನಿಂದ ಚಾಹಲ್​ ಹೊರಕ್ಕೆ, ಪತ್ನಿ ಧನಶ್ರೀಗೆ ಸಿಕ್ಕಿತು ಚಾನ್ಸ್​!

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts