ಹಿಟ್​ಮ್ಯಾನ್​ ರೋಹಿತ್​ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್: ಮುಂಬೈ ಇಂಡಿಯನ್ಸ್ ಫ್ಯಾನ್ಸ್​ ಶಾಕ್​!

mi
Published on

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ನಿರ್ಧಾರ ಕ್ರಿಕೆಟ್ ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿರುವುದು ಗೊತ್ತೇ ಇದೆ. ತಂಡಕ್ಕೆ ಐದು ಪ್ರಶಸ್ತಿಗಳನ್ನು ನೀಡಿದ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿರುವುದು ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿತ್ತು. ಇದು ಫ್ರಾಂಚೈಸಿ ಮೇಲೆ ಸಾಕಷ್ಟು ಟೀಕೆಗೆ ಕಾರಣವಾಗಿತ್ತು.

ಇಂದು ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ಅನುಭವಿ ಆಟಗಾರ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಮ್ಮ ವೃತ್ತಿಜೀವನದಲ್ಲಿ ಬಹುತೇಕ ಎಲ್ಲಾ ಪಂದ್ಯಗಳನ್ನು ಆಡಿರುವುದಾಗಿ ಹೇಳಿದರು. ರೋಹಿತ್ ಶರ್ಮ ನಾಯಕತ್ವದಲ್ಲಿ ಯಶಸ್ಸು ಗಳಿಸಿದ್ದೇನೆ ಎಂದು ಸ್ಮರಿಸಿದರು. ರೋಹಿತ್ ಅವರ ನಾಯಕತ್ವದಲ್ಲಿ ಆಡಲು ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಹಿಟ್ ಮ್ಯಾನ್ ಜೊತೆ ಆಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ: ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಮುಂಬೈ ಇಂಡಿಯನ್ಸ್‌ಗೆ ಮರಳಿ ಬಂದಿರುವುದು ಸಂತಸ ತಂದಿದೆ. 2015ರಿಂದ ನನ್ನ ಪ್ರಯಾಣವೆಲ್ಲ ಮುಂಬೈನಲ್ಲಿ. ಮತ್ತೆ ಮುಂಬೈಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ನೆಚ್ಚಿನ ಮೈದಾನವಾದ ವಾಂಖೆಡೆಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.

ಮುಂಬೈ ನಾಯಕತ್ವ ಬದಲಾವಣೆ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ. ರೋಹಿತ್ ಶರ್ಮಾ ತಂಡದಲ್ಲಿ ಉಳಿಯಲಿದ್ದಾರೆ. ನನಗೆ ಅಗತ್ಯವಿದ್ದಾಗ ನನಗೆ ಸಹಾಯ ಮಾಡುತ್ತಾರೆ. ನನ್ನ ನಾಯಕತ್ವದಲ್ಲಿ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರಿಗೆ ಆಡಲು ತೊಂದರೆಯಾಗದಿರಬಹುದು. ಅವರ ಸಹಾಯದಿಂದ ತಂಡವನ್ನು ಮುನ್ನಡೆಸುತ್ತೇನೆ ಎಂದು ವಿವಾದಗಳಿಗೆ ತೆರೆ ಎಳೆದರು.

ರೋಹಿತ್ ಸಹಾಯ ಪಡೆಯುತ್ತೇನೆ: ನನಗೆ ಬೇಕಾದಾಗ ರೋಹಿತ್‌ ಅವರ ಸಹಾಯ ಪಡೆಯುತ್ತೇನೆ. ಅವರು ಟೀಂ ಇಂಡಿಯಾದ ನಾಯಕ. ಅವರ ನಾಯಕತ್ವದಲ್ಲಿ ನಾವು ಸಾಕಷ್ಟು ಯಶಸ್ಸು ಸಾಧಿಸಿದ್ದೇವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಏನು ಸಾಧಿಸಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅದನ್ನು ಮುಂದುವರಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಇಡೀ ವೃತ್ತಿಜೀವನವು ರೋಹಿತ್ ನಾಯಕತ್ವದಲ್ಲಿ ನಡೆಯಿತು. ಈ ಋತುವಿನಲ್ಲಿ ಅವರ ಕೈ ಯಾವಾಗಲೂ ನನ್ನ ಭುಜದ ಮೇಲೆ ಇರುತ್ತದೆ ಎಂದು ನನಗೆ ತಿಳಿದಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net