VIDEO | ಜಡೇಜಾ ಮಾಡಿದ್ದನ್ನು ಸಹಿಸದ ರೋಹಿತ್ ಶರ್ಮಾ! ಕ್ಯಾಪ್ ಎಸೆದು ಅಸಮಾಧಾನ

Untitled-design-_97_
Published on

ರಾಜ್​ಕೋಟ್​: ಇಂದು (ಜನವರಿ 15) ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲನೇ ದಿನದಂದು ಸರ್ಫರಾಜ್ ಖಾನ್ ನಾನ್‌ಸ್ಟ್ರೈಕರ್‌ನ ಕಡೆಯಲ್ಲಿ ರನೌಟ್ ಆದ ಬೆನ್ನಲ್ಲೇ ತೀವ್ರ ಬೇಸರ ಹೊರಹಾಕಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಡ್ರೆಸ್ಸಿಂಗ್ ರೂಮ್‌ನಲ್ಲಿ ಕ್ಯಾಪ್​ ಎಸೆಯುವ ಮೂಲಕ ತಮ್ಮ ಹತಾಶೆ ಹೊರಹಾಕಿದರು.

99 ರನ್ ಗಳಿಸಿ ಶತಕ ಬಾರಿಸುವ ನಿಟ್ಟಿನಲ್ಲಿ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಬಾಲನ್ನು ಮಿಡ್ ಆನ್ ಕಡೆಗೆ ಬೀಸಿದರು. ಇದನ್ನು ಗಮನಿಸಿದ ನಾನ್​ ಸ್ಟ್ರೈಕರ್​ನಲ್ಲಿದ್ದ ಸರ್ಫರಾಜ್ ಖಾನ್, ಸಿಂಗಲ್ ತೆಗೆಯಲು ನೋಡುತ್ತಿದ್ದರು. ಆದಾಗ್ಯೂ, ಜಡೇಜಾ ಒಂದೆರಡು ಹೆಜ್ಜೆಗಳನ್ನು ಮುಂದಿಟ್ಟು ನಂತರ ಹಿಂದೇಟು ಹಾಕಿದರು. ಕೂಡಲೇ ವಿಕೆಟ್​ಗೆ ಗುರಿಯಿಟ್ಟ ಮಾರ್ಕ್ ವುಡ್ ನೇರವಾಗಿ ಸ್ಟಂಪ್‌ಗೆ ಹೊಡೆಯುವ ಮೂಲಕ ಸರ್ಫರಾಜ್ ಔಟ್ ಮಾಡಿದರು.

ಈ ದೃಶ್ಯವನ್ನು ಡ್ರೆಸ್ಸಿಂಗ್ ರೂಮ್​ನಲ್ಲಿ ಕುಳಿತು ನೋಡುತ್ತಿದ್ದ ರೋಹಿತ್​, ಸರ್ಫರಾಜ್ ಖಾನ್ ಔಟ್​ ಆಗುತ್ತಿದ್ದಂತೆ ಕ್ಯಾಪ್ ಎಸೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಕ್ರಿಕೆಟ್ ಅಭಿಮಾನಿಗಳು ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net