ಸೀನಿಯರ್ಸ್​ ಜವಾಬ್ದಾರಿ ತೆಗೆದುಕೊಳ್ಳದಿದ್ದಾಗ... Virat Kohli ಫಾರ್ಮ್​ ಕುರಿತು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ Rohit Sharma

Virat Rohit
Published on

ಮುಂಬೈ: ತವರಿನ ಆತಿಥ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ತಂಡ (Team India) ಹೀನಾಯವಾಗಿ ಸೋತಿದ್ದು, ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇನ್ನೂ ಭಾರತದ ನೆಲದಲ್ಲಿ ಐತಿಹಾಸಿಕ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್​ ತಂಡವು ಹೊಸ ದಾಖಲೆಯನ್ನು ಬರೆದಿದ್ದು, ಭಾರತ ಮಾತ್ರ ಸರಣಿಯುದ್ದಕ್ಕೂ ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡ್ಡುತ್ತ ಬಂದಿದೆ. ಇನ್ನೂ ಸರಣಿ ಸೋಲಿಗೆ ಬ್ಯಾಟ್ಸ್​ಮನ್​ಗಳೇ ಪ್ರಮುಖ ಕಾರಣ ಎಂದು ದೂರಲಾಗಿದ್ದು, ನಾಯಕ ರೋಹಿತ್​ ಶರ್ಮ (Rohit Sharma) ಹಾಗೂ ವಿರಾಟ್​ ಕೊಹ್ಲಿಯ (Virat Kohli) ಫಾರ್ಮ್​ ತಂಡವನ್ನು ಚಿಂತೆಗೆ ದೂಡುವಂತೆ ಮಾಡಿದೆ.

ಸರಣಿಯ ಮೂರನೇ ಪಂದ್ಯದಲ್ಲಿ ಗೆಲ್ಲುವ ಅವಕಾಶ ಹೊಂದಿದ್ದರು ಅದನ್ನು ಉಪಯೋಗಿಸಿಕೊಳ್ಳದ ಭಾರತ ಸುಲಭ ಗುರಿ ಬೆನ್ನತ್ತಲಾರದೆ ಸೋಲೊಪ್ಪಿಕೊಂಡಿತ್ತು. ಒಂದೆಡೆ ಹಿರಿಯ ಆಟಗಾರರಾದ ಚೇತೇಶ್ವರ್​ ಪೂಜಾರ ಹಾಗೂ ಅಜಿಂಕ್ಯ ರಹಾನೆರನ್ನು ತಂಡದಿಂದ ಕೈ ಬಿಟ್ಟಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದ್ದು, ಮತ್ತೊಂದೆಡೆ ರೋಹಿತ್​ ಶರ್ಮ (Rohit Sharma) ಹಾಗೂ ವಿರಾಟ್​ ಕೊಹ್ಲಿ (Virat Kohli)​ ಹೆಚ್ಚಿನ ರನ್​​ ಗಳಿಕೆಗೆ ಒತ್ತು ನೀಡದಿರುವುದು ಮತ್ತೊಂದು ಕಾರಣ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ನಾಯಕ ರೋಹಿತ್​ ಶರ್ಮ (Rohit Sharma) ಮಾತನಾಡಿದ್ದು, ವಿರಾಟ್​ ಕೊಹ್ಲಿ (Virat Kohli) ಹೆಸರೇಳದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಈ ಬಗ್ಗೆ ಮಾತನಾಡಿರುವ ರೋಹಿತ್​ ಶರ್ಮ (Rohit Sharma), ಹಿರಿಯ ಆಟಗಾರರು ರನ್​ ಗಳಿಸದಿರುವುದು ಕಳವಳಕಾರಿ ವಿಷಯವಾಗಿದ್ದು, ಆದರೆ, ಈಗ ಅದು ಮುಗಿದ ಹೋದ ಅಧ್ಯಾಯವಾಗಿದೆ. ನಾಯಕನಾಗಿ, ತಂಡವಾಗಿ ನಾವೆಲ್ಲರೂ ಮುಂದಿನದನ್ನು ಎದುರುನೋಡಬೇಕು ಮತ್ತು ನಾವು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಹೇಗೆ ಕಮ್​ಬ್ಯಾಕ್​ ಮಾಡುತ್ತೇವೆ ಎನ್ನುವುದು ಮುಖ್ಯವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ (Border Gavaskar Trophy) ಏನಾದರೂ ವಿಶೇಷ ಸಾಧನೆ ಮಾಡಲು ನಮಗೆ ಅವಕಾಶವಿದೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಪರೋಕ್ಷವಾಗಿ ವಿರಾಟ್​ (Virat Kohli) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ 

ಇನ್ನೂ ಸರಣಿಯಲ್ಲಿ ರೋಹಿತ್​ ಶರ್ಮ (Rohit Sharma) ಹಾಗೂ ವಿರಾಟ್​ ಕೊಹ್ಲಿ (Virat Kohli) ಪ್ರದರ್ಶನ ನೋಡುವುದಾದರೆ ಇಬ್ಬರು ಆಟಗಾರರು ಮೂರು ಪಂದ್ಯಗಳಿಂದ 100 ರನ್​ ಕೂಡ ದಾಟಿಲ್ಲ. ಈ ಇಬ್ಬರ ಕಳಪೆ ಫಾರ್ಮ್​ ತಂಡವನ್ನು ಚಿಂತೆಗೆ ದೂಡಿದ್ದು, ಮುಂಬರುವ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಹೇಗೆ ಎದುರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net